ಜನಸ್ಪಂದನ ಆಹಾರ ಇಲಾಖೆಯಾಗಿ ರೂಪಿಸಿ: ಯುವ ಸಿಬ್ಬಂದಿಗೆ ಸಚಿವ ರಿಜ್ವಾನ್ ಅರ್ಷದ್ ಕರೆ - Rizwan Arshad

ಆಹಾರ ಸಚಿವ ರಿಜ್ವಾನ್ ಅರ್ಷದ್
ಆಹಾರ ಸಚಿವ ರಿಜ್ವಾನ್ ಅರ್ಷದ್
Published on

ಬೆಂಗಳೂರು: ದುರ್ಬಲ ವರ್ಗಗಳ ಜನರಿಗೆ ಸೇವೆ ಸಲ್ಲಿಸುವುದು ನಮ್ಮ ಇಲಾಖೆಯ ಜವಾಬ್ದಾರಿ. ಹಾಗಾಗಿ, ಉತ್ತಮ ಆಡಳಿತ ಮತ್ತು ಜನಕೇಂದ್ರಿತ ಕಾರ್ಯವೈಖರಿ ಇಲಾಖೆಯ ಮೂಲ ಆಶಯಗಳಾಗಬೇಕು ಎಂದು ಆಹಾರ ಸಚಿವ ರಿಜ್ವಾನ್ ಅರ್ಷದ್ ಹೇಳಿದ್ದಾರೆ.

ಇಲಾಖೆಗೆ ಹೊಸದಾಗಿ ನೇಮಕಗೊಂಡ ಯುವ ಸಿಬ್ಬಂದಿಗೆ ಕೆಎಎಸ್ ಅಸೋಸಿಯೇಷನ್ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪರಿಣಾಮಕಾರಿಯಾಗಿ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುವುದು, ನೂತನ ಕಾರ್ಯವಿಧಾನಗಳಿಗೆ ತೆರೆದುಕೊಳ್ಳುವುದು ಹಾಗೂ ಹೊಸ ಆಲೋಚನೆಗಳಿಗೆ ಅವಕಾಶ ನೀಡುವ ಮೂಲಕ ಇಲಾಖೆಯ ಕಾರ್ಯವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಬೇಕು. ಸಾರ್ವಜನಿಕರಿಗೆ ಸರ್ಕಾರದ ಸೇವೆಗಳು ತ್ವರಿತವಾಗಿ ತಲುಪುವಂತೆ ಕಾರ್ಯನಿರ್ವಹಿಸುವುದು ಸಿಬ್ಬಂದಿಯ ಜವಾಬ್ದಾರಿ. ಜನರ ಸಮಸ್ಯೆಯನ್ನು ಅರ್ಥಮಾಡಿಕೊಂಡು, ಸ್ಪಂದನಶೀಲತೆ ಹಾಗೂ ಬದ್ಧತೆಯಿಂದ ಸೇವೆ ಸಲ್ಲಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಚಿವರು ಸಲಹೆ ನೀಡಿದರು.
ಬದ್ಧತೆ, ಹೊಸ ದೃಷ್ಟಿಕೋನಗಳೊಂದಿಗೆ ಇಲಾಖೆಯನ್ನು ಇನ್ನಷ್ಟು ದಕ್ಷ, ಪಾರದರ್ಶಕ ಮತ್ತು ಜನಸ್ಪಂದನ ಇಲಾಖೆಯನ್ನಾಗಿ ರೂಪಿಸುವಲ್ಲಿ ಹೊಸ ಪೀಳಿಗೆಯ ಸಿಬ್ಬಂದಿ ಮಹತ್ವದ ಪಾತ್ರ ವಹಿಸಲಿದ್ದಾರೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.
ಆಹಾರ ನಿಗಮದ ಎಂಡಿ ಜಗದೀಶ್, ವ್ಯವಸ್ಥಾಪಕ ಮಂಜುನಾಥ್ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net