ಮುಚಳಂಬದ ಶ್ರೀ ಪ್ರಣವಾನಂದ ಸ್ವಾಮೀಜಿ ಸಾನ್ನಿಧ್ಯ, ಸಂಸ್ಥಾನ ಗವಿಮಠದ ಶ್ರೀ ಡಾ.ಅಭಿನವ ನಲಿಂಗ ರುದ್ರಮುನಿ ಶಿವಾಚಾರ್ಯರು ನೇತೃತ್ವ ವಹಿಸಿ ಆಶೀರ್ವಚನ ನೀಡಿದರು. ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದ ಅಧ್ಯಕ್ಷ ಗುರುನಾಥರಡ್ಡಿ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ರಡ್ಡಿ ಸಮಾಜದ ಅಧ್ಯಕ್ಷ ವಿಜಯರಡ್ಡಿ, ಗುರುನಾಥ್ ರಡ್ಡಿ, ಶಿವರಡ್ಡಿ, ಗೋವಿಂದ ರಡ್ಡಿ, ಭೀಮರಡ್ಡಿ ಪಾಟೀಲ್, ವೀರಾರಡ್ಡಿ ಪಾಟೀಲ್ ಬಸವರಾಜ ಮಾಶೆಟ್ಟಿ, ಸಚಿನ ತೇಲಂಗ್, ಅನಿಲ ಮಾಶೆಟ್ಟಿ, ಶಿವಕುಮಾರ ಮೇತ್ರೆ, ಪ್ರದಿಪ್ ಬಿರಾದಾರ, ಶಿವಶಂಕರ ಬಚ್ಚಣ್ಣೆ ಸೇರಿ ಅನೇಕ ಭಕ್ತರು ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು. ಧನಶ್ರೀ ಮಾಣಿಕರಡ್ಡಿ ಫುರ್ಮೆ ಸ್ವಾಗತಿಸಿದರು. ಜಗನ್ನಾಥರಡ್ಡಿ ಕಲ್ಲೂರೆ ನಿರೂಪಣೆ ಮಾಡಿದರು.