ಶಿರಸಂಗಿಯಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ವಿಶ್ವಕರ್ಮ ಮಹಿಳೆಯರ ದ್ವೀತಿಯ ಚಿಂತನಾ ಸಮಾವೇಶವನ್ನು ಗಣ್ಯರು ಉದ್ಘಾಟಿಸಿದರು. ಡಾ.ರೇಖಾ ಕಂಬಾರ, ಡಾ.ವೀರೇಶ ಬಡಿಗೇರ, ಸಂಧ್ಯಾ ಆಚಾರ್ಯ, ಪಿ.ಬಿ.ಬಡಿಗೇರ ಇತರರಿದ್ದರು.
Published on:
Copied
Follow Us
ವಿಜಯವಾಣಿ ಸುದ್ದಿಜಾಲ ಶಿರಸಂಗಿ
ವಿಶ್ವಕರ್ಮ ಸಮುದಾಯದ ಮಹಿಳೆಯರಿಗೆ ಸಂಸ್ಕಾರ, ಕಲೆ ಹಾಗೂ ಸಂಸತಿಗಳು ಪೂರ್ವಜರಿಂದ ರಕ್ತಗತವಾಗಿ ಬಂದಿವೆ ಎಂದು ಪ್ರಾಧ್ಯಾಪಕಿ ಡಾ.ರೇಖಾ ಕಂಬಾರ ಹೇಳಿದರು.
ಕಾಳಿಕಾದೇವಿ ದೇವಸ್ಥಾನದ ಸಭಾಭವನದಲ್ಲಿ ಉತ್ತರ ಕರ್ನಾಟಕ ವಿಶ್ವಕರ್ಮ ಯುವ ಬರಹಗಾರರ ಮತ್ತು ಸಂಶೋಧಕರ ವೇದಿಕೆ, ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆ ಹಾಗೂ ವಿಶ್ವಕರ್ಮ ಪ್ರತಿಷ್ಠಾನದ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕರ್ನಾಟಕ ವಿಶ್ವಕರ್ಮ ಮಹಿಳೆಯರ ಚಿಂತನಾ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ವಿಶ್ವಕರ್ಮ ಸಮುದಾಯದ ಮಹಿಳೆಯರು ವಿವಿಧ ೇತ್ರಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಮಕ್ಕಳನ್ನು ಶೈಣಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ಸದೃಢಗೊಳಿಸುವ ಜತೆಗೆ ಮೂಲ ಕುಲ ಕಸುಬುಗಳನ್ನು ಪರಿಚಯಿಸಬೇಕು. ಮೂಲ ವೃತ್ತಿ ಮರೆಯದೆ, ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಅವುಗಳಿಗೆ ಹೊಸ ರೂಪ ಹಾಗೂ ಜೀವ ತುಂಬಬೇಕು ಎಂದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ವೀರೇಶ ಬಡಿಗೇರ ಮಾತನಾಡಿ, ಮಹಿಳೆಯರ ಸೃಜನಶೀಲತೆ ಕುಟುಂಬಕ್ಕೆ ಎಷ್ಟು ಮುಖ್ಯವೋ, ಸಮುದಾಯದ ಬೆಳವಣಿಗೆಯೂ ಅಷ್ಟೇ ಮುಖ್ಯ ಎಂದು ತಿಳಿಸಿದರು. ವಿವಿಧ ಗೋಷ್ಠಿಗಳಲ್ಲಿ ಚಿಂತನ&ಮಂಥನ: ಮೊದಲ ಗೋಷ್ಠಿಯಲ್ಲಿ ವಿಶ್ವಕರ್ಮ ಮಹಿಳಾ ಅನುಭಾವಿ "ಬಾಜಿಕಾಯಕದ ಬಸವಯ್ಯನ ಹೆಂಡತಿ ಕಾಳವ್ವ' ಕುರಿತು ಗೋವಾದ ಅಧ್ಯಾಪಕಿ ಡಾ.ಕಾಳುತಾಯಿ ನರಗುಂದ ಹಾಗೂ ಗುಡ್ಡಾಪುರ ದಾನಮ್ಮದೇವಿ ಕುರಿತು ಹಂಪಿಯ ಸಂಶೋಧನಾರ್ಥಿ ಭಾರತಿ ಬಡಿಗೇರ ವಿಷಯ ಮಂಡಿಸಿದರು. ನಿವೃತ್ತ ಶಿಕಿ ಮೀನಾ ಹಾಲೇಶ ಬಡಿಗೇರ ಅಧ್ಯತೆ ವಹಿಸಿದ್ದರು.
ಎರಡನೇ ಗೋಷ್ಠಿಯಲ್ಲಿ ವಿಶ್ವಕರ್ಮ ಮಹಿಳಾ ಸಾಧಕಿಯರೊಂದಿಗೆ ಸಂವಾದ ಜರುಗಿತು. ಸಾಹಿತ್ಯ&ಸಂಸತಿ, ಕಾನೂನು, ಶಿಣ, ವೈದ್ಯಕಿಯ, ಉದ್ಯಮ, ಮಹಿಳಾ ಸಂಟನೆ, ಸಮಾಜ ಸೇವೆ, ಲಲಿತಕಲೆ, ಸಾರ್ವಜನಿಕ ಸೇವೆ, ಗೃಹಿಣಿಯರ ಪಾತ್ರ ಹಾಗೂ ಸಂಶೋಧನೆ ಸೇರಿದಂತೆ ವಿವಿಧ ೇತ್ರಗಳಲ್ಲಿ ಸಾಧನೆಗೈದ ಮಹಿಳೆಯರು ಅನುಭವ ಹಂಚಿಕೊಂಡರು.
ಮೂರನೇ ಗೋಷ್ಠಿಯಲ್ಲಿ ಉಡುಪಿಯ ಸಂಟಕಿ ಸಂಧ್ಯಾ ಆಚಾರ್ಯ ಅಧ್ಯತೆಯಲ್ಲಿ "ಭವಿಷ್ಯದ ಯೋಜನೆಗಳು ಹಾಗೂ ಯೋಚನೆಗಳ' ಕುರಿತು ಚಿಂತನ&ಮಂಥನ ನಡೆಯಿತು. ಕನ್ನಡ ವಿಶ್ವವಿದ್ಯಾಲಯದ ಸಂಗೀತ ಮತ್ತು ನೃತ್ಯ ವಿಭಾಗದ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರಿಂದ ಹಿಂದೂಸ್ತಾನಿ ಸಂಗೀತ ಗಾಯನ ಕಾರ್ಯಕ್ರಮ ಜರುಗಿತು.
ಬಸವರಾಜ ಬಡಿಗೇರ ಸ್ವಾಗತಿಸಿದರು. ಸಂಸ್ಥೆ ಪದಾಧಿಕಾರಿಗಳು, ವಿವಿಧ ಜಿಲ್ಲೆಯ ಸಮುದಾಯದ ಮಹಿಳೆಯರು ಪಾಲ್ಗೊಂಡಿದ್ದರು.