ಡಾ.ಫ.ಗು. ಹಳಕಟ್ಟಿಯವರ ‘ಮುದ್ರಣ ಗುಮ್ಮಟ’ ಕೃತಿ ಲೋಕಾರ್ಪಣೆ ಮಾಡಿದ ಎಂ.ಬಿ.ಪಾಟೀಲ್

ವಚನ ಪಿತಾಮಹ ಡಾ..ಗು.ಹಳಕಟ್ಟಿಯವರ ಕುರಿತು ‘ಮುದ್ರಣ ಗುಮ್ಮಟ’ ಕೃತಿಯನ್ನು ಸಚಿವ ಎಂ.ಬಿ.ಪಾಟೀಲ್ ಬಿಡುಗಡೆ ಮಾಡಿದರು. ವಿವಿಧ ಗಣ್ಯರು ಉಪಸ್ಥಿತರಿದ್ದರು.
ವಚನ ಪಿತಾಮಹ ಡಾ..ಗು.ಹಳಕಟ್ಟಿಯವರ ಕುರಿತು ‘ಮುದ್ರಣ ಗುಮ್ಮಟ’ ಕೃತಿಯನ್ನು ಸಚಿವ ಎಂ.ಬಿ.ಪಾಟೀಲ್ ಬಿಡುಗಡೆ ಮಾಡಿದರು. ವಿವಿಧ ಗಣ್ಯರು ಉಪಸ್ಥಿತರಿದ್ದರು.
Published on

ಬೆಂಗಳೂರು:ಕನ್ನಡದ ಅಮೂಲ್ಯಸಾಹಿತ್ಯ ಪರಂಪರೆಯಲ್ಲಿ ವಚನಗಳಸ್ಥಾನ ಅಮೂಲ್ಯ.800 ವರ್ಷಗಳಿಂದತಾಳೆಗರಿ,ಹಸ್ತಪ್ರತಿಗಳಲ್ಲಿದ್ದವಚನಗಳನ್ನು ಸಂಗ್ರಹಿಸಿ ಅವುಗಳನ್ನುಕನ್ನಡಿಗರಿಗೆ ಸಮರ್ಪಕವಾಗಿತಲುಪಿಸಿದ ಕೀರ್ತಿ ಡಾ..ಗು.ಹಳಕಟ್ಟಿಯವರಿಗೆಸಲ್ಲುತ್ತದೆ ಎಂದು ಬೃಹತ್ ಕೈಗಾರಿಕೆಹಾಗೂ ಮೂಲ ಸೌಕರ್ಯ ಅಭಿವೃದ್ಧಿಸಚಿವ ಡಾ. ಎಂ.ಬಿ.ಪಾಟೀಲ ಹೇಳಿದರು.

ಕನ್ನಡ ಮುದ್ರಣಾಲಯಗಳಇತಿಹಾಸ ಸಂಶೋಧನಾ ಕೇಂದ್ರದವತಿಯಿಂದ ಬೆಂಗಳೂರಿನಲ್ಲಿ ‘ವಚನಪಿತಾಮಹ’ ಡಾ..ಗು.ಹಳಕಟ್ಟಿಅವರ ಕುರಿತಾದ ‘ಮುದ್ರಣ ಗುಮ್ಮಟ’ಕೃತಿಯನ್ನು ಲೋಕಾರ್ಪಣೆ ಮಾಡಿಮಾತನಾಡಿದರು.

ವಚನಗಳನ್ನು ಕೇವಲಸಂಗ್ರಹ ಮಾಡದ ಹಳಕಟ್ಟಿಯವರು,ವಚನಗಳನ್ನುಅಚ್ಚುಕಟ್ಟಾಗಿ ಮುದ್ರಿಸಿಜನಸಾಮಾನ್ಯರಿಗೆ ತಲುಪಿಸಲು ತಮ್ಮಮನೆಯನ್ನೇ ಮಾರಿ ಮುದ್ರಣ ಯಂತ್ರವನ್ನುಖರೀದಿಸಿದರು.ಆ ಮೂಲಕ ಬಸವನಾಡಿಗೆಮುದ್ರಣ ಯಂತ್ರಗಳನ್ನು ಪರಿಚಯಿಸಿದಕೀರ್ತಿ ಹಳಕಟ್ಟಿಯವರಿಗೆಸಲ್ಲುತ್ತದೆ.ಅವರ ತ್ಯಾಗ,ಸಾಹಿತ್ಯ ಸೇವೆಯನ್ನುಕೃತಿಯು ಸಮಗ್ರವಾಗಿ ಬಿಂಬಿಸಿದೆಎಂದು ತಿಳಿಸಿದ ಎಂ.ಬಿ.ಪಾಟೀಲ್,ಅರ್ಥಪೂರ್ಣಕೃತಿಯನ್ನು ಹೊರತಂದ ಸ್ವ್ಯಾನ್ಪ್ರಿಂಟರ್ಸ್‌ನ ಎಂ.ಕೃಷ್ಣಮೂರ್ತಿಅವರನ್ನು ಅಭಿನಂದಿಸಿದರು.

ಈ ಸಂದರ್ಭದಲ್ಲಿಅಖಿಲ ಭಾರತ ಮುದ್ರಣಕಾರರ ಒಕ್ಕೂಟದಮಾಜಿ ಅಧ್ಯಕ್ಷ ಸಿ.ಆರ್.ಜನಾರ್ಧನ್,ಕರ್ನಾಟಕ ರಾಜ್ಯಮುದ್ರಣಕಾರರ ಸಂಘದ ಅಧ್ಯಕ್ಷಬಿ.ಆರ್.ಅಶೋಕ್ ಕುಮಾರ್,ಅಖಿಲ ಭಾರತವೀರಶೈವ ಮಹಾಸಭಾದ ರಾಷ್ಟ್ರೀಯಕಾರ್ಯದರ್ಶಿ ಎಚ್.ಎಂ.ರೇಣುಕಾಪ್ರಸನ್ನ, ಕನ್ನಡಪರಹೋರಾಟಗಾರ ಪಾಲನೇತ್ರ,ಕರ್ನಾಟಕ ಇತಿಹಾಸಅಕಾಡೆಮಿಯ ಪ್ರಧಾನ ಕಾರ್ಯದರ್ಶಿಕೆ.ಎಲ್ರಾಜಶೇಖರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net