ಶಿರಾ ತಾಲೂಕು Desk ಬುಕ್ಕಾಪಟ್ಟಣ ಹೋಬಳಿ ಗಾಣದ ಹುಣಸೆ ಗ್ರಾಮದ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಮಾಜ ಸೇವಕ, ಬಿಆರ್ಎಂ ಸತ್ಯನಾರಾಯಣ ಅವರನ್ನು ಸನ್ಮಾನಿಸಲಾಯಿತು. ಮುಖ್ಯಶಿಕ್ಷಕ ನರಸಿಂಹಮೂರ್ತಿ, ಎಸ್ಡಿಎಂಸಿ ಅಧ್ಯಕ್ಷ ಶಾಂತಕುಮಾರ್, ಉಪಾಧ್ಯಕ್ಷೆ ಸವಿತಾ ಇದ್ದರು.
Published on:
Copied
Follow Us
ಬುಕ್ಕಾಪಟ್ಟಣ: ಶಿಕ್ಷಣಕ್ಕೆ ಕೊಡುವ ದಾನ ಎಂದಿಗೂ Desk ಕ್ಷಯವಾಗುವುದಿಲ್ಲ. ಅದು ಮಕ್ಕಳ ಜ್ಞಾನವಾಗಿ, ಸಂಸ್ಕಾರವಾಗಿ ಮತ್ತು ದೇಶದ ಅಭಿವೃದ್ಧಿಯಾಗಿ ಬೆಳೆಯುತ್ತದೆ ಎಂದು ಸಮಾಜ ಸೇವಕ, ಬಿಆರ್ಎಂ ಸತ್ಯನಾರಾಯಣ ಅಭಿಪ್ರಾಯಪಟ್ಟರು.
ಶಿರಾ ತಾಲೂಕು ಬುಕ್ಕಾಪಟ್ಟಣ ಹೋಬಳಿಯ ಗಾಣದ ಹುಣಸೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಯೋಗದಲ್ಲಿ ಉಚಿತ ಡೆಸ್ಕ್ ಕೊಡುಗೆಯಾಗಿ ನೀಡಿ ಮಾತನಾಡಿ, ಮಕ್ಕಳು ದೇಶದ ಸಂಪತ್ತು, ಅವರನ್ನು ಸರಿಯಾದ ರೀತಿಯಲ್ಲಿ ತಿದ್ದಿ ಬುದ್ಧಿ ಹೇಳುವ ಮೂಲಕ ಅವರನ್ನು ದೇಶದ ಆಸ್ತಿಯನ್ನಾಗಿ ಮಾಡಬೇಕು. ಮಕ್ಕಳಿಗೆ ಮಾಡುವ ಸೇವೆಯು ಭಗವಂತನ ಸೇವೆಯಾಗುತ್ತದೆ. ದೇಶದ ಅಭಿವೃದ್ಧಿಗೆ ನೀಡುವ ಕೊಡುಗೆಯಾಗುತ್ತದೆ. ತನ್ನೂರಿನ ಶಾಲೆಯ ಅಭಿವೃದ್ಧಿಯ ಬಗ್ಗೆ ಉನ್ನತ ಕನಸು ಕಾಣಬೇಕು. ಆ ಕನಸನ್ನು ಉತ್ತಮ ಪ್ರಜೆಯಾಗಿ ದೇಶಕ್ಕೆ ಕೀರ್ತಿ ಹೆಸರು ತಂದುಕೊಟ್ಟು ನನಸು ಮಾಡಬೇಕು ಎಂದು ತಿಳಿಸಿದರು. Desk
ಶಾಲೆಯ ಆವರಣಕ್ಕೆ ಬಣ್ಣ ಬಳಿಸಿದ ದಾಳಿಂಬೆ ಶ್ರೀನಿವಾಸ್ ಅವರ ಪುತ್ರ ರವಿ, ಅರ್ಚಕ ಭೂತೇಶ್, ಕರಿಯಣ್ಣ ಅವರನ್ನು ಸನ್ಮಾನಿಸಲಾಯಿತು.
ಸದಸ್ಯರಾದ ಶ್ರೀದೇವಿ, ಶಿವಲಿಂಗಮ್ಮ, ಪಾಲಕರಾದ ದೊಡ್ಡ ತಿಮ್ಮಯ್ಯ, ಜಿ.ಬಿ.ಕರಿಯಣ್ಣ, ರಮೇಶ್, ಶಿವಣ್ಣ, ನಾಗಮ್ಮ, ಶಿಕ್ಷಕರಾದ ಆರ್.ತಿಪ್ಪೇಸ್ವಾಮಿ, ಎ.ಬಿ. ಶಿಲ್ಪಾ, ಟಿ.ಅಭಿಲಾಶ್ ಇದ್ದರು.