

ಬೆಂಗಳೂರು:ಟಾಟಾ ಐಪಿಎಲ್ಟಿ-20 ಕ್ರಿಕೆಟ್ಪಂದ್ಯಗಳು ಬೆಂಗಳೂರಿನಲ್ಲಿ ಏ15ಹಾಗೂ 24ರಂದು ನಡೆಯಲಿದ್ದು ಪ್ರಯಾಣಿಕರಅನುಕೂಲಕ್ಕಾಗಿ ಏ.15ಮತ್ತು 24ರಂದುಬೆಂಗಳೂರು ಮೆಟ್ರೋ ರೈಲು ನಿಗಮನಿಯಮಿತವು (ಬಿಎಂಆರ್‌ಸಿಎಲ್)ಮೆಟ್ರೋ ರೈಲುಸೇವಾ ಅವಧಿಯನ್ನು ವಿಸ್ತರಿಸಿದೆ.
ಅಂದುಎಲ್ಲಾ ಟರ್ಮಿನಲ್ ನಿಲ್ದಾಣಗಳಿಂದಕೊನೆಯ ಮೆಟ್ರೋ ರೈಲು ಸೇವೆ ರಾತ್ರಿ11 ರಿಂದಬೆಳಗಿನ ಜಾವ 2ಗಂಟೆಯವರೆಗೆವಿಸ್ತರಿಸಲಾಗಿದೆ.ಚೆಲಘಟ್ಟ,ರೇಷ್ಮೆ ಸಂಸ್ಥೆಹಾಗೂ ಮಾದಾವರದಿಂದ ರಾತ್ರಿ12.45ಕ್ಕೆ,ವೈಟ್‌ಫೀಲ್ಡ್(ಕಾಡುಗೋಡಿ),ಬೊಮ್ಮಸಂದ್ರದಿಂದರಾತ್ರಿ 12.30ಕ್ಕೆಹಾಗೂ ಆರ್.ವಿ.ರಸ್ತೆ ಯಿಂದರಾತ್ರಿ 02.00ಕ್ಕೆಕೊನೇ ರೈಲು ಹೊರಡಲಿದೆ.
ಮಜೆಸ್ಟಿಕ್‌ನಿಂದನಾಲ್ಕು ದಿಕ್ಕುಗಳಿಗೆ ಮಧ್ಯರಾತ್ರಿ01:30ಕ್ಕೆಕೊನೆಯ ರೈಲು ಹೊರಡಲಿದೆ.
ಏ.18ರಂದು ಹಗಲು ಹಾಗೂರಾತ್ರಿ ಕ್ರಿಕೆಟ್ ಪಂದ್ಯನಡೆಯಲಿದ್ದು,ಆ ದಿನ ಮೆಟ್ರೋರೈಲು ಸೇವೆಗಳ ಅವಧಿಯಲ್ಲಿ ಯಾವುದೇವಿಸ್ತರಣೆ ಇರುವುದಿಲ್ಲ.
ನಮ್ಮಮೆಟ್ರೋ ಪ್ರಯಾಣವನ್ನು ಸುಗಮಗೊಳಿಸಲು,ಎರಡು ಮಾರ್ಗಗಳಪ್ರಯಾಣಕ್ಕಾಗಿ ನಮ್ಮ ಮೆಟ್ರೋಕ್ಯೂಆರ್ ಕೋಡ್‌ನ್ನು ಡಿಜಿಟಲ್ಐಪಿಎಲ್ ಪಂದ್ಯದ ಟಿಕೆಟ್‌ಗಳಲ್ಲಿಒಳಗೊಂಡಿರುತ್ತದೆ.
ಕಬ್ಬನ್ರಸ್ತೆ ಭಾಗದಿಂದ ಸ್ಟೇಡಿಯಂ ಬರುವಪ್ರೇಕ್ಷಕರು ಕಬ್ಬನ್ ಪಾರ್ಕ್ಮೆಟ್ರೋ ನಿಲ್ದಾಣ ಹಾಗೂ ಲಿಂಕ್ರಸ್ತೆ ಕಡೆಯಿಂದ ಬರುವ ಪ್ರೇಕ್ಷಕರುಎಂ.ಜಿ.ರಸ್ತೆಮೆಟ್ರೋ ನಿಲ್ದಾಣವನ್ನು ಬಳಸುವಂತೆಸೂಚಿಸಲಾಗಿದೆ.
ಪಂದ್ಯದದಿನದಂದು ಪ್ರೇಕ್ಷಕರಿಗೆಅನುಕೂಲವಾಗುವಂತೆ ಬಿಎಂಆರ್‌ಸಿಎಲ್ಹಲವು ಮೆಟ್ರೋ ನಿಲ್ದಾಣಗಳಲ್ಲಿಹೆಚ್ಚುವರಿ ಪಾರ್ಕಿಂಗ್ ವ್ಯವಸ್ಥೆಯನ್ನುಕಲ್ಪಿಸಿದೆ.