ಸಚಿವ ಕೆ.ಎಂ.ಶಿವಲಿಂಗೇಗೌಡ ಬುಧವಾರ ಸಂಜೆ ಹಳ್ಳಿಮೈಸೂರು ಹೋಬಳಿ ಮಾರ್ಗವಾಗಿ ಅರಕಲಗೂಡು ತಾಲೂಕಿಗೆ ಆಗಮಿಸಿದರೂ, ಸಂಜೆಯಾದ ಹಿನ್ನೆಲೆಯಲ್ಲಿ ನಿಗದಿಯಾಗಿದ್ದ ಬರ ಅಧ್ಯಯನ ನಡೆಸದೆ ತೆರಳಿದರು.
ಸಚಿವರ ಭೇಟಿ ಹಿನ್ನೆಲೆಯಲ್ಲಿ ತಹಸೀಲ್ದಾರ್ ಕೆ.ಸಿ. ಸೌಮ್ಯಾ, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಕೆ.ಜೆ.ಕವಿತಾ, ಸಿಪಿಐ ವಸಂತಕುಮಾರ್, ಸಬ್‌ಇನ್‌ಸ್ಪೆಕ್ಟರ್ ಕಾವ್ಯಾ ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಮಧ್ಯಾಹ್ನ 3 ಗಂಟೆಯಿಂದಲೇ ತಾಲೂಕು ಗಡಿ ಭಾಗವಾದ ಜೋಡಿಗುಬ್ಬಿಯಲ್ಲಿ ಸಚಿವರ ಆಗಮನಕ್ಕಾಗಿ ಕಾದು ಸಂಜೆ ವೇಳೆಗೆ ಆಗಮಿಸಿದ ಸಚಿವರನ್ನು ಬರಮಾಡಿಕೊಂಡಿರು.
ನಂತರ ಪಟ್ಟಣದಲ್ಲಿ ಕಾರ್ಯಕರ್ತರು ಹಾಗೂ ಮುಖಂಡರು ಪಟಾಕಿ ಸಿಡಿಸಿ, ಹೂಮಳೆ ಸುರಿಸಿ ಅದ್ದೂರಿಯಾಗಿ ಸ್ವಾಗತ ಕೋರಿದರು. ಆದರೆ ಸಚಿವರು ಸಂಜೆ ವೇಳೆಗೆ ಆಗಮಿಸಿದ್ದ ಹಿನ್ನೆಲೆಯಲ್ಲಿ ಬೆಳಕು ಕಡಿಮೆಯಾದ ಕಾರಣ ಬರ ಪರಿಶೀಲನೆ ಹಾಗೂ ರೈತರೊಂದಿಗೆ ನೇರ ಸಂವಾದ ನಡೆಯಲಿಲ್ಲ.