

ತ್ಯಾಮಗೊಂಡ್ಲು :
ಸ್ವತಂತ್ರ$್ಯ ದಿನಾಚರಣೆ ಎಂದರೆ ಧ್ವಜಾರೋಹಣ ಮಾತ್ರವಲ್ಲ, ಸ್ವಾತಂತ್ರ$್ಯಕ್ಕಾಗಿ ಪ್ರಾಣತೆತ್ತು ಹುತಾತ್ಮರಾದ ಸಾವಿರಾರು ಹೋರಾಟಗಾರರನ್ನು ನೆನಪಿಸಿಕೊಂಡು ಗೌರವ ಸಮರ್ಪಿಸಬೇಕು.
ಯೋಧರು ಅಂದು ಅನುಭವಿಸಿದ ಯಾತನೆ, ನೋವು ಸಂಕಟ, ಸಂಘಟನೆಯ ವಿಧಾನಗಳನ್ನು ಮಕ್ಕಳಿಗೆ ಮತ್ತು ಜನಸಾಮಾನ್ಯರಿಗೆ ತಿಳಿಸಿಕೊಡಬೇಕು ಎಂದು ಪ್ರಭಾರಿ ಪಿಡಿಒ ಧಮೇರ್ಂದ್ರ ಹೇಳಿದರು.
ಪಟ್ಟಣದ ಗ್ರಾಮ ಪಂಚಾಯಿತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗ್ರಾಪಂ ಅಧ್ಯಕ್ಷೆ ಸುಮಿತ್ರಾ ನಾಗೇಶ್ ಧ್ವಜಾರೋಹಣ ನೆರವೇರಿಸಿದರು. ಗ್ರಾಪಂ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಿವೃತ್ತಿ ಹೊಂದಿದ ಇಬ್ಬರು ಶಿಕ್ಷಕರನ್ನು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು. ವಿವಿಧ ಶಾಲೆಯ ಮಕ್ಕಳು ದೇಶಭಕ್ತಿಯ ಸಾಂಸತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಪ್ರಮುಖ ಬೀದಿಗಳಲ್ಲಿ ವಿವಿಧ ವೇಶ ಭೂಷಣ ಧರಿಸಿದ್ದ ಮಕ್ಕಳು ಬ್ಯಾಂಡ್ಸೆಟ್ ಸಮೇತ ಪಥ ಸಂಚಲನ ನಡೆಸಿದರು. ಗ್ರಾಪಂ ಉಪಾಧ್ಯಕ್ಷ ವಾಸುದೇವ್, ಸದಸ್ಯರಾದ ಉಮಾಹರೀಶ್, ಮಹಿಮಣ್ಣ, ಸುಜಿತ್, ಚಿಕ್ಕತಿಮ್ಮಯ್ಯ, ಟಿ.ಎಚ್.ಮಲ್ಲೇಶ್, ಪ್ರಹ್ಲಾದ್, ಉಷಾರಾಣಿ, ತುಳಸಿ, ಎಚ್.ಮಂಗಳಾ, ಶಶಿಕಲಾ, ರತ್ನಮ್ಮ, ವಾಸಿಮ್, ತಾಲಿಬ್, ಜಬೀನ್ ತಾಜ್, ಮೆಹಬೂಬ್ ಪಾಷಾ, ಸಲ್ಮಾ, ಆಶಾ, ಅಬ್ದುಲ್ ಖಾದರ್, ಮುಬೀನ್ ತಾಜ್, ಪಿಡಿಒ ಶೈಲಾ, ಮುಖಂಡರಾದ ಸಾದತ್ ಉಲ್ಲಾ, ನಾಗೇಶ್, ಜನೌಷಧ ಪ್ರದಿಪ್, ಹರೀಶ್, ಷಫಿ, ಎಜಾಜ್, ಆರಿಫ್, ಗ್ರಾಮಸ್ಥರು ಇದ್ದರು.