6,300 ಹುದ್ದೆಗಳ ಹೆಸರಿನಲ್ಲಿ ಭಾರಿ ಸೈಬರ್ ವಂಚನೆ

FAKE RECRUITMENT ALERT
FAKE RECRUITMENT ALERT
Published on

ರವಿ ನಾಯಕ್

ಬೆಂಗಳೂರು: ಕೇಂದ್ರಕಾರ್ಮಿಕ ಮತ್ತು ಉದ್ಯೋಗ ಇಲಾಖೆಹೆಸರಿನಲ್ಲಿ ನಕಲಿ ವೈಬ್‌ಸೈಟ್ಸೃಷ್ಟಿಸಿರುವ ಸೈಬರ್ ವಂಚಕರು6,300 ಹುದ್ದೆಗಳ ನೇರನೇಮಕಾತಿ ಎಂಬುದಾಗಿ ಹೇಳಿಕೊಂಡುಉದ್ಯೋಗಾಕಾಂಕ್ಷಿಗಳಿಗೆ ಕೋಟ್ಯಂತರರೂ.ವಂಚನೆ ಮಾಡಿರುವುದುಬೆಳಕಿಗೆ ಬಂದಿದೆ.


ಸಾಮಾಜಿಕಜಾಲತಾಣಗಳ ಮೂಲಕ ಜಾಹೀರಾತು ಹರಡಿಸಿಯುವಕರನ್ನು ಗುರಿಯಾಗಿಸಿಕೊಂಡುನಡೆಸಿದ ಈ ವಂಚನೆ ಇದೀಗ ದೇಶವ್ಯಾಪಿಚರ್ಚೆಗೆ ಗ್ರಾಸವಾಗಿದೆ.ಕೇಂದ್ರ ಸರ್ಕಾರದ ಅಧಿಕೃತನೇಮಕಾತಿಯಂತೆ ಕಾಣುವ ರೀತಿಯಲ್ಲಿವೆಬ್‌ಸೈಟ್ ವಿನ್ಯಾಸ ಮಾಡಲಾಗಿದ್ದು,ಲೋಗೋ, ಸರ್ಕಾರಿಚಿಹ್ನೆಗಳು, ಅಧಿಕೃತಭಾಷಾಶೈಲಿ ಮತ್ತು ಆನ್‌ಲೈನ್ಅರ್ಜಿ ವ್ಯವಸ್ಥೆ ಬಳಸಿಕೊಂಡುಜನರನ್ನು ನಂಬುವಂತೆ ಮಾಡಲಾಗಿದೆ.


ಪ್ರತಿಅರ್ಜಿಗೆ ₹600ರಂತೆಸ್ವಯಂ ಪ್ರೇರಿತ ನೋಂದಣಿ ಶುಲ್ಕನಿಗದಿ ಮಾಡಲಾಗಿದೆ. 6,300 ಹುದ್ದೆಗಳಬೃಹತ್ ನೇಮಕಾತಿ ನಡೆಯುತ್ತಿದೆಎಂದು ಹೇಳಿಕೊಂಡು ಸಾವಿರಾರುಅಭ್ಯರ್ಥಿಗಳಿಂದ ಹಣ ಸಂಗ್ರಹಿಸಿದ್ದಾರೆ.ಸುಮಾರು 20 ದಿನಗಳಕಾಲ ವೆಬ್‌ಸೈಟ್ ನಿರ್ವಹಣೆನಡೆಸಿದೆ. ಈ ಅವಧಿಯಲ್ಲಿದೇಶದ ವಿವಿಧ ರಾಜ್ಯಗಳಿಂದ ಲಕ್ಷಾಂತರಯುವಕರು ಅರ್ಜಿ ಸಲ್ಲಿಸಿರುವಸಾಧ್ಯತೆ ಇದೆ.


ಮೇ1 ರಂದು www.irido.org ನಕಲಿ ವೆಬ್‌ಸೈಟ್ ರಚನೆ ಮಾಡಿರುವವಂಚಕರು, ಕಾರ್ಮಿಕಇಲಾಖೆಯ ವಿವಿಧ ವಿಭಾಗದಲ್ಲಿನಖಾಲಿ ಹುದ್ದೆಗಳಿಗೆ ಅರ್ಜಿಆಹ್ವಾನಿಸಿದ್ದಾರೆ.

6 ಕೋಟಿರೂ.ಸಂಗ್ರಹ ಸಾಧ್ಯತೆ

ಕಡಿಮೆವಿದ್ಯಾರ್ಹತೆ

ಕೊನೆದಿನ ಮೇ 31

ಕೇಂದ್ರಸರ್ಕಾರದ ಇಲಾಖೆಗಳು ಸಾಮಾನ್ಯವಾಗಿತಮ್ಮ ಅಧಿಕೃತ ಪೋರ್ಟ್‌ಲ್‌ಗಳುಮತ್ತು ಉದ್ಯೋಗ ವೆಬ್‌ಸೈಟ್‌ಗಳಮೂಲಕವೇ ನೇಮಕಾತಿ ಪ್ರಕಟಣೆಹೊರಡಿಸುತ್ತವೆ. ಆದರೆ,ಹೆಚ್ಚಿನ ಅಭ್ಯರ್ಥಿಗಳುತ್ವರಿತ ಉದ್ಯೋಗದ ನಿರೀಕ್ಷೆಯಲ್ಲಿವೆಬ್‌ಸೈಟ್‌ನ ನೈಜತೆಯನ್ನುಪರಿಶೀಲಿಸದೆ ಹಣ ಪಾವತಿಸುತ್ತಿರುವುದುವಂಚಕರಿಗೆ ಅವಕಾಶ ಕಲ್ಪಿಸುತ್ತಿದೆ.ಡಿಜಿಟಲ್ ಅರೆಸ್ಟ್ ಹಾಗೂಶ್ರೀಮಂತರನ್ನು ಗುರಿಯಾಗಿಸಿಕೊಂಡುಅವರ ಬ್ಯಾಂಕ್ ಖಾತೆಗಳಿಗೆ ಕನ್ನಹಾಕುತ್ತಿದ್ದ ವಂಚಕರ ಹೊಸ ಮುಖಈಗ ಉದ್ಯೋಗಾಕಾಂಕ್ಷಿಗಳ ಮೇಲೆಬಿದ್ದಿದೆ.ನೇಮಕಾತಿಹೆಸರಿನಲ್ಲಿ ಸದ್ದಿಲ್ಲದೆ ವಂಚನೆಮಾಡಲಾಗುತ್ತಿದೆ.

ಎನ್‌ಸಿಆರ್‌ಪಿಪೋರ್ಟಲ್‌ನಲ್ಲಿ ದೂರು

ಹಲವು ಇಲಾಖೆ ಹೆಸರಿನಲ್ಲಿ ಸೈಬರ್ ವಂಚನೆಯಾಗುತ್ತಿರುವುದು ಬೆಳಕಿಗೆ ಬರುತ್ತಿವೆ. ಆದರೆ, ಕೇಂದ್ರ ಕಾರ್ಮಿಕ ಇಲಾಖೆ ಹೆಸರಿನಲ್ಲಿ ವಂಚನೆಯಾಗಿರುವ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ. ಆನ್‌ಲೈನ್ ಅಥವಾ ಎಸ್‌ಸಿಆರ್‌ಪಿ ಮೂಲಕ ದೂರು ಬಂದರೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು.

— -ಡಾ.ಪ್ರಣವ್ ಮೋಹಾಂತಿ, ಸೈಬರ್ ಕಮಾಂಡ್ ಡಿಜಿಪಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net