ಜಿಲ್ಲಾದ್ಯಂತ ಮಕರ ಸಂಕ್ರಾಂತಿ ಸಡಗರ

ಸಂಕ್ರಮಣದ ನಿಮತ್ಯ ಮಲಪ್ರಭೆಗೆ ಗಂಗಾಪೂಜೆ ಸಲ್ಲಿಸಿದ ಉಗರಗೋಳ ಗ್ರಾಮದ ಮಹಿಳೆಯರು.
ಸಂಕ್ರಮಣದ ನಿಮತ್ಯ ಮಲಪ್ರಭೆಗೆ ಗಂಗಾಪೂಜೆ ಸಲ್ಲಿಸಿದ ಉಗರಗೋಳ ಗ್ರಾಮದ ಮಹಿಳೆಯರು.
Published on
ಸವದತ್ತಿ: ತಾಲೂಕಿನ ಮಲಪ್ರಭಾ ನದಿ ದಡ, ನವಿಲು ತೀರ್ಥ ಡ್ಯಾಮ್​, ವರವಿಕೊಳ್ಳ ಸೇರಿ ಜಿಲ್ಲೆಯಾದ್ಯಂತ ಮಕರ ಸಂಕ್ರಾಂತಿಯನ್ನು ಸಂಭ್ರಮದಿಂದ ಗುರುವಾರ ಆಚರಿಸಲಾಯಿತು. ಕುಟುಂಬ ಸಮೇತರಾಗಿ ಆಗಮಿಸಿದ ಜನರು ಪುಣ್ಯ ಸ್ನಾನ, ಗಂಗಾ ಪೂಜೆ ನೆರವೇರಿಸಿದರು.
ನೆವೇದ್ಯ ಅರ್ಪಿಸಿ, ನೆರಳಿರುವ ಸ್ಥಳಗಳಲ್ಲಿ ಕುಳಿತು ಸಂಕ್ರಾಂತಿ ಊಟ ಸವಿದರು. ಎಳ್ಳು, ಬೆಲ್ಲ, ಕಬ್ಬು ಹಾಗೂ ಸಿಹಿ ತಿಂಡಿಗಳೊಂದಿಗೆ ಹಬ್ಬದ ಸಂಭ್ರಮ ಹಂಚಿಕೊಂಡರು. ಸವದತ್ತಿ ನಗರ ಸೇರಿ ಸುತ್ತಮುತ್ತಲಿನ ವಿವಿಧ ಗ್ರಾಮಗಳಿಂದ ಜನರು ಕಾರು, ಟ್ರ್ಯಾಕ್ಟರ್​, ಟಂಟಂ, ಮೋಟಾರ್​ ಬೆಕ್​ಗಳ ಮೂಲಕ ಆಗಮಿಸಿದ್ದರು. ನದಿ ದಡಗಳಲ್ಲಿ ಜನದಟ್ಟಣೆ ಹೆಚ್ಚಿರುವ ಪ್ರದೇಶಗಳಲ್ಲಿ ಪೊಲೀಸ್​ ಇಲಾಖೆ ಬಂದೋಬಸ್ತ್​ ಕಲ್ಪಿಸಿದ್ದರು.
ಒಡಕನ ಹೊಳಿ, ಕುಮಾರೇಶ್ವರ ದೇವಸ್ಥಾನ ಸೇರಿ ತಾಲೂಕಿನ ಎಲ್ಲ ದೇವಸ್ಥಾನಗಳಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜೆ, ಅಭಿಷೇಕ ಹಾಗೂ ಧಾರ್ಮಿಕ ಕಾರ್ಯಕ್ರಮ ನಡೆದವು. ಸವದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಸರ್ಕಾರದ ಆದೇಶದಂತೆ ವಿಶೇಷ ಪೂಜೆ ಸಲ್ಲಿಸಿ, ದರ್ಶನ ಪಡೆದ ಭಕ್ತರಿಗೆ ದೇವಸ್ಥಾನದ ವತಿಯಿಂದ ಎಳ್ಳು, ಬೆಲ್ಲ ವಿತರಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net