

ಆಳಂದ: ಪವಾಢ ಪುರುಷ ಶ್ರೀ ಸಿದ್ಧಾರೂಢ ಶರಣರು ಹಾಗೂ ಹಿಂದಿನ ಮಹಾಪುರುಷರು ತೋರಿಸಿಕೊಟ್ಟ ಸನ್ಮಾರ್ಗ, ಭಕ್ತಿ, ಶ್ರದ್ಧೆ, ಮತ್ತು ಸೇವಾ ಪರಂಪರೆಯನ್ನು ಮುಂದಿನ ಪೀಳಿಗೆಗೂ ತಲುಪಿಸುವ ಕೆಲಸ ಆಗಬೇಕು ಎಂದು ಶರಣ ಮಂಟಪದ ಶ್ರೀ ಚನ್ನಬಸವ ಪಟ್ಟದ್ದೇವರು ಸ್ವಾಮೀಜಿ ನೀಡಿದರು. ಶರಣ ನಗರದಲ್ಲಿರುವ ಸದ್ಗುರು ರೇವಣಸಿದ್ಧ ಶಿವ ಶರಣ ಮಂಟಪದಲ್ಲಿ ಬುಧವಾರ ಹಮ್ಮಿಕೊಂಡಿದ್ದ 20ನೇ ವರ್ಷದ ಜಪ ಯ ಸಮಾರೋಪ ಸಮಾರಂಭ ಹಾಗೂ 1500 ಮುತೆದೆಯರಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಸಿದ್ಧಾರೂಢರು ಹಾಕಿಕೊಟ್ಟ ಅಧ್ಯಾತ್ಮ ಹಾಗೂ ಮಾನವೀಯತೆಯ ಮಾರ್ಗ ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆದಾಗ ಮಾತ್ರ ಬದುಕು ಪಾವನವಾಗುತ್ತದೆ ಎಂದರು. ಅಕ್ಕಲಕೋಟದ ಶ್ರೀ ಚಿಕ್ಕ ರಾಮಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು. ಕಮಿಟಿ ಅಧ್ಯ ಸೂರ್ಯಕಾಂತ ತಟ್ಟಿ ಅಧ್ಯತೆ ವಹಿಸಿದ್ದರು. ಅಕ್ಕನ ಬಳಗದ ಅಧ್ಯಕ್ಷ ಮಹಾದೇವಿ ಜೆ., ಪ್ರಮುಖರಾದ ಈರಮ್ಮ ತಟ್ಟಿ, ಲಿಂಗಮ್ಮ ದುದಗಿ, ಮಲ್ಲಮ್ಮ ಗುಳೇದಗುಡ್ಡ, ಪಾರ್ವತಿ ಇಟಮಾಳೆ, ಶ್ರೀಶೈಲ ಉಳ್ಳೆ, ವೀರಭದ್ರ ದುದಗಿ, ಭೀಮಣ್ಣ ಶಟಗುಂಡೆ, ರಾಜಶೇಖರ ತಟ್ಟಿ ಇತರರಿದ್ದರು.