May the building, work, and quality of life be in harmony with Dodavada:

ದೊಡವಾಡ ಗ್ರಾಮದ ಸಿದ್ಧಾರೂಢ ಸಮುದಾಯ ಭವನ ಕಾಮಗಾರಿಗೆ ಶಾಸಕ ಮಹಾಂತೇಶ ಕೌಜಲಗಿ ಚಾಲನೆ ನೀಡಿದರು. ಅರುಣಕುಮಾರ, ಜಡಿಸಿದ್ಧೇಶ್ವರ ಸ್ವಾಮೀಜಿ, ಮಹೇಶ ಹುಲಿ, ಸಂಕಪ್ಪ ಕೊರಿಕೊಪ್ಪ, ವಿಠ್ಠಲ ಕಾಳಿ, ಸಂಗಪ್ಪ ಹಂಚಿಗಿ, ಯಮನಪ್ಪ ಅರಟಗಲ್ಲ ಇತರರಿದ್ದರು.
ದೊಡವಾಡ ಗ್ರಾಮದ ಸಿದ್ಧಾರೂಢ ಸಮುದಾಯ ಭವನ ಕಾಮಗಾರಿಗೆ ಶಾಸಕ ಮಹಾಂತೇಶ ಕೌಜಲಗಿ ಚಾಲನೆ ನೀಡಿದರು. ಅರುಣಕುಮಾರ, ಜಡಿಸಿದ್ಧೇಶ್ವರ ಸ್ವಾಮೀಜಿ, ಮಹೇಶ ಹುಲಿ, ಸಂಕಪ್ಪ ಕೊರಿಕೊಪ್ಪ, ವಿಠ್ಠಲ ಕಾಳಿ, ಸಂಗಪ್ಪ ಹಂಚಿಗಿ, ಯಮನಪ್ಪ ಅರಟಗಲ್ಲ ಇತರರಿದ್ದರು.
Published on
ದೊಡವಾಡ: ಗುತ್ತಿಗೆದಾರರು ರ್ನಿಲಕ್ಷ$್ಯ ಹಾಗೂ ಕಳಪೆ ಕಾಮಗಾರಿಯಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬಾರದಂತೆ ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕೆಂದು ಶಾಸಕ ಮಹಾಂತೇಶ ಕೌಜಲಗಿ ಸೂಚಿಸಿದರು.
ಗ್ರಾಮದಲ್ಲಿ ಮಲೆನಾಡು ಪ್ರದೇಶ ಅಭಿವೃದ್ಧಿ ಯೋಜನೆಯಡಿ
25 ಲ ರೂ. ವೆಚ್ಚದ ಸಿದ್ಧಾರೂಢ ಸಮುದಾಯ ಭವನ ಕಾಮಗಾರಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಸರ್ಕಾರದ ವಿವಿಧ ಯೋಜನೆಗಳಡಿ ಮೂರು ನೂತನ ಹೈಟೆಕ್​ ಅಂಗನವಾಡಿ ಕೇಂದ್ರ ಕಟ್ಟಡಗಳ ಪೂಜೆ ಹಾಗೂ ದೊಡವಾಡ ಭಾಗದಲ್ಲಿ ಮುಲ್ಲಾನ ಕೇರಿ ಮತ್ತು ತುಪ್ಪದ ಕೇರಿ ಹೊಲದ ರಸ್ತೆ ಸೇರಿದಂತೆ ಮೂಲ ಸೌಕರ್ಯಕ್ಕೆ ಆದ್ಯತೆ ನೀಡಲಾಗಿದೆ. ಸಾರ್ವಜನಿಕರು ಈ ಸೌಲಭ್ಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ದೊಡವಾಡ ಹಿರೇಮಠದ ಜಡಿಸಿದ್ಧೇಶ್ವರ ಸ್ವಾಮೀಜಿ ಮಾತನಾಡಿ, ಕೌಜಲಗಿ ಕುಟುಂಬದವರು ಸಾಮಾಜಿಕ ಕಾರ್ಯದಲ್ಲಿ ತೊಡಗಿ ಜನರ ವಿಶ್ವಾಸ ಗಳಿಸಿದ್ದಾರೆ. ಶಿಣ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಂಡು ಅನೇಕ ದೇವಸ್ಥಾನಗಳ ಜೀಣೋರ್ದ್ಧಾರಕ್ಕೆ ಅನುದಾನ ಕೊಟ್ಟು ಸಮಾಜದ ಏಳಿಗೆಗೆ ಶ್ರಮಿಸುತ್ತಿರುವುದು ಶ್ಲಾನೀಯ ಎಂದರು.
ಸಿಡಿಪಿಒ ಅರುಣಕುಮಾರ, ಎಇಇ ಮಹೇಶ ಹುಲಿ, ಗುತ್ತಿಗೆದಾರ ಮಹಾಂತೇಶ ಪಾಟೀಲ, ಗ್ರಾಪಂ ಅಧ್ಯೆ ಸಂಗೀತಾ ಚಂದರಗಿ, ಸಂಕಪ್ಪ ಕೋರಿಕೊಪ್ಪ, ವಿಠ್ಠಲ ಕಾಳಿ, ಸಂಗಪ್ಪ ಹಂಚಿಗಿ, ಯಮನಪ್ಪ ಅರಟಗಲ್ಲ, ಈರನಗೌಡ ದಿಂಡಿಗಟ್ಟಿ, ಮಂಜುನಾಥ ವಾಳಿ, ಬಸವರಾಜ ಅಂದಾನಶೆಟ್ಟಿ, ಮಲ್ಲಪ್ಪ ಯರಿಕಿತ್ತೂರ,
ಶಿವಶಂಕರ ಅರಳಿಮರದ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net