ಮಾಯೆ ಎಲ್ಲವನ್ನೂ ಮರೆಸುತ್ತದೆ; ರಾಘವೇಶ್ವರ ಶ್ರೀ ಪ್ರವಚನ

ರಾಮಚಂದ್ರಾಪುರ ಮಠದಲ್ಲಿ ನವರಾತ್ರ ನಮಸ್ಯಾ
Former Advocate General Ashok Haranahalli participated in the ‘Navaratra Namasya’ programme being held at the Girinagar branch of the Ramachandrapura Matha and received the blessings of Sri Raghaveshwara Bharati Swamiji.
ರಾಮಚಂದ್ರಾಪುರ ಮಠದ ಗಿರಿನಗರ ಶಾಖೆಯಲ್ಲಿ ನಡೆಯುತ್ತಿರುವ ‘ನವರಾತ್ರ ನಮಸ್ಯಾ’ ಕಾರ್ಯಕ್ರದಲ್ಲಿ ಮಾಜಿ ಅಡ್ವೋಕೇಟ್ ಜನರಲ್ ಅಶೋಕ್ ಹಾರನಹಳ್ಳಿ ಪಾಲ್ಗೊಂಡು ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಆಶೀರ್ವಾದ ಪಡೆದುಕೊಂಡರು.
Published on: 

ಬೆಂಗಳೂರು : ಮೋಹವೆಂಬುದು ದೇವಿಯ ಮಾಯೆಯಾಗಿದ್ದು, ಮಾಯೆಯು ಎಲ್ಲವನ್ನೂ ಮರೆಸಿಬಿಡುತ್ತದೆ ಎಂದು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.

ಗಿರಿನಗರದ ಶಾಖಾ ಮಠದಲ್ಲಿ ನಡೆಯುತ್ತಿರುವ ‘ನವರಾತ್ರ ನಮಸ್ಯಾ’ 8ನೇ ದಿನದ ಕಾರ್ಯಕ್ರಮದಲ್ಲಿ ಲಲಿತೋಪಾಖ್ಯಾನ ಪ್ರವಚನವನ್ನು ಮಾಡಿದರು.

ಸಮುದ್ರ ಮಥನವಾಗಿ ಅಮೃತ ಬರುವ ಮೊದಲು ವಿಷವೂ ಬರಬಹುದು. ಅದನ್ನು ಸ್ವೀಕರಿಸಲು ನಂಜುಂಡನಾದ ಶಿವ ಬೇಕು. ಅಮೃತ ಬಂದಾಗ ಅದು ಅಸುರರಿಗೆ ಸಿಗದಿರಲು ಮಹಾವಿಷ್ಣುವೂ ಬೇಕು. ದೇವ ದಾನವರು ಅಮೃತಕ್ಕಾಗಿ ಯುದ್ಧದಲ್ಲಿ ತೊಡಗಿದ್ದಾಗ ಪ್ರತ್ಯಕ್ಷವಾದ ಮೋಹಿನಿಯು ಕೇವಲ ತನ್ನ ಉಪಸ್ಥಿತಿಯ ಮಾತ್ರದಿಂದ ಯುದ್ಧವನ್ನು ನಿಲ್ಲಿಸುತ್ತಾಳೆ. ಮೋಹದ ಜಾಲಕ್ಕೆ ಸಿಕ್ಕ ರಾಕ್ಷಸರು ಅಮೃತದಿಂದ ವಂಚಿತರಾಗುತ್ತಾರೆ. ಸಮುದ್ರ ಮಥನ ಮಾಡುವಾಗ ರಾಕ್ಷಸರು ತಮಗೆ ವಾಸುಕಿಯ ತಲೆಯ ಭಾಗವೇ ಬೇಕು ಎಂದು ಪಡೆದುಕೊಳ್ಳುತ್ತಾರೆ. ಆದರೆ ಮಥನ ಮಾಡುವಾಗ ವಾಸುಕಿಯ ಬಾಯಿಯಿಂದ ಬಂದ ವಿಷದ ಪರಿಣಾಮವಾಗಿ ರಾಕ್ಷಸರ ತೇಜಸ್ಸು ಕ್ಷಯಿಸುತ್ತದೆ. ಹಾಗಾಗಿ ನಾವು ಜೀವನದಲ್ಲಿ ತಲೆ ಪ್ರತಿಷ್ಠೆ ಮಾಡಿದರೆ ಪತನ ಹೊಂದುತ್ತೇವೆ ಎಂದು ಶ್ರೀಗಳು ವಿವರಿಸಿದರು.

Sri Raghaveshwara Bharati Swamiji delivered a discourse at the Navaratri programme.
ನವರಾತ್ರಿ ಕಾರ್ಯಕ್ರಮದಲ್ಲಿ ಶ್ರೀರಾಘವೇಶ್ವರ ಭಾರತಿ ಸ್ವಾಮೀಜಿ ಪ್ರವಚನ ನೀಡಿದರು.

ಶಿವ ಹಾಗೂ ವಿಷ್ಣುವಿನ ಮಧ್ಯೆ ಯಾವುದೇ ಕಲಹವಿಲ್ಲ. ಆದರೆ ಶೈವರು ಹಾಗೂ ವೈಷ್ಣವರ ಮಧ್ಯೆ ಮಾತ್ರ ಕಲಹ ಮುಗಿಯುತ್ತಿಲ್ಲ. ದೇವರ ಹೆಸರಿನಲ್ಲಿ ಜಗಳವಾಡತ್ತಿರುವ ಬಗ್ಗೆ ಶ್ರೀಗಳು ಮಾರ್ಮಿಕವಾಗಿ ಪ್ರಸ್ತಾಪಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಅಡ್ವೊಕೇಟ್ ಜನರಲ್ ಅಶೋಕ್ ಹಾರನಹಳ್ಳಿ ದಂಪತಿಗಳು, ಅಶೋಕ ಭಟ್ ಉಪ್ಪುಂದ, ಪ್ರಭಾಕರ ಅಳಗೋಡು, ಹೇಮಂತ್ ಭಾಗ್ವತ್ ಮತ್ತಿತರರು ಪಾಲ್ಗೊಂಡಿದ್ದರು.

ಅ.20ಕ್ಕೆ ಶತಚಂಡಿಕಾ ಮಹಾಯಾಗ

ದೇವಿಯ ಉಪಾಸನೆಯ ಅಂಗವಾಗಿ ಮಂಗಳವಾರ (ಅ.20) ಶತಚಂಡಿಕಾ ಯಾಗ ಏರ್ಪಡಿಸಲಾಗಿದ್ದು, 100 ದೇವಿ ಸಪ್ತಶತೀ ಪಾರಾಯಣದ ಮೂಲಕ ಶತಚಂಡಿಕಾ ಯಾಗ ನೆರವೇರಲಿದೆ. ಮಹಾಯಾಗದಲ್ಲಿ 50 ಋತ್ವಿಜರು ಭಾಗವಹಿಸಲಿದ್ದು, ವಿಶೇಷ ಹೋಮ ಕುಂಡ ಸೇರಿದಂತೆ ಯಾಗದ ಸಿದ್ಧತೆಗಳು ನಡೆದಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net