ಈ ವೇಳೆ ವಿಪಕ್ಷ ನಾಯಕ ಆರ್.ಅಶೋಕ್ ಮಧ್ಯಪ್ರವೇಶಿಸಿ, ಹೇಗೆ ಲೆಕ್ಕ ಹಾಕಿದರೂ ಶೇ. 50ರಷ್ಟು ಗಡಿ ದಾಟಿಲ್ಲ. ಈ ಹಿಂದೆ ಹೇಳಿದ ಸಭಾಧ್ಯಕ್ಷರ ಆದೇಶಗಳಿಗೆ ಈ ಸರ್ಕಾರ ಯಾವುದೇ ಬೆಲೆ ನೀಡಿಲ್ಲ ಎಂದು ಹೇಳಿದರು. ಇದರಿಂದ ಅಸಮಾಧಾನಗೊಂಡ ಸಭಾಧ್ಯಕ್ಷರು, ಸಕಾರಣ ನೀಡುವವರೆಗೆ ಸದನ ನಡೆಸುವುದಿಲ್ಲ ಎಂದು ಕಲಾಪ ಮುಂದೂಡಿದ್ದಾರೆ.