ಜ.11ರಂದು ಭೈರಪ್ಪನವರ ಸಾಹಿತ್ಯದಲ್ಲಿ ಕಲೆ, ರಸ, ಧ್ವನಿ ಗೋಷ್ಠಿಯನ್ನು ಅರ್ಜುನ್ ಭಾರದ್ವಾಜ್, ಬಿ.ಎನ್. ಶಶಿಕಿರಣ್ ನಡೆಸಿಕೊಡಲಿದ್ದಾರೆ. ಭೈರಪ್ಪ ಅವರ ಕಾದಂಬರಿಗಳಲ್ಲಿ ಸಾಮಾಜಿಕ ಒಳನೋಟಗಳು ಎಂಬ ಗೋಷ್ಠಿಯಲ್ಲಿ ಡಾ.ಜಿ.ಬಿ.ಹರೀಶ, ದಿವಾಕರ ಹೆಗಡೆ ಕೆರೆಹೊಂಡ ಭಾಗಿಗಲಿದ್ದಾರೆ. ‘ಭೈರಪ್ಪನವರ ಬೆಳಕಲ್ಲಿ ಮುಂದೆ ಬೆಳಯಬಹುದಾದ ಸಾಹಿತ್ಯ ಗೋಷ್ಠಿಯಲ್ಲಿ ಶತಾವಧಾನಿ ಡಾ.ಆರ್. ಗಣೇಶ್, ಡಾ. ಜಿ.ಬಿ.ಹರೀಶ ನಡೆಸಿಕೊಡಲಿದ್ದಾರೆ. ಈ ವೇಳೆ ಹಲವು ಲೇಖಕರು, ಸಾಹಿತಿಗಳು ಉಪಸ್ಥಿತರಲಿದ್ದಾರೆ.