ಶರಣ ಪರಂಪರೆಯ ಶ್ರೇಷ್ಠ ಕೊಂಡಿ ಮಲ್ಲಮ್ಮ

ಚಿತ್ತಾಪುರದಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಿಸಲಾಯಿತು. ನಾಗಯ್ಯ ಹಿರೇಮಠ, ಮಲ್ಲಿಕಾರ್ಜುನರೆಡ್ಡಿ ಇಜಾರ್​, ಜಗಣ್ಣಗೌಡ ರಾಮತೀರ್ಥ ಇತರರಿದ್ದರು.
ಚಿತ್ತಾಪುರದಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಿಸಲಾಯಿತು. ನಾಗಯ್ಯ ಹಿರೇಮಠ, ಮಲ್ಲಿಕಾರ್ಜುನರೆಡ್ಡಿ ಇಜಾರ್​, ಜಗಣ್ಣಗೌಡ ರಾಮತೀರ್ಥ ಇತರರಿದ್ದರು.
Published on
ಚಿತ್ತಾಪುರ: ತಾಳ್ಮೆ ಮತ್ತು ನಿಷ್ಠೆಯ ಮೂಲಕ ಶಿವನ ಸಾಕ್ಷಾತ್ಕಾರ ಪಡೆದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಅವರ ಆದರ್ಶಗಳು ಇಂದಿನ ಸಮಾಜಕ್ಕೆ ಅಗತ್ಯ ಎಂದು ತಹಸೀಲ್ದಾರ್​ ನಾಗಯ್ಯ ಹಿರೇಮಠ ಹೇಳಿದರು. ಪ್ರಜಾಸೌಧದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಲ್ಲಮ್ಮನವರು ಕೇವಲ ಒಂದು ಸಮಾಜಕ್ಕೆ ಸೀಮಿತವಾದವರಲ್ಲ. ಅತ್ತೆ&ಮಾವನ ಕಿರುಕುಳ, ಸಂಸಾರದ ಸಂಕಷ್ಟಗಳ ಮಧ್ಯೆಯೂ ಶ್ರೀಶೈಲ ಮಲ್ಲಿಕಾರ್ಜುನನನ್ನೇ ನಂಬಿ ಬದುಕಿದ ಅವರ ಜೀವನವು ಸ್ತ್ರೀ ಕುಲಕ್ಕೆ ಚೈತನ್ಯದಾಯಕವಾಗಿದೆ. ಕಾಯಕ ಮತ್ತು ದಾಸೋಹ ತತ್ವಗಳನ್ನು ಪಾಲಿಸಿದ ಅವರು ಶರಣ ಪರಂಪರೆಯ ಶ್ರೇಷ್ಠ ಕೊಂಡಿ ಎಂದು ಬಣ್ಣಿಸಿದರು. ರಡ್ಡಿ ಸಮಾಜದ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನರೆಡ್ಡಿ ಇಜಾರ್​, ಪ್ರಮುಖರಾದ ಜಗಣ್ಣಗೌಡ ರಾಮತೀರ್ಥ, ಭೀಮರಡ್ಡಿ, ನಾಗರಡ್ಡಿ ಗೋಪಸೇನ್​, ಆಯಿಲರಡ್ಡಿ ಯರಗಲ್​, ಸಿದ್ದರಾಮರಡ್ಡಿ ಪಾಲಪ್​, ಶರಣರಡ್ಡಿ ಪಾಲಪ್​, ರುದ್ರಗೌಡ ಇಜಾರ್​, ಶ್ರೀನಿವಾಸರಡ್ಡಿ ಯರಗಲ್​, ಮಲ್ಲುಗೌಡ ಆಲೂರ್​, ಬಸವರಾಜ ಪಾಟೀಲ್​, ಬಸವರಾಜಗೌಡ ಆಲೂರ್​, ಗಿರೀಶ ರೆಡ್ಡಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net