ಕಾಮಗಾರಿಯಲ್ಲಿ ಉತ್ತಮ ಗುಣಮಟ್ಟ ಕಾಯ್ದುಕೊಳ್ಳಿ

ಬೀಳಗಿ ತಾಲೂಕಿನಿ ಬಾವಲತ್ತಿ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಜೆ.ಟಿ.ಪಾಟೀಲ ಭೂಮಿ ಪೂಜೆ ನೆರವೇರಿಸಿದರು. ಶ್ರೀಮಠ ವಿಜಯವೇಂದಾಗ ಸ್ವಾಮೀಜಿ, ಆರ್.ಆರ್.ಪೂಜಾರ, ಬೂದಿಹಾಳ ಪಿಕೆಪಿಎಸ್ ಉಪಾಧ್ಯಕ್ಷ ಎ.ಆರ್.ಪೂಜಾರ, ಹನಮಂತ ಕನಸಗೇರಿ ಇದ್ದರು.
ಬೀಳಗಿ ತಾಲೂಕಿನಿ ಬಾವಲತ್ತಿ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಜೆ.ಟಿ.ಪಾಟೀಲ ಭೂಮಿ ಪೂಜೆ ನೆರವೇರಿಸಿದರು. ಶ್ರೀಮಠ ವಿಜಯವೇಂದಾಗ ಸ್ವಾಮೀಜಿ, ಆರ್.ಆರ್.ಪೂಜಾರ, ಬೂದಿಹಾಳ ಪಿಕೆಪಿಎಸ್ ಉಪಾಧ್ಯಕ್ಷ ಎ.ಆರ್.ಪೂಜಾರ, ಹನಮಂತ ಕನಸಗೇರಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಧಿಕಾರಿಗಳಿಗೆ ಶಾಸಕ ಜೆ.ಟಿ.ಪಾಟೀಲ ಸೂಚನೆ
  • ಭೂಮಿ ಪೂಜೆ

ಬೀಳಗಿ: ಸರ್ಕಾರಿ ಯೋಜನೆಯಲ್ಲಿ ಪ್ರತಿಯೊಂದು ಗ್ರಾಮದಲ್ಲಿ ನಡೆಯುವ ದೇವಸ್ಥಾನದ ಅಭಿವೃದ್ಧಿ ಕಾಮಗಾರಿಗಳು ಗುಣಮಟ್ಟ ಹೊಂದಿರಬೇಕು ಮತ್ತು ಗ್ರಾಮದ ಪ್ರಮುಖರು ಹೇಳಿದಂತೆ ಕೆಲಸ ನಡೆಯಬೇಕು ಎಂದು ಶಾಸಕ ಜೆ.ಟಿ.ಪಾಟೀಲ ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ಸೂಚನೆ ನೀಡಿದರು. 

ತಾಲೂಕಿನ ಬಾವಲತ್ತಿ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ಕಾರ್ಯಾಲಯದ ವತಿಯಿಂದ 2025-26ನೇ ಸಾಲಿನ ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಅಂದಾಜು 10 ಲಕ್ಷ ರೂ.ಗಳ ವೆಚ್ಚದಲ್ಲಿ ಪೂರ್ಣಾನಂದ ಮಠ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. 

ಬಾವಲತ್ತಿ ಗ್ರಾಮದಿಂದ ಕುಂದರಗಿ ಮಾರ್ಗ ಅಡ್ಡ ರಸ್ತೆ ಸಂಪರ್ಕಿಸುವ ಮುಖ್ಯ ರಸ್ತೆ ಡಾಂಬರೀಕರಣ ಕಾಮಗಾರಿಗೆ ಪೂಜೆ ನಂತರ ಗುತ್ತಿಗೆದಾರರು ರಸ್ತೆ ಅಗೆದು ಕಡಿ ಹಾಕಿ ಹಾಗೆಯೇ ಬಿಟ್ಟಿದರಿಂದ ಈ ಮಾರ್ಗವಾಗಿ ಹೋಗುವ ಜನರಿಗೆ ತೊಂದರೆಯಾಗುತ್ತಿದೆ ಎಂದು ಬಾವಲತ್ತಿ ಗ್ರಾಮದ ಜನರು ಶಾಸಕರ ಗಮನಕ್ಕೆ ತಂದರು. 

ಶಾಸಕರು ದೂರವಾಣಿ ಮೂಲಕ ಬೇಗ ಕೆಲಸ ಮಾಡುವುದಾಗಿ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದರು. 

ಶ್ರೀಮಠ ವಿಜಯವೇದಾಂಗ ಶ್ರೀಗಳು, ಆರ್.ಆರ್.ಪೂಜಾರ, ಬೂದಿಹಾಳ ಪಿಕೆಪಿಎಸ್ ಉಪಾಧ್ಯಕ್ಷ ಎ.ಆರ್.ಪೂಜಾರ, ರಸುಲ ಮುಜಾವರ, ಹನಮಂತ ಕನಸಗೇರಿ, ಪುಂಡಲೀಕ ಮರೆಮ್ಮನವರ, ಮುತ್ತಪ್ಪ ಲಮಾಣಿ, ಗೋಪಾಲ ಲಮಾಣಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net