ಮಲ್ಲಮ್ಮನ ವಿಚಾರಧಾರೆ ಅನುಕರಣೀಯ

ರಬಕವಿ-ಬನಹಟ್ಟಿ ತಹಸೀಲ್ದಾರ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಸಿದ್ದು ಸವದಿ, ಕಷ್ಣಾ ಲೆಂಡಿ, ತಹಸೀಲ್ದಾರ್ ಗಿರೀಶ ಸ್ವಾದಿ, ವೆಂಕಟೇಶ ನಿಂಗಸಾನಿ, ಸದಾಶಿವ ಕುಂಬಾರ ಇತರರಿದ್ದರು.
ರಬಕವಿ-ಬನಹಟ್ಟಿ ತಹಸೀಲ್ದಾರ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಸಿದ್ದು ಸವದಿ, ಕಷ್ಣಾ ಲೆಂಡಿ, ತಹಸೀಲ್ದಾರ್ ಗಿರೀಶ ಸ್ವಾದಿ, ವೆಂಕಟೇಶ ನಿಂಗಸಾನಿ, ಸದಾಶಿವ ಕುಂಬಾರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಸಿದ್ದು ಸವದಿ ಹೇಳಿಕೆ
  • ಸಮಾಜದ ಏಳಿಗೆಗೆ ನಿರಂತರ ದುಡಿದ ಜೀವ
ರಬಕವಿ/ಬನಹಟ್ಟಿ: ಗಹಿಣಿಯಾಗಿ ಮನೆಯ ಎಲ್ಲ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದ್ದಲ್ಲದೆ, ಸಮಾಜಕ್ಕೂ ಮಾದರಿಯಾಗಬಲ್ಲ ಕೆಲಸ ಮಾಡಿದ ಕೀರ್ತಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಅವರಿಗೆ ಸಲ್ಲುತ್ತದೆ. ಆದರೆ, ತಮ್ಮ ಸಾತ್ವಿಕ ವಿಚಾರಗಳ ಮೂಲಕ ವಿಚಾರದ ಕಿಡಿ ಹೊತ್ತಿಸಿದ ಅವರಿಗೆ ಇತಿಹಾಸದಲ್ಲಿ ಸೂಕ್ತ ಸ್ಥಾನಮಾನ ನೀಡಿಲ್ಲ ಎಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು.
ನಗರದ ತಹಸೀಲ್ದಾರ್ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಮಲ್ಲಮ್ಮನವರ ಸುತ್ತ ಸಾಕಷ್ಟು ಪವಾಡಗಳಿದ್ದರೂ ಅವರು ನಡೆದುಕೊಂಡ ಜೀವನ ಸಾಮಾನ್ಯವೇ ಆಗಿದೆ. ಸಮಾಜದ ಏಳಿಗೆಗೆ ನಿರಂತರ ಶ್ರಮಿಸಿದ್ದ ಅವರ ವಿಚಾರಗಳು ಭವಿಷ್ಯದ ಪೀಳಿಗೆಗೆ ಅಗತ್ಯವಿದೆ ಎಂದರು.
ತಹಸೀಲ್ದಾರ್ ಗಿರೀಶ ಸ್ವಾದಿ ಮಾತನಾಡಿ, ಮಲ್ಲಮ್ಮ ಅವರು ಮೌಲ್ಯ ಮತ್ತು ತತ್ವಗಳಿಗೆ ಬದ್ಧರಾಗಿ ಬದುಕಿದವರು. ಅವರ ಆಧ್ಯಾತ್ಮಿಕ ಶಕ್ತಿ ಮತ್ತು ಸಹನಶೀಲತೆ ಇಂದಿನ ಮಹಿಳೆಯರಿಗೆ ಆದರ್ಶ ಎಂದು ತಿಳಿಸಿದರು.
ಹಿರಿಯ ನ್ಯಾಯವಾದಿ ವೆಂಕಟೇಶ ನಿಂಗಸಾನಿ ಮಾತನಾಡಿ, ಮಲ್ಲಮ್ಮ ಅವರಿಗೆ ಇತಿಹಾಸದಲ್ಲಿ ಪ್ರಾಮುಖ್ಯತೆ ಕಡಿಮೆಯಿದ್ದರೂ ಜಾನಪದ ಸಾಹಿತ್ಯ ಮತ್ತು ಕಲೆಗಳಲ್ಲಿ ಅವರು ಜೀವಂತವಾಗಿದ್ದಾರೆ. ಅವರ ವ್ಯಕ್ತಿತ್ವದ ಗಟ್ಟಿತನವೇ ಅವರನ್ನು ಜನಮನದಲ್ಲಿ ಉಳಿಸಿದೆ ಎಂದು ಹೇಳಿದರು.
ರಾಜಶೇಖರ್ ಸಾತಿಹಾಳ, ಸದಾಶಿವ ಕುಂಬಾರ, ಚೇತನ ಭಜಂತ್ರಿ, ಕುಮಾರ ಮಳೆದ, ಶ್ರೀಶೈಲ ಮೇಣಿ, ಕಷ್ಣ ಲೆಂಡಿ, ಕಷ್ಣ ಜಕನೂರು ಸೇರಿ ಹಲವರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net