ರಾಯಚೂರಿನ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದ್ದ ಮ್ಯಾರಥಾನ್ ಓಟಕ್ಕೆ ಎಸ್ಪಿ ಅರುಣಾಂಗ್ಶು ಗಿರಿ ಚಾಲನೆ ನೀಡಿದರು. ಎಎಸ್ಪಿಗಳಾದ ಕುಮಾರ ಸ್ವಾಮಿ, ಹರೀಶ್, ಡಿವೈಎಸ್ಪಿಗಳಾದ ಈ.ಶಾಂತವೀರ, ಪ್ರಮಾಣನಂದ ಘೋಡ್ಕೆ, ದತ್ತತ್ರೇಯ ಕಾರ್ನಾಡ್, ಸಿಪಿಐ ನಾಗರಾಜ ಮೇಕ, ಉಮೇಶ್ ಕಾಂಬ್ಳೆ, ಪಿಎಸ್‌ಐ ಸಣ್ಣ ವೀರೇಶ, ಮಂಜುನಾಥ ಇದ್ದರು.
Published on:
Copied
Follow Us
ರಾಯಚೂರು ಜಿಲ್ಲಾ ಪೊಲೀಸ್ ಇಲಾಖೆಯಿಂದ ಭಾನುವಾರ ನಮ್ಮ ಪೊಲೀಸ್ - ನಮ್ಮ ಹೆಮ್ಮೆ, ಫಿಟ್ನೆಸ್ ಫಾರ್ ಆಲ್ ಮತ್ತು ಡ್ರಗ್ಸ್ ಫ್ರೀ ಕರ್ನಾಟಕ ಎನ್ನುವ ಧ್ಯೇಯ ವಾಕ್ಯದಡಿ ನಗರದ ಮಹಾತ್ಮಗಾಂಧಿ ವೃತ್ತದಲ್ಲಿ ಮ್ಯಾರಥಾನ್ ಓಟ ಹಮ್ಮಿಕೊಳ್ಳಲಾಗಿತ್ತು.
ಮ್ಯಾರಥಾನ್ ಓಟಕ್ಕೆ ಎಸ್ಪಿ ಅರುಣಾಂಗ್ಶು ಗಿರಿ ಚಾಲನೆ ನಿಡಿ ಮಾತನಾಡಿ,ಯುವಕರು ಸೈಬರ್ ಕ್ರೈಂ, ಡ್ರಗ್ಸ್ ನಿಂದ ಜಾಗೃತರಾಗಿರಬೇಕು. ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಇಂತಹ ಅಪರಾಧ ಮಾಡುವ ಅಪರಾಧಿಗಳು ನಿತ್ಯ ಮೊಬೈಲ್‌ನಲ್ಲಿ ವಿವಿಧ ಇಲಾಖೆ, ಹಣಕಾಸು ಸಂಸ್ಥೆಗಳ ಹೆಸರುಗಳನ್ನು ಬಳಸಿ ಸಾರ್ವಜನಿಕರಿಗೆ ವಂಚನೆ ಮಾಡುತ್ತಿದ್ದಾರೆ. ಜತೆಗೆ ಆರೋಗ್ಯವಾಗಿ ದೇಹವನ್ನು ಸದೃಡವಾಗಿಟ್ಟುಕೊಳ್ಳಬೇಕು.
ಜಿಲ್ಲೆಯಲ್ಲಿ ಯುವಕರು ಸಂಚಾರ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡುತ್ತಿಲ್ಲ. ದಯವಿಟ್ಟು ಎಲ್ಲರು ಹೆಲ್ಮೆಟ್ ಧರಿಸಿ ಸಂಚಾರ ಮಾಡಲು ಮನವಿ ಮಾಡಿದರು. ಓಟ್ದಲ್ಲಿ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಸಮವಸ್ತ್ರದಲ್ಲಿ ಭಾಗವಹಿಸಿದರು. ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಿಂದ ಪ್ರಾರಂವಾಗಿ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಕೇಂದ್ರ ಬಸ್ ನಿಲ್ದಾಣ, ತೀನ್ ಕಂದಿಲ್, ಬಟ್ಟೆ ಬಜಾರ, ಚಂದ್ರಮೌಳೇಶ್ವರ ವೃತ್ತ, ಗಂಜ್ ವೃತ್ತ ಸೇರಿ ಎಸ್ಪಿ ಕಚೇರಿಯಲ್ಲಿ ಸಮಾಪ್ತಿಗೊಂಡಿತ್ತು. ಓಟದಲ್ಲಿ ಭಾಗವಹಿಸಿದ ಯುವಕರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಎಎಸ್ಪಿಗಳಾದ ಕುಮಾರ ಸ್ವಾಮಿ, ಹರೀಶ್, ಡಿವೈಎಸ್ಪಿಗಳಾದ ಈ.ಶಾಂತವೀರ, ಪ್ರಮಾಣನಂದ ಘೋಡ್ಕೆ, ದತ್ತತ್ರೇಯ ಕಾರ್ನಾಡ್, ಸಿಪಿಐ ನಾಗರಾಜ ಮೇಕ, ಉಮೇಶ್ ಕಾಂಬ್ಳೆ, ಪಿಎಸ್‌ಐ ಸಣ್ಣ ವೀರೇಶ, ಮಂಜುನಾಥ ಸೇರಿ ಅನೇಕರು ಇದ್ದರು.