ಆರ್ಥಿಕ ಹೊರೆ ತಗ್ಗಿಸುವ ಸಾಮೂಹಿಕ ವಿವಾಹಗಳು

ಹಂಪಾಪಟ್ಟಣದಲ್ಲಿ ಸೋಮವಾರ ಉಚಿತ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ 29 ಜೋಡಿಗಳು ಹೊಸಬಾಳಿಗೆ ಪಾದಾರ್ಪಣೆ ಮಾಡಿದರು.
ಹಂಪಾಪಟ್ಟಣದಲ್ಲಿ ಸೋಮವಾರ ಉಚಿತ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ 29 ಜೋಡಿಗಳು ಹೊಸಬಾಳಿಗೆ ಪಾದಾರ್ಪಣೆ ಮಾಡಿದರು.
Published on
ಹಗರಿಬೊಮ್ಮನಹಳ್ಳಿ: ಪಾಲಕರ ಆರ್ಥಿಕ ಹೊರೆ ತಗ್ಗಿಸುವ ಯತ್ನವೇ ಈ ಸಾಮೂಹಿಕ ವಿವಾಹ ಮಹೋತ್ಸವಗಳು. ಇದೊಂದು ರೀತಿಯ ಸಮಾಜ ಸೇವೆಯೆಂದರೂ ತಪ್ಪಲ್ಲ ಎಂದು ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಕುರಿ ಶಿವಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದರು.
ಹಂಪಾಪಟ್ಟಣದಲ್ಲಿ ಜನಸೇವಾ ಟ್ರಸ್ಟ್‌ನಿಂದ ಸೋಮವಾರ ಹಮ್ಮಿಕೊಂಡಿದ್ದ 29ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ಮದುವೆಗಳು ಪ್ರತಿಯೊಂದು ಮನೆಗಳಲ್ಲಿ ನಡೆಯುತ್ತವೆ. ಅದಕ್ಕಾಗಿ ಸಾಕಷ್ಟು ದುಂದುವೆಚ್ಚವಾಗುತ್ತದೆ. ಅಲ್ಲದೆ ಸರ್ಕಾರದ ಯಾವುದೇ ಸೌಲಭ್ಯಗಳು ಲಭಿಸುವುದಿಲ್ಲ. ಈ ಸಾಮೂಹಿಕ ವಿವಾಹದಲ್ಲಿ ಪಾಲ್ಗೊಂಡರೆ ಸರ್ಕಾರದ ಸಹಾಯಧನವೂ ಸಿಗುತ್ತದೆ. ದುಂದುವೆಚ್ಚಕ್ಕೂ ಕಡಿವಾಣ ಹಾಕಲಾಗುತ್ತದೆ ಎಂದರು.
ಟ್ರಸ್ಟ್‌ನ ಸಂಸ್ಥಾಪಕ ಬುಡ್ಡಿ ಬಸವರಾಜ ಪ್ರಾಸ್ತಾವಿಕ ಮಾತನಾಡಿದರು. ಮಲ್ಲಿಕಾರ್ಜುನ ಶಿವಾಚಾರ್ಯರು, ಡಾ. ಮಹೇಶ್ವರ ಮಹಾಸ್ವಾಮೀಜಿ, ಪೂರ್ಣಾನಂದ ಭಾರತಿ ಸ್ವಾಮೀಜಿ, ಸೋಮಶೇಖರ ಸ್ವಾಮೀಜಿ, ಹಾಲಸಿದ್ದೇಶ್ವರ ಸ್ವಾಮೀಜಿ, ಚರಂತೇಶ್ವರ ಸ್ವಾಮೀಜಿ, ಪ್ರಮುಖರಾದ ಹೆಗ್ಡಾಳ್ ರಾಮಣ್ಣ, ಸಿ. ಶಿವಾನಂದ್, ಬಿ. ಗಂಗಾಧರ, ಅನಿಲ್ ಕುಮಾರ್ ಜಾಣ, ಕಿನ್ನಾಳ್ ಸುಭಾಷ್ ಇತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net