ಬೆಂಗಳೂರು ಉತ್ತರ ತಾಲೂಕಿನ ಮಾದಕನಾಯಕನಹಳ್ಳಿಯಲ್ಲಿ ಆಯೋಜಿಸಿದ್ದ ಎನ್ಡಿಪಿಎಸ್ ಮತ್ತು ಎನ್ಎಸ್ಕ್ಯೂ ಮಾದಕ ಔಷಧಗಳ ಮಾರಾಟ ಕುರಿತು ಜಾಗೃತಿ ಕಾರ್ಯಕ್ರಮವನ್ನು ಗ್ರಾಮಾಂತರ ಜಿಲ್ಲಾ ಸಹಾಯಕ ಔಷಧಿನಿಯಂತ್ರಕ ಗಣೇಶ್ಬಾಬು ಉದ್ಘಾಟಿಸಿದರು. ನಗರಸಭೆ ಆರೋಗ್ಯ ನಿರೀಕ್ಷಕಿ ಮಮತಾ, ಹಿರಿಯ ಔಷಧ ಪರಿವೀಕ್ಷಕಿ ವಿಭಾ ಇದ್ದರು.
Published on:
Copied
Follow Us
ನೆಲಮಂಗಲ : ವೈದ್ಯರ ಸಲಹಾ ಚೀಟಿಯಿಲ್ಲದೆ ಯಾರೊಬ್ಬ ಔಷಧ ವ್ಯಾಪಾರಿಗಳು ಮಾದಕ ದ್ರವ್ಯ ಔಷಧಗಳನ್ನು ಮಾಡಬಾರದು ಎಂದು ಗ್ರಾಮಾಂತರ ಜಿಲ್ಲಾ ಸಹಾಯಕ ಔಷಧಿನಿಯಂತ್ರಕ ಗಣೇಶ್ಬಾಬು ತಿಳಿಸಿದರು.
ಬೆಂಗಳೂರು ಉತ್ತರ ತಾಲೂಕಿನ ಮಾದಕನಾಯಕನಹಳ್ಳಿಯಲ್ಲಿ ಔಷಧ ವ್ಯಾಪಾರಿಗಳ ಸಂದಿಂದ ಎನ್ಡಿಪಿಎಸ್ ಮತ್ತು ಎನ್ಎಸ್ಕ್ಯೂ ಮಾದಕ ಔಷಧಗಳ ಮಾರಾಟ ಕುರಿತು ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಸ್ತುತ ಸಮಾಜದಲ್ಲಿ ಮಾದಕ ವಸ್ತುಗಳ ಮಾರಾಟ ಹಾಗೂ ಸೇವನೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಾಕಷ್ಟು ಮಂದಿ ಯುವಕರು ಮಾದಕ ವಸ್ತುಗಳಿಗೆ ಬಲಿಯಾಗುತ್ತಿದ್ದಾರೆ. ಸರ್ಕಾರ ಹಾಗೂ ಪೊಲೀಸ್ ಇಲಾಖೆ ಇಲಾಖೆ ಸೇರಿ ವಿವಿಧ ಇಲಾಖೆಗಳು ಅನಧಿಕೃತ ಮಾದಕ ವಸ್ತುಗಳ ಕಡಿವಾಣಕ್ಕೆ ಮುಂದಾಗಿದ್ದು, ಪ್ರತಿಯೊಬ್ಬರು ಸಹಕಾರಿಸಬೇಕಿದೆ ಎಂದರು.
ವೈದ್ಯಕಿಯ ಹಿತದೃಷ್ಟಿಯಿಂದ ಕೆಲವರಿಗೆ ಎನ್ಡಿಪಿಎಸ್ ಮತ್ತು ಎನ್ಎಸ್ಕ್ಯೂ ಮಾದಕ ಔಷಧಗಳ ಬೇಕಾಗಿದ್ದು, ವೈದ್ಯರ ಸಲಹಾ ಪತ್ರವಿದ್ದರೇ ಮಾತ್ರ ಮಾದಕ ದ್ರವ್ಯ ನೀಡುವ ಕಾರ್ಯ ಔಷಧ ವ್ಯಾಪಾರಿ ಮಾಡಬೇಕಿದೆ. ಜತೆಗೆ ಪ್ರತಿಯೊಬ್ಬ ಔಷಧ ಮಾರಾಟಗಾರರು ತಮ್ಮ ಅಂಗಡಿಯನ್ನು ಆಹಾರ ಮತ್ತು ಔಷಧ ಆಡಳಿತ (ಪುಡ್ ಆ್ಯಂಡ್ ಡ್ರಗ್ ಅಡ್ಮಿನಿಸ್ಟ್ರೆಶನ್)ನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳಬೇಕು ಎಂದರು.
ಮಾದನಾಯಕನಹಳ್ಳಿ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಭಾನುಪ್ರಕಾಶ್ ಮಾತನಾಡಿ, ಅಕ್ರಮ ಮಾದಕ ವಸ್ತು ಮಾರಾಟ ಕಾನೂನು ಬಾಹಿರವಾಗಿದೆ. ಈಗಾಗಲೇ ಇಲಾಖೆಯಿಂದ ಸಾಕಷ್ಟು ಅರಿವ ಮೂಡಿಸಲಾಗಿದೆ. ನಿಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಮಾದಕ ವಸ್ತುಗಳ ವ್ಯಸನಿಗಳು ಕಂಡು ಬಂದಲ್ಲಿ ತಕ್ಷಣ ಪೊಲೀಸ್ ಠಾಣೆಗೆ ಮಾಹಿತಿ ನೀಡುವ ಕಾರ್ಯ ಮಾಡಬೇಕು. ಜತೆಗೆ ಔಷಧ ವ್ಯಾಪಾರಿಗಳು ತಮ್ಮ ಅಂಗಡಿಯಲ್ಲಿ ಮಾರಾಟ ಮಾಡುವ ವೇಳೆ ಎಚ್ಚರಿಕೆ ವಹಿಸಬೇಕು ಎಂದರು.
ಕರ್ನಾಟಕ ಫಾರ್ಮಾ ವಿತರಕರ ಸಂದ ಅಧ್ಯಕ್ಷ ಜಯರಾಮ್, ಗ್ರಾಪಂ ಮಾಜಿ ಅಧ್ಯಕ್ಷ ಜಿ.ಜೆ.ಮೂರ್ತಿ, ನೆಲಮಂಗಲ ಔಷಧ ವರ್ತಕರ ಸಂದ ಅದ್ಯಕ್ಷ ವಾದಿರಾಜ, ಮಾದನಾಯಕನಹಳ್ಳಿ ಔಷಧ ವ್ಯಾಪಾರಿಗಳ ಸಂದ ಅಧ್ಯಕ್ಷ ಕೆ.ಸಿ.ಸತ್ಯಪ್ರಸಾದ್, ಕಾರ್ಯದರ್ಶಿ ತ್ಯಾಗರಾಜು ಇದ್ದರು.