ಕೇಂದ್ರ ಸರ್ಕಾರದ ಘನ ತ್ಯಾಜ್ಯ ವಸ್ತುಗಳ ನಿಯಮಗಳು-2026 ರ ಅನ್ವಯ ಜಿಲ್ಲೆಯ ಎಲ್ಲ ಸಾರ್ವಜನಿಕರು, ಮನೆಗಳು ಹಾಗೂ ವ್ಯಾಪಾರೋದ್ಯಮಿಗಳು ತಮ್ಮ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಕಸವನ್ನು ಕಡ್ಡಾಯವಾಗಿ ನಾಲ್ಕು ವಿಭಾಗಗಳಾಗಿ ವಿಂಗಡಿಸಿ ನಗರಸಭೆಯ ಕಸ ಸಂಗ್ರಹಣಾ ವಾಹನಗಳಿಗೆ ನೀಡಬೇಕು. ಕಸವನ್ನು ಹಸಿ ತ್ಯಾಜ್ಯ, ಒಣ ತ್ಯಾಜ್ಯ, ಸ್ಯಾನಿಟರಿ ತ್ಯಾಜ್ಯ, ವಿಶೇಷ ಕಾಳಜಿ ತ್ಯಾಜ್ಯ ಎಂದು ಪ್ರತ್ಯೇಕಿಸಬೇಕಾಗುತ್ತದೆ. ಅಡುಗೆ ಮನೆಯ ತ್ಯಾಜ್ಯ, ತರಕಾರಿ, ಮಾಂಸದ ತ್ಯಾಜ್ಯ, ಹಣ್ಣು ಹೂವು, ಹಾಗೂ ಕೊಳೆಯುವ ವಸ್ತುಗಳನ್ನು ಹಸಿ ತ್ಯಾಜ್ಯದ ವಿಭಾಗದಲ್ಲೂ, ಪ್ಲಾಸ್ಟಿಕ್, ಬಟ್ಟೆ, ಕಬ್ಬಿಣ, ರಬ್ಬರ್ ಮತ್ತು ಮರದ ವಸ್ತುಗಳನ್ನು ಒಣ ತ್ಯಾಜ್ಯದ ವಿಭಾಗದಲ್ಲೂ ನೀಡಬೇಕು. ಡೈಪರ್ಸ, ಸ್ಯಾನಿಟರಿ ನ್ಯಾಪಕಿನ್ ಗಳಂತಹ ವಸ್ತುಗಳನ್ನು ಸ್ಯಾನಿಟರಿ ತ್ಯಾಜ್ಯ ಎಂದು ಪ್ರತ್ಯೇಕಿಸಬೇಕು. ಇನ್ನುಳಿದಂತೆ ಪೇಂಟ್ ಡಬ್ಬಗಳು, ಔಷಧ ಬಾಟಲಿಗಳು, ಇ ವೇಸ್ಟ್ , ಬಲ್ಬ್ , ಹಳೆಯ ಬ್ಯಾಟರಿ ಹಾಗೂ ಬಳಸಿದ ಸಿರಿಂಜ್ ಮತು ಬ್ಯಾಂಡೇಜ್‌ಗಳನ್ನು ವಿಶೇಷ ತ್ಯಾಜ್ಯದ ಅಡಿಯಲ್ಲಿ ನೀಡಲು ಸೂಚಿಸಲಾಗಿದೆ ಎಂದರು .