ರೈತರ ಸುಟ್ಟ ಟಿಸಿಗಳ ಬದಲಾವಣೆ ಶೀಘ್ರಗತಿಯಲ್ಲಾಗಲಿ

ಬಸವನಬಾಗೇವಾಡಿ ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ  ಕಂದಾಯ ಉಪವಿಭಾಗಾಧಿಕಾರಿ ಗುರುನಾಥ ದಡ್ಡೆವರಿಗೆ ರೈತರ ಸುಟ್ಟ ಟಿಸಿಗಳ ಬದಲಾವಣೆ ಶೀಘ್ರಗತಿ ನೀಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಮನವಿ ಪತ್ರವನ್ನು ಸಲ್ಲಿಸಿದರು. ಶ್ರೀಶೈಲ ಮದ್ದರಕಿ, ಮುತ್ತಯ್ಯ ಪೂಜಾರಿ ಮತ್ತಿತರರಿದ್ದರು.
ಬಸವನಬಾಗೇವಾಡಿ ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ಕಂದಾಯ ಉಪವಿಭಾಗಾಧಿಕಾರಿ ಗುರುನಾಥ ದಡ್ಡೆವರಿಗೆ ರೈತರ ಸುಟ್ಟ ಟಿಸಿಗಳ ಬದಲಾವಣೆ ಶೀಘ್ರಗತಿ ನೀಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಮನವಿ ಪತ್ರವನ್ನು ಸಲ್ಲಿಸಿದರು. ಶ್ರೀಶೈಲ ಮದ್ದರಕಿ, ಮುತ್ತಯ್ಯ ಪೂಜಾರಿ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕರವೇ ಕಾರ್ಯಕರ್ತರು ಆಗ್ರಹ
  • ಕಂದಾಯ ಉಪ ವಿಭಾಗಾಧಿಕಾರಿಗೆ ಮನವಿ
ಬಸವನಬಾಗೇವಾಡಿ: ಹೆಸ್ಕಾಂ ವಿಭಾಗದ ಅಧಿಕಾರಿಗಳು ಅನಧಿಕೃತವಾಗಿ ಬಫರ್ ಸ್ಟಾಕ್ ಟಿ.ಸಿ ದುರುಪಯೋಗ ಮಾಡಿಕೊಂಡಿರುವುದರಿಂದ ರೈತರ ಕೃಷಿ ಚಟುವಟಿಕೆ ಪಂಪ್ ಸೆಟ್‌ಗಳಿಗೆ ತೊಂದರೆ ಆಗುತ್ತಿದೆ. ಕೆಇಆರ್‌ಸಿ ಎಸ್‌ಒಪಿ ನಿಯಮ ಉಲ್ಲಂಘನೆ ಮಾಡಿರುವ ಅವರ ಮೇಲೆ ಕ್ರಮ ಜರುಗಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಕಂದಾಯ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.
ಬುಧವಾರ ಪಟ್ಟಣದ ಮಿನಿ ವಿಧಾನಸೌಧದ ತಹಶೀಲ್ದಾರ್ ಕಚೇರಿ ಬಳಿ ಜಮಾಯಿಸಿದ ಕರವೇ ಕಾರ್ಯಕರ್ತರು ಹಾಗೂ ರೈತರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ರಾಜ್ಯ ಸಂಘಟನಾ ಕಾರ್ಯದರ್ಶಿ ಅಶೋಕ ಹಾರಿವಾಳವರು ಮಾತನಾಡಿ, ಅಖಂಡ ಬಸವನಬಾಗೇವಾಡಿ, ಮುದ್ದೇಬಿಹಾಳ ತಾಲೂಕಿನ ವ್ಯಾಪ್ತಿಯ ಬರುವ ಹೆಸ್ಕಾಂ ಉಪವಿಭಾಗದಲ್ಲಿನ ಹಳ್ಳಿಗಳಲ್ಲಿ ರೈತರ ಟ್ರಾನ್ಸ್‌ಫಾರ್ಮ್‌ಗಳು (ಟಿಸಿ)ಸುಟ್ಟು ಹೋಗಿ 20 ದಿನಗಳು ಗತಿಸಿ, ಇನ್ನು ಟಿಸಿ ನೀಡಿಲ್ಲ.
ಬೆಳೆಗಳು ಸಂಪೂರ್ಣವಾಗಿ ಒಣಗುತ್ತಿವೆ. ಈಗಾಗಲೇ ಮಳೆ ಕೊರತೆಯಿಂದ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಈ ವಿಷಯವಾಗಿ ತಾಳಿಕೋಟೆ ಹಾಗೂ ಮುದ್ದೇಬಿಹಾಳ ಮತ್ತು ನಿಡಗುಂದಿ ರೈತ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಹೇಳಿದರು.
ಈ ಕುರಿತು ಹೆಸ್ಕಾಂ ಇಂಜಿನಿಯರ್ ಸಿದ್ಧರಾಮ ಬಿರಾದಾರವರ ಗಮನಕ್ಕೆ ತಂದರು ಅವರು ಕೆಲಸ ಮಾಡದೆಯೇ ರೈತರ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಅವರ ಮೇಲೆ ಕ್ರಮ ಜರುಗಿಸುವಂತೆ ಒತ್ತಾಯಿಸಿದರು.
ಬಸವನಬಾಗೇವಾಡಿ ಹೆಸ್ಕಾಂ ಉಪವಿಭಾಗದ ಎಲ್ಲ ತಾಲೂಕುಗಳ ಅಂಗಡಿಗೆ 150 ಬದಲಿ
ಟ್ರಾನ್ಸ್‌ಫಾರ್ಮ್‌ರ್‌ಗಳನ್ನು ಕಂಪನಿಯ ಬೇರೆ ಬೇರೆ ಉಗ್ರಾಣಗಳಿಂದ ತಕ್ಷಣ ಬಸವನಬಾಗೇವಾಡಿ ವಿಭಾಗಕ್ಕೆ ರವಾನಿಸಿ ಈ ಸಮಸ್ಯೆಯನ್ನು ತುರ್ತು ಪರಿಹರಿಸಬೇಕೆಂದರು.
ಕಳೆದ 3 ತಿಂಗಳುಗಳಲ್ಲಿ ಸುಟ್ಟು ಹೋದ ಟ್ರಾನ್ಸ್ ಫಾರ್ಮ್‌ಗಳ ಪ್ರತ್ಯೇಕ ಉಪವಿಭಾಗ ಮತ್ತು ಪ್ರತ್ಯೇಕ ಉಪವಿಭಾಗದಲ್ಲಿ ಬದಲಿ ಸಂಖ್ಯೆಗಳನ್ನು ಪರಿಶೀಲಿಸಿ, ರೈತರ ಬಗ್ಗೆ ದಯೆ ಇಲ್ಲದೆ, ಹೆಸ್ಕಾಂ ಕಂಪನಿ ಮ್ಯಾನೇಜ್‌ಮೆಂಟ್ ಬಗ್ಗೆ ಯಾವುದೇ ಭಯವಿಲ್ಲದ ಸಂಪೂರ್ಣ ಅವ್ಯವಹಾರದಲ್ಲಿಯೇ ತೊಡಗಿ ರೈತರಿಗೂ ಮತ್ತು ಕಂಪನಿಗೂ ಹಾನಿ ಮತ್ತು ಅನ್ಯಾಯವಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿ ಮೇಲೆ ಕ್ರಮ ಜರುಗಿಸಿ ರೈತರಿಗೆ ಸಕಾಲದಲ್ಲಿ ಟಿಸಿ ನೀಡುವ ಕಾರ್ಯವಾಗಬೇಕು ಎಂದು ಆಗ್ರಹಿಸಿದರು.
ಶ್ರೀಶೈಲ ಮದ್ದರಕಿ, ಮುತ್ತಯ್ಯ ಪೂಜಾರಿ, ಮುತ್ತಯ್ಯ ಒಡೆಯರ್, ಶಂಕ್ರಪ್ಪ ಮಾಕೊಂಡ, ರವಿ ವಡ್ಡರ, ಹಣಮಂತ ಟಕ್ಕಳಕಿ, ರಾಜಶೇಖರ ದಡ್ಡಿ, ಮಲ್ಲಣ್ಣ ಲಚ್ಯಾಣ, ಸಿದ್ದು ದಡ್ಡಿ, ಸುರೇಶ ಬೇವಿನ ಗಿಡದ, ಬಸವರಾಜ ಉಕ್ಕಲಿ, ಬಸವರಾಜ ಹೂಗಾರ,ಭೀಮು ಹುಲ್ಲೂರ,ಸಂಗ್ು ಮದರಿ,ವಿಠ್ಠಲ ಮಲ್ಲಾಪುರ,ಯಲ್ಲಪ್ಪ ಓಂಕಾರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net