ಪ್ರತಿಭಾವಂತ ಮಕ್ಕಳು ಸಮಾಜಕ್ಕೆ ಸದಾ ಋಣಿಯಾಗಿಲಿ Accessory distribution

Accessory distribution ಚನ್ನಪಟ್ಟಣದಲ್ಲಿ ಮರೀಗೌಡ ಚಾರಿಟಬಲ್ ಟ್ರಸ್ಟ್‌ನಿಂದ ಆಯೋಜಿಸಿದ್ದ ಕಾರ್ಯಕ್ರಮವನ್ನು ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಚಾಲನೆ ನೀಡಿದರು.  ಸಂಸದ ಡಾ.ಸಿ. ಎನ್. ಮಂಜುನಾಥ್,  ಗೌಡಗೆರೆ ಶ್ರೀ ಚಾಮುಂಡೇಶ್ವರಿ ಇದ್ದರು.
Accessory distribution ಚನ್ನಪಟ್ಟಣದಲ್ಲಿ ಮರೀಗೌಡ ಚಾರಿಟಬಲ್ ಟ್ರಸ್ಟ್‌ನಿಂದ ಆಯೋಜಿಸಿದ್ದ ಕಾರ್ಯಕ್ರಮವನ್ನು ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಚಾಲನೆ ನೀಡಿದರು. ಸಂಸದ ಡಾ.ಸಿ. ಎನ್. ಮಂಜುನಾಥ್, ಗೌಡಗೆರೆ ಶ್ರೀ ಚಾಮುಂಡೇಶ್ವರಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿಕೆ
  • ಸರ್ಕಾರಿ ಶಾಲೆಯ 18 ಸಾವಿರ ಮಕ್ಕಳಿಗೆ ಕಲಿಕಾ ಪರಿಕರ ವಿತರಣೆ
ಚನ್ನಪಟ್ಟಣ: ಸೇವೆ ಪವಿತ್ರವಾದ ಕಾರ್ಯ. ಇದನ್ನು ಪ್ರತಿಯೊಬ್ಬರ ಬದುಕಿನ ಒಂದು Accessory distribution ಭಾಗವಾಗಬೇಕೆಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.
ನಗರದ ಬಾಲಕರ ಪದವಿಪೂರ್ವ ಕಾಲೇಜು ಆವರಣದಲ್ಲಿ ಮರೀಗೌಡ ಚಾರಿಟಬಲ್ ಟ್ರಸ್ಟ್‌ನಿಂದ ಮಂಗಳವಾರ ಆಯೋಜಿಸಿದ್ದ ತಾಲೂಕಿನ ಸರ್ಕಾರಿ ಶಾಲೆಯ 18 ಸಾವಿರ ಮಕ್ಕಳಿಗೆ ನೋಟ್‌ಬುಕ್, ಬ್ಯಾಗ್ ಇತರ ಪರಿಕರಗಳನ್ನು ವಿತರಣೆ ಸೇವಾ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಮಾಜದಿಂದ ಸೇವೆ ಪಡೆದ ಪ್ರತಿ ಪ್ರತಿಭಾವಂತ ಮಕ್ಕಳು, ದುಷ್ಠರ ಪಾಲಾಗದೇ, ಸಮಾಜಕ್ಕೆ ಸದಾ ಋಣಿಯಾಗಿರಬೇಕು. ಸ್ವಚ್ಛ ಸಮಾಜ ನಿರ್ಮಾಣಕ್ಕೆ ಮತ್ತು ಉತ್ತಮ ಸಮಾಜ ಕಟ್ಟುವ ಕೈಂಕರ್ಯಕ್ಕೆ ಸಹಕಾರಿಯಾಗಬೇಕು. ದೇಶದ ಭವಿಷ್ಯದ ಆಸ್ತಿಯಾದ ಮಕ್ಕಳಿಗೆ ಗುಣಾತ್ಮಕ ಶಿಕ್ಷಣದ ಜತೆಗೆ ಸಂಸ್ಕಾರ ಮತ್ತು ನಮ್ಮ ಸಂಸ್ಕೃತಿಯನ್ನು ಕಲಿಸಿ ಉತ್ತಮ ಪ್ರಜೆಯನ್ನಾಗಿ ರೂಪಿಸಿ ನಾಗರಿಕ ಸಮಾಜ ನಿರ್ಮಾಣ ಮಾಡಲು ನಾವೆಲ್ಲರೂ ಶ್ರಮಿಸಬೇಕಾಗಿದೆ ಎಂದರು.
ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ನಂಜಾವಧೂತ ಸ್ವಾಮೀಜಿ ಮಾತನಾಡಿ, ವಿದ್ಯೆ ವಿನಯದ ಜತೆಗೆ ಸಂಸ್ಕಾರವನ್ನು ಕೊಡುತ್ತದೆ. ವ್ಯಕ್ತಿತ್ವವನ್ನು ಎತ್ತರದಲ್ಲಿ ನಿಲ್ಲಿಸುತ್ತದೆ. ಮಕ್ಕಳಿಗೆ ಗುಣಾತ್ಮಕ ಶಿಕ್ಷಣದ ಜತೆಗೆ ಸಂಸ್ಕಾರ, ಮಾನವೀಯ ಮೌಲ್ಯ, ಸಂಸ್ಕೃತಿ, ಈ ನೆಲದ ಸತ್ವ, ಪರಂಪರೆಯನ್ನು ತಿಳಿಸಿ ಉಜ್ವಲ ಭವಿಷ್ಯನ್ನು ರೂಪಿಸಿದಾಗ ಮಾತ್ರ ನಾಗೇಶ್ ಅವರಂತಹ ಸಂತತಿ ಹೆಚ್ಚಾಗುತ್ತದೆ ಎಂದರು.
ಟ್ರಸ್ಟ್ ಅಧ್ಯಕ್ಷ ಹಾಗೂ ಸಮಾಜ ಸೇವಕ ಎಚ್.ಎಂ. ನಾಗೇಶ್ ಮಾತನಾಡಿ, ಗ್ರಾಮೀಣ ಬಡ ಮಕ್ಕಳು ಶೈಕ್ಷಣಿಕವಾಗಿ ಮುಂದೆ ಬರಬೇಕು. ಸರ್ಕಾರಿ ಶಾಲೆಗಳನ್ನು ಉಳಿಸಲು ಮತ್ತು ಗ್ರಾಮೀಣ ಮಕ್ಕಳನ್ನು ಶೈಕ್ಷಣಿಕವಾಗಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮರೀಗೌಡ ಚಾರಿಟಬಲ್ ಟ್ರಸ್ಟ್ ವತಿಯಿಂದ ಶಿಕ್ಷಣ ಸಂಜೀವಿನಿಯಡಿ ತಾಲೂಕಿನ ಸರ್ಕಾರಿ ಶಾಲೆಯ 18 ಸಾವಿರ ಮಕ್ಕಳಿಗೆ ಶಾಲಾಬ್ಯಾಗ್, ನೋಟ್‌ಬುಕ್ ಇತರೆ ಪರಿಕರಗಳನ್ನು ನೀಡಲಾಗುತ್ತಿದೆ. ಕಳೆದ ಶೈಕ್ಷಣಿಕ ಅವಧಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ತಾಲೂಕಿನ 11 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ಹಾಗೂ ಶೇ. 100 ಫಲಿತಾಂಶ ದಾಖಲಿಸಿದ ಶಾಲಾ ಮುಖ್ಯ ಶಿಕ್ಷಕರನ್ನು ಅಭಿನಂದಿಸಿ ಗೌರವಿಸುವ ಕೆಲಸವನ್ನು ಮಾಡಲಾಗುತ್ತಿದೆ. ಮುಂದೆಯೂ ನಮ್ಮ ಸೇವಾ ಕಾರ್ಯಗಳು ಇದೇ ರಿತಿ ನಿರಂತರವಾಗಿ ಸಾಗಲಿದೆ ಎಂದರು. ತಾಲೂಕು ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜು, ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಎನ್. ಆನಂದಸ್ವಾಮಿ, ತಾಲೂಕು ಅಧ್ಯಕ್ಷ ಎಲೇಕೇರಿ ರವೀಶ್, ಮುಖಂಡರಾದ ಹಾಪ್‌ಕಾಮ್ಸ್ ದೇವರಾಜು, ರಮೇಶ್ ಗೌಡ, ಸಿ.ಪಿ.ರಾಜೇಶ್, ಸಿ.ಪುಟ್ಟಸ್ವಾಮಿ, ಅಮ್ಮಳ್ಳಿದೊಡ್ಡಿ ಮಹೇಶ್‌ಗೌಡ, ನಿಡಗೂಡಿ ಬಾಬು ಸೇರಿದಂತೆ ಹಲವರು ಇದ್ದರು.
ಸಮಾಜಕ್ಕೆ ಮಾದರಿ
ಶಿಕ್ಷಣ ಮತ್ತು ಸಂಸ್ಕೃತಿಯೇ ಬದುಕಿನ ರಕ್ಷಾಕವಚ. ಶಿಕ್ಷಣವೇ ಸಮಾಜದ ಪರಿವರ್ತನೆಗೆ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಅತ್ಯಂತ ಪರಿಣಾಮಕಾರಿ ಸಾಧನವಾಗಿದೆ ಎಂದು ಸಂಸದ ಡಾ.ಸಿ. ಎನ್. ಮಂಜುನಾಥ್ ಹೇಳಿದರು.
ಗ್ರಾಮೀಣ ಭಾಗದ ಸಾವಿರಾರು ಮಕ್ಕಳ ಶೈಕ್ಷಣಿಕ ಉನ್ನತಿಗಾಗಿ ಅವರು ಕೈಗೊಂಡಿರುವ ಕಾರ್ಯಗಳು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಗೆ ಕಾರಣವಾಗಿದ್ದು, ಸಮಾಜಕ್ಕೆ ಮಾದರಿಯಾಗಿದೆ ಎಂದು ಶ್ಲಾಘಿಸಿದರು. ಶಿಕ್ಷಣದ ಮೂಲಕ ಸಮಾಜದ ಅಭಿವೃದ್ಧಿಗೆ ಕೈಜೋಡಿಸುವ ಕಾರ್ಯ ಮಾದರಿಯಾಗಿದೆ. ಮಕ್ಕಳು ದಾನಿಗಳು ಮತ್ತು ಸಂಘ ಸಂಸ್ಥೆಗಳು ಹಾಗೂ ಸರ್ಕಾರ ನೀಡುವ ಸವಲತ್ತುಗಳನ್ನು ಸದುಪಯೋಗಪಡಿಸಿಕೊಂಡು ಚೆನ್ನಾಗಿ ಓದಿ ಭವಿಷ್ಯದಲ್ಲಿ ಉತ್ತಮ ಸಾಧನೆ ಮಾಡಿ, ಸಮಾಜದೇಶ ಕಟ್ಟುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net