ಸಚಿವ ಜಮೀರ್ ದೇಶಭಕ್ತಿ ಪ್ರಶ್ನಾತೀತ, ಬಿಜೆಪಿ-ಆರ್‌ಎಸ್‌ಎಸ್‌ನಿಂದ ಪಾಠ ಕಲಿಯಬೇಕಿಲ್ಲ ಎಂದ ಎಂಬಿಪಾ
ಸಚಿವ ಝಮೀರ್ ಅಹ್ಮದ್ ಖಾನ್-ಸಚಿವ ಎಂ.ಬಿ. ಪಾಟೀಲ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಹರ್‌ಘರ್ ತಿರಂಗಾ ಅಭಿಯಾನಕ್ಕೆ ಟೀಕೆ
ಆರ್‌ಎಸ್‌ಎಸ್ ಕಚೇರಿ ಮೇಲೆಯ ತಿರಂಗಾ ಹಾರಿಸಿರಲಿಲ್ಲ
ಬಿಜೆಪಿ-ಆರ್‌ಎಸ್‌ಎಸ್ ದೇಶದ ಸ್ವಾತಂತ್ರೃಕ್ಕಾಗಿ ಹೋರಾಡಿಲ್ಲ
ವಿಜಯಪುರ: ‘ಪಾಕಿಸ್ತಾನದ ಜೊತೆ ಯುದ್ಧಕ್ಕೆ ಕಳುಹಿಸಿದರೂ ನಾನು ಹೋರಾಡಲು ಸಿದ್ಧ ಎಂದು ಸಚಿವ ಜಮೀರ್ ಅಹ್ಮದ್ ಹೇಳಿದ್ದರು. ಅವರ ರಾಷ್ಟ್ರಪ್ರೇಮ ಪ್ರಶ್ನಾತೀತ’ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಪ್ರತಿಕ್ರಿಯಿಸಿದರು.
ಧ್ವಜಾರಹೋಣದ ಜವಾಬ್ದಾರಿಯಿಂದ ಹಿಂದೆ ಸರಿಯಲು ಅವಕಾಶ ಕಲ್ಪಿಸುವಂತೆ ಸಚಿವ ಜಮೀರ್ ಅಹ್ಮದ್ ಬರೆದಿದ್ದಾರೆನ್ನಲಾದ ಪತ್ರಕ್ಕೆ ಸಂಬಂಧಿಸಿದಂತೆ ಶನಿವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಸಚಿವ ಎಂ.ಬಿ. ಪಾಟೀಲರು ‘ಆ ಸಂಗತಿ ಬಗ್ಗೆ ಸ್ಪಷ್ಟತೆ ಇಲ್ಲ. ಹೀಗಾಗಿ ಆ ಕುರಿತು ಮಾತನಾಡಲಾರೆ’ ಎಂದರು.
ಬಿಜೆಪಿಗರಿಗೆ ವಿರೋದ ಮಾಡುವುದೊಂದೇ ಗೊತ್ತು. ಅವರಿಂದ ದೇಶಭಕ್ತಿಯ ಪಾಠ ಕಲಿಯಬೇಕಿಲ್ಲ. ಬಿಜೆಪಿಯವರು ಯಾರಾದರೂ ಸ್ವಾತಂತ್ರೃ ಹೋರಾಟದಲ್ಲಿ ಭಾಗವಹಿಸಿದ್ದಾರಾ? ದೆಹಲಿಯಲ್ಲಿ ಹೋಗಿ ನೋಡಿ ಸಾವಿರಾರು ಅಲ್ಪಸಂಖ್ಯಾತರು ಇತರೆ ವರ್ಗದವರು ದೇಶಕ್ಕಾಗಿ ಹೋರಾಡಿದವರ ಹೆಸರುಗಳಿವೆ. ಅದರಲ್ಲಿ ಒಬ್ಬನೇ ಒಬ್ಬ ಬಿಜೆಪಿಗರ ಹೆಸರಿಲ್ಲ. ಈಗ ಹರ್‌ಘರ್ ತಿರಂಗಾ ಅಭಿಯಾನ ಮಾಡುತ್ತಿರುವ ಬಿಜೆಪಿಗರು ಈ ಹಿಂದೆ ತಮ್ಮ ಆರ್‌ಎಸ್‌ಎಸ್ ಕಚೇರಿಯಲ್ಲಿಯೇ ರಾಷ್ಟ್ರ ಧ್ವಜ ಹಾರಿಸುತ್ತಿರಲಿಲ್ಲ. ಆರ್‌ಎಸ್‌ಎಸ್ ಹೆಡ್‌ಕ್ವಾಟರ್ಸ್‌ನಲ್ಲಿ 47 ವರ್ಷ ಧ್ವಜಾರೋಹಣ ಮಾಡಿರಲಿಲ್ಲ ಎಂದರು.
ಅಸಲಿಗೆ ಆರ್‌ಎಸ್‌ಎಸ್ ನೋಂದಣಿಯೇ ಆಗಿಲ್ಲ. ಈ ದೇಶದಲ್ಲಿ ಸಣ್ಣ ಶಾಲೆಯೂ ನೋಂದಣಿಯಾಗಬೇಕು. ಕಿರಾಣಿ ಅಂಗಡಿ, ಕಾಯಿಪಲ್ಯೆ ಮಾರುವವರು ಅಷ್ಟೇ ಏಕೆ ಚಪ್ಪಲಿ ಮಾರುವವರೂ ನೋಂದಣಿ ಮಾಡಿಕೊಳ್ಳಬೇಕು. ಆದರೆ, ಆರ್‌ಎಸ್‌ಎಸ್ ನೋಂದಣಿಯೇ ಆಗಿಲ್ಲ. ಜನಸಾಮಾನ್ಯರಿಗೊಂದು ನ್ಯಾಯ ಆರ್‌ಎಸ್‌ಎಗೆ ಒಂದು ನ್ಯಾಯವಾ? ಎಂದು ಹರಿಹಾಯ್ದರು.