ಕೊರಟಗೆರೆ:ಬೇಸಿಗೆಯಿಂದ ಜನರು ಹಾಗೂ ಜಾನುವಾರುಗಳು ತೀವ್ರ ಸಂಕಷ್ಟ ಅನುಭವಿಸುತ್ತಿರುವ ಈ ಸಂದರ್ಭದಲ್ಲಿ ಮಹಾಶಕ್ತಿ ಮಾರಮ್ಮದೇವಿ ಕೃಪೆಯಿಂದ ಸಮೃದ್ಧ ಮಳೆಯಾಗಿ ಸಮಸ್ತ ಜನತೆಗೆ ನೆಮ್ಮದಿ ದೊರಕಲಿ ಎಂದು ಸಿದ್ಧರಬೆಟ್ಟದ ಬಾಳೆಹೊನ್ನೂರು ಖಾಸಾ ಶಾಖಾ ಮಠದ ಪೀಠಾಧ್ಯಕ್ಷ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಹೊಳವನಹಳ್ಳಿ ಹೋಬಳಿಯ ಬೈಚಾಪುರ ಗ್ರಾಪಂ ವ್ಯಾಪ್ತಿಯ ಚಿಕ್ಕನಹಳ್ಳಿಯಲ್ಲಿ ಬುಧವಾರ ನಡೆದ ಶ್ರೀ ಮಹಾಶಕ್ತಿ ಮಾರಮ್ಮ ದೇವಿ ಹಾಗೂ ಶ್ರೀ ಅಥರ್ವ ಭದ್ರಕಾಳಿ ದೇವರ ವಾರ್ಷಿಕ ಧಾರ್ಮಿಕ ಪೂಜಾ ಮಹೋತ್ಸವ ಮತ್ತು 77ನೇ ದಿನದ ಮಂಡಲ ಪೂಜೆಯ ದಿವ್ಯ ಸಾನ್ನಿಧ್ಯವಹಿಸಿ ಮಾತನಾಡಿದರು.
ಎಲೆರಾಂಪುರ ಮಠದ ಪೀಠಾಧ್ಯಕ್ಷ ಶ್ರೀ ಡಾ.ಹನುಮಂತನಾಥ ಸ್ವಾಮೀಜಿ ಮಾತನಾಡಿ, ಧಾರ್ಮಿಕ ಶ್ರದ್ಧಾ ಕೇಂದ್ರಗಳು ಹೆಚ್ಚಾದಷ್ಟೂ ಅಧರ್ಮ ನಾಶವಾಗಿ ಧರ್ಮ ಉಳಿಯುತ್ತದೆ ಎಂದರು.
ಚಿತ್ರ ನಿರ್ದೇಶಕ ಶಶಾಂಕ್ ರಾಜ್ ಮಾತನಾಡಿ, ಕ್ಷೇತ್ರದಲ್ಲಿ ಭಕ್ತರ ಸಹಕಾರದಿಂದ ಧಾರ್ಮಿಕ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯುತ್ತಿರುವುದು ಸಂತಸದ ವಿಚಾರ ಎಂದರು. ಉದ್ಯಮಿ ಎಂ.ಎನ್.ಮಂಜುನಾಥ್, ಮುಖಂಡರಾದ ವೆಂಕಟರೆಡ್ಡಿ, ಜಯರಾಮ್, ಶ್ರೀನಿವಾಸ್, ಸುರೇಶ್, ಜಗದೀಶ್ ಇತರರು ಇದ್ದರು.
ವಾರ್ಷಿಕ ಧಾರ್ಮಿಕ ಮಹೋತ್ಸವದ ಪ್ರಯುಕ್ತ 77ನೇ ದಿನದ ಮಂಡಲ ಪೂಜೆ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಡಾ.ಶ್ರೀಹನುಮಂತನಾಥ ಸ್ವಾಮೀಜಿ, ಶ್ರೀ ಬಸವಲಿಂಗ ಸ್ವಾಮೀಜಿ ಹಾಗೂ ಕೇರಳದ ಶ್ರೀ ವೇದಬ್ರಹ್ಮ ಸಂಗೀತ ಕುಮಾರ ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ಭಕ್ತಿಭಾವದಿಂದ ನೆರವೇರಿತು.