ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ನಂದಿನಿ ಕ್ಷೀರ ಭವನದ ಸಭಾಂಗಣದಲ್ಲಿ ಆಯೋಜಿಸಿದ್ದ ಪರಿಹಾರ ಚೆಕ್ ವಿತರಣಾ ಸಮಾರಂಭದಲ್ಲಿ ಮಾತನಾಡಿ, ತಾಲೂಕಿನಲ್ಲಿ ಕಳೆದ ಮೂರ್ನಾಲ್ಕು ತಿಂಗಳ ಹಿಂದೆ 32 ರಾಸುಗಳು ಮೃತಪಟ್ಟಿದ್ದವು. ಅವುಗಳಿಗೆ ರೈತರು ವಿಮೆ ಮಾಡಿಸಿದ್ದರಿಂದ ಅವರೆಲ್ಲರಿಗೂ ಈಗ ಪರಿಹಾರ ರೂಪದಲ್ಲಿ ಸುಮಾರು 14.40 ಲಕ್ಷ ರೂ. ದೊರೆತಿದೆ. ಜಿಲ್ಲೆಯಲ್ಲಿ ಸುಮಾರು 2 ಲಕ್ಷ ರಾಸುಗಳಿಗೆ ವಿಮೆ ಸೌಲಭ್ಯ ಕಲ್ಪಿಸಲು ಜಿಲ್ಲಾ ಹಾಲು ಒಕ್ಕೂಟ ಸುಮಾರು 30 ಕೋಟಿ ರೂ. ಹಣ ವಿನಿಯೋಗಿಸಿದೆ. ರಾಸುಗಳಿಗೆ ಮಾಡಿಸುವ ವಿಮೆ ಸಂಪೂರ್ಣ ಉಚಿತವಾಗಿದ್ದು, ರೈತಾಪಿಗಳು ಉದಾಸೀನ ಮಾಡದೇ ತಮ್ಮ ರಾಸುಗಳಿಗೆ ವಿಮೆ ಮಾಡಿಸಬೇಕೆಂದು ಮನವಿ ಮಾಡಿದರು.