ಡಾ. ದಾಕ್ಷಾಯಣಿ ಅಪ್ಪ ಅವರಿಗೆ ಕಾಶಿ ಪೀಠದ ಮಾತೃಶಕ್ತಿ ರಾಷ್ಟ್ರೀಯ ಪುರಸ್ಕಾರ

ನ.29ಕ್ಕೆ ಶಕಾಪುರ ತಪೋವನ ಮಠದಲ್ಲಿ ಪ್ರದಾನ
Matoshree Dr. Dakshayani Appa of the Kalaburagi Sharanabasaveshwara Samsthana has been selected for the 'Matrushakti National Award' for the year 2026, presented by the Kashi Peetha.
ಕಾಶಿ ಪೀಠದಿಂದ ಕೊಡಮಾಡುವ 2026ನೇ ಸಾಲಿನ ಮಾತೃಶಕ್ತಿ ರಾಷ್ಟ್ರೀಯ ಪುರಸ್ಕಾರಕ್ಕೆ ಭಾಜನರಾಗಿರುವ ಕಲಬುರಗಿ ಶರಣಬಸವೇಶ್ವರ ಸಂಸ್ಥಾನದ ಮಾತೋಶ್ರೀ ಡಾ.ದಾಕ್ಷಾಯಣಿ ಅಪ್ಪ.
Published on: 

ಕಲಬುರಗಿ : ಕಾಶಿ ಜ್ಞಾನಸಿಂಹಾಸನ ಮಹಾಪೀಠದಿಂದ ಸಾಧಕ ಮಹಿಳೆಯೋರ್ವರಿಗೆ ಪ್ರತಿವರ್ಷ ಕೊಡಮಾಡುವ ಮಾಲತಿ ಮಹಾರುದ್ರಪ್ಪ ಖೇಣಿ ಮಾತೃಶಕ್ತಿ ರಾಷ್ಟ್ರೀಯ ಪುರಸ್ಕಾರವನ್ನು ಪ್ರಕಟಿಸಲಾಗಿದ್ದು, 2026ನೇ ಸಾಲಿನ ಪ್ರಶಸ್ತಿಗೆ ಕಲಬುರಗಿ ಶರಣಬಸವೇಶ್ವರ ಸಂಸ್ಥಾನದ ಮಾತೋಶ್ರೀ ಡಾ.ದಾಕ್ಷಾಯಣಿ ಅಪ್ಪ ಅವರು ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ಒಂದು ಲಕ್ಷ ರೂ. ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದ್ದು, ನ.29ರಂದು ಪ್ರಶಸ್ತಿ ಪ್ರದಾನ ನಡೆಯಲಿದೆ.

ಜೇವರ್ಗಿ ತಾಲೂಕಿನ ಶಾಕಾಪುರದಲ್ಲಿರುವ ಕಾಶೀ ಪೀಠದ ಶಾಖಾ ತಪೋವನ ಮಠದಲ್ಲಿ ನ.29 ರಂದು ನಡೆಯಲಿರುವ ಕಾಶೀ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರ 37ನೇ ಪೀಠಾರೋಹಣ ವರ್ಧಂತಿ ಮಹೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಡಾ.ಸಿದ್ಧರಾಮ ಶಿವಾಚಾರ್ಯ ಸ್ವಾಮಿಗಳು ತಿಳಿಸಿದ್ದಾರೆ.

ಪೀಠಾರೋಹಣ ವರ್ಧಂತಿ ಮಹೋತ್ಸವದ ಪ್ರಯುಕ್ತ ಅಂದು ಬೆಳಗ್ಗೆ 9ಕ್ಕೆ ಜಗದ್ಗುರುಗಳ ಸುವರ್ಣ ಕಿರೀಟಧಾರಣೆ ಹಾಗೂ ಸಾಮೂಹಿಕ ಇಷ್ಟಲಿಂಗ ಮಹಾಪೂಜೆ ನಡೆಯಲಿದೆ. ನಂತರ ಶ್ರೀಜಗದ್ಗುರು ವಿಶ್ವಾರಾಧ್ಯ ಮಂದಿರದ ಶಿಲಾನ್ಯಾಸವನ್ನು ನೆರವೇರಿಸಲಿದ್ದಾರೆ. ಸಂಜೆ 6ಕ್ಕೆ ಧರ್ಮಸಭೆ ಹಾಗೂ ಪ್ರಶಸ್ತಿ ಪುರಸ್ಕಾರ ನಡೆಯಲಿದೆ.

Dr. Siddharama Shivacharya Swamiji of Shakapura, representing the Kashi Peetha, invited Dr. Dakshayani Appa—a recipient of the 'Matrushakti Puraskara'—to the event.
ಮಾತೃಶಕ್ತಿ ಪುರಸ್ಕಾರಕ್ಕೆ ಭಾಜನರಾಗಿರುವ ಡಾ.ದಾಕ್ಷಾಯಣಿ ಅಪ್ಪ ಅವರನ್ನು ಶಾಕಾಪುರದ ಡಾ.ಸಿದ್ಧರಾಮ ಶಿವಾಚಾರ್ಯ ಸ್ವಾಮಿಗಳು ಕಾಶಿ ಪೀಠದ ಪರವಾಗಿ ಕಾರ್ಯಕ್ರಮಕ್ಕೆ ಆಹ್ವಾನಿಸಿದರು.

ಮಹಾರಾಷ್ಟ್ರದ ಪ್ರಸಿದ್ಧ ಉದ್ಯಮಿಗಳಾದ ಡಾ.ಬಾಬಾ ಕಲ್ಯಾಣಿಯವರ ಪತ್ನಿ ಸುನೀತ ಬಾಬಾ ಕಲ್ಯಾಣಿಯವರು ತಮ್ಮ ತಾಯಿ ಮಾಲತಿ ಖೇಣಿಯವರ ಸ್ಮರಣಾರ್ಥ ಕಾಶೀ ಪೀಠದಲ್ಲಿ ಸ್ಥಾಪಿಸಿರುವ ಪ್ರಶಸ್ತಿಯನ್ನು, ಸಮಾಜ ಸೇವೆ, ಶೈಕ್ಷಣಿಕ ಸಾಧನೆ, ವಿಶೇಷ ಕ್ಷೇತ್ರಗಳಲ್ಲಿ ಸೇವೆ ಮಾಡುತ್ತಿರುವ ಅಪರೂಪದ ಸಾಧಕಿಯರನ್ನು ಗುರುತಿಸಿ ನೀಡಲಾಗುತ್ತದೆ. ಕಲ್ಯಾಣ ಕರ್ನಾಟಕದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡುತ್ತಿರುವ ಶರಣಬಸವ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಡಾ.ದಾಕ್ಷಾಯಣಿ ಅಪ್ಪ ಅವರು ಮಾಡುತ್ತಿರುವ ಅನುಪಮ ಸೇವೆಯನ್ನು ಪರಿಗಣಿಸಿ ಮಾತೃಶಕ್ತಿ ಪುರಸ್ಕಾರವನ್ನು ನೀಡಲಾಗಿದೆ.