ಸಮಯದ ಸದ್ಬಳಕೆ ಮಾಡಿಕೊಳ್ಳಿ

ಶಹಾಬಾದ್​ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು. ಪರಮೇಶ್ವರ ಪೆಂಚನಕರ್​, ಲೋಹಿತ ಕಟ್ಟಿ, ಬನ್ನಿಲಾಲ್​ ಚವ್ಹಾಣ್​, ಕರಿಬಸಪ್ಪ, ಅಂಬಿಕಾ ಹಂಗರಗಿ ಇತರರಿದ್ದರು.
ಶಹಾಬಾದ್​ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು. ಪರಮೇಶ್ವರ ಪೆಂಚನಕರ್​, ಲೋಹಿತ ಕಟ್ಟಿ, ಬನ್ನಿಲಾಲ್​ ಚವ್ಹಾಣ್​, ಕರಿಬಸಪ್ಪ, ಅಂಬಿಕಾ ಹಂಗರಗಿ ಇತರರಿದ್ದರು.
Published on
ಶಹಾಬಾದ್​: ಪದವಿಪೂರ್ವ ಶಿಕ್ಷಣ ಪ್ರತಿ ವಿದ್ಯಾರ್ಥಿಯ ಜೀವನದ ಪ್ರಮುಖ ತಿರುವಾಗಿದ್ದು, ಈ ಹಂತದಲ್ಲಿ ಸಮಯದ ಸದ್ಬಳಕೆ ಮಾಡಿಕೊಂಡು ಕಠಿಣ ಶ್ರಮದೊಂದಿಗೆ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು ಎಂದು ಪ್ರಾಚಾರ್ಯ ಪರಮೇಶ್ವರ ಪೆಂಚನಕರ್​ ಹೇಳಿದರು. ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪತ್ರಕರ್ತ ಲೋಹಿತ ಕಟ್ಟಿ ಮಾತನಾಡಿದರು. ಬನ್ನಿಲಾಲ್​ ಚವ್ಹಾಣ್​, ಕರಿಸಬಸಪ್ಪ, ಅಂಬಿಕಾ ಹಂಗರಗಿ, ಮಹಾದೇವ ಪಾಟೀಲ್​, ರವಿ ಚವ್ಹಾಣ್​, ಬಸವರಾಜ ಪರಸಗೊಂಡ, ಜಗದೇವಪ್ಪ, ಸುರೇಶ ಪವಾರ್​, ವೆಂಕಟೇಶ, ಮರಲಿಂಗ ಯಾದಗಿರಿ, ಸ್ಟೇಲಿನಾ ಇದ್ದರು. ಸಾವಿತ್ರಿ ಪ್ರಾರ್ಥಿಸಿದಳು, ನಾಗಮ್ಮ ಸ್ವಾಗತಿಸಿಳು, ದೇವಿಕಾ, ಸಂಗೀತಾ ನಿರೂಪಣೆ ಮಾಡಿದರು. ಭವಾನಿ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net