ಮಹನೀಯರ ಆದರ್ಶ ನಮಗೆ ಮಾರ್ಗದರ್ಶನವಾಗಲಿ

ಶಾಲಾ ಮಕ್ಕಳಿಂದ ಗಣ್ಯರು ಧ್ವಜವಂದನೆ ಸ್ವೀಕರಿಸಿದರು.
ಶಾಲಾ ಮಕ್ಕಳಿಂದ ಗಣ್ಯರು ಧ್ವಜವಂದನೆ ಸ್ವೀಕರಿಸಿದರು.
Published on

ಹುಣಸೂರು:

ದೇಶದ ಸರ್ವತೋಮುಖ ಅಭಿವೃದ್ಧಿಯಲ್ಲಿ ಯುವಸಮೂಹದ ಪಾತ್ರ ಬಹುಮುಖ್ಯವಾಗಿದೆ ಎಂದು ಶಾಸಕ ಜಿ.ಡಿ.ಹರೀಶ್‌ಗೌಡ ಅಭಿಪ್ರಾಯಪಟ್ಟರು.


ನಗರದ ಮುನೇಶ್ವರ ಕಾವಲ್ ಮೈದಾನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಸ್ವಾತಂತ್ರುೃತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಅಭಿವೃದ್ಧಿ ಮತ್ತು ಕರ್ತವ್ಯ ನಿರ್ವಹಣೆ ಕೇವಲ ಜನಪ್ರತಿನಿಧಿಗಳು ಮತ್ತು ಅಧಿಕಾರಿ ವರ್ಗದ ಜವಾಬ್ದಾರಿ ಎನ್ನುವ ಮನೋಭಾವವನ್ನು ನಾವೆಲ್ಲರೂ ತೊರೆಯಬೇಕು. ಅದರಲ್ಲೂ ಮುಖ್ಯವಾಗಿ ಯುವಸಮೂಹ ಈ ನಿಟ್ಟಿನಲ್ಲಿ ಹೆಚ್ಚು ಕಾರ್ಯಪ್ರವೃತ್ತರಾಗಬೇಕಿದೆ ಎಂದು ಸಲಹೆ ನೀಡಿದರು.


ಗಾಂಧೀಜಿ, ಡಾ. ಅಂಬೇಡ್ಕರ್ ಅವರಂತಹ ಮಹನೀಯರ ಜೀವನಾದರ್ಶಗಳು ನಮಗೆ ಮಾರ್ಗದರ್ಶನವಾಗ ಬೇಕಿದೆ. ಹುಣಸೂರು ನೆಲದಲ್ಲಿ ಹುಟ್ಟಿ ರಾಜ್ಯದ ಮುಖ್ಯಮಂತ್ರಿಯಾಗಿ ಕ್ರಾಂತಿಕಾರಕ ಆಡಳಿತ ನೀಡಿದ ದೇವರಾಜ ಅರಸು ನಮ್ಮ ಆದರ್ಶವಾಗಬೇಕು. ಕ್ರಾಂತಿಕಾರಿ ಅಭಿವೃದ್ಧಿಯಾಗಬೇಕೆಂಬ ಯುವಸಮೂಹದ ಬಯಸುತ್ತಿರುವುದು ಸಹಜ. ಅದಕ್ಕೆ ತಕ್ಕಂತೆ ದೇಶದ ಅಭಿವೃದ್ಧಿಯಲ್ಲಿ ಪ್ರತಿಯೊಬ್ಬ ಪ್ರಜೆಯ ಪಾತ್ರವೂ ಬಹುಮುಖ್ಯ ವಹಿಸುವಂತಾಗಬೇಕು ಎಂದರು.


ಉಪವಿಭಾಗಾಧಿಕಾರಿ ಮಂಜುನಾಥ್ ದಿನಾಚರಣೆ ಮಹತ್ವವನ್ನು ತಿಳಿಸಿದರು. ತಹಸೀಲ್ದಾರ್ ಜೆ.ಮಂಜುನಾಥ್, ಡಿವೈಎಸ್‌ಪಿ ರವಿ, ಬಿಇಒ ಕಾಳನಾಕ, ಪೌರಾಯುಕ್ತೆ ಕೆ.ಮಾನಸ, ಮುಖಂಡರಾದ ಸತೀಶ್ ಪಾಪಣ್ಣ, ಹರವೆ ಶ್ರೀಧರ್, ಕೃಷ್ಣರಾಜ ಗುಪ್ತ, ಎಸ್.ಶರವಣ, ಅಸ್ವಾಳ್ ಕೆಂಪೇಗೌಡ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಚ್.ಪಿ.ಅಮರನಾಥ್, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸದಸ್ಯರಾದ ಪಿ.ಆರ್.ರಾಚಪ್ಪ, ಎಸ್.ಜಯರಾಂ ಇತರರು ಇದ್ದರು.


ವಿದ್ಯಾರ್ಥಿಗಳು ನಡಸಿಕೊಟ್ಟು ಪಥಸಂಚಲನ, ರಾಷ್ಟ್ರಪ್ರೇಮ ಬಿಂಬಿಸುವ ಗೀತೆಗಳಿಗೆ ಸಮೂಹ ನೃತ್ಯ ಕಾರ್ಯಕ್ರಮ ಗಮನ ಸೆಳೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net