

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:ಸಾಮಾಜಿಕ ಮಾಧ್ಯಮಹಾದಿತಪ್ಪಿ ನಡೆಯುತ್ತಿರುವಇಂದಿನ ದಿನಮಾನಗಳಲ್ಲಿ,ಮುಖ್ಯವಾಹಿನಿಮಾಧ್ಯಮವು ಇಂದಿಗೂ ತನ್ನ ಗಟ್ಟಿತನದಮೂಲಕ ಘನತೆಯನ್ನು ಉಳಿಸಿಕೊಂಡಿದೆಎಂದು ಶಿಕ್ಷಣ ತಜ್ಞ ನಾಡೋಜ ಡಾ.ವೂಡೇಪಿ.ಕೃಷ್ಣಹೇಳಿದ್ದಾರೆ.
ಶೇಷಾದ್ರಿಪುರಕಾಲೇಜಿನಲ್ಲಿ ಬೆಂಗಳೂರು ನಾಗರೀಕರವೇದಿಕೆ ಮತ್ತು ಬುದ್ಧ ಬಸವ ಗಾಂಧಿಸಾಂಸ್ಕೃತಿಕ ಟ್ರಸ್ಟ್ ಕರ್ನಾಟಕಕಾರ್ಯನಿರತ ಪತ್ರಕರ್ತರ ಸಂಘದರಾಜ್ಯಾಧ್ಯಕ್ಷರಾಗಿ 2ನೇಬಾರಿಗೆ ಅವಿರೋಧವಾಗಿ ಆಯ್ಕೆಯಾದವಿಜಯವಾಣಿ ಹಿರಿಯ ವರದಿಗಾರಶಿವಾನಂದ ತಗಡೂರು ಅವರಿಗೆಹಮ್ಮಿಕೊಂಡಿದ್ದ ನಾಗರೀಕ ಸನ್ಮಾನಮತ್ತು ಲೋಹಿಯಾ ಪ್ರಶಸ್ತಿ ಪ್ರದಾನಸಮಾರಂಭದಲ್ಲಿ ಮಾತನಾಡಿದರು.
ಸಮಾಜವಾದದಮುಖಂಡರಾಗಿದ್ದ ರಾಮಮನೋಹರ್ಲೋಹಿಯಾ ಅವರು ‘ಹಳ್ಳಿಯ ಜನರುಎಲ್ಲಿಯವರೆಗೆ ಬಯಲು ಶೌಚವನ್ನುಮುಂದುವರೆಸುತ್ತಾರೋ ಅಲ್ಲಿಯವರೆಗೆಈ ದೇಶ ಅಭಿವೃದ್ಧಿಯಾಗಿಲ್ಲಎಂದರ್ಥ’ ಎಂಬ ಅಭಿಪ್ರಾಯವ್ಯಕ್ತಪಡಿಸಿದ್ದರು.78 ವರ್ಷಗಳಾದರೂಇಂದಿಗೂ ಆ ಅಭಿವೃದ್ಧಿಯನ್ನುಕಾಣಲು ಸಾಧ್ಯವಾಗಿಲ್ಲ.ಸಂಘಟನೆ,ಸಂಸ್ಕಾರ,ಸೇವೆ ವ್ಯಕ್ತಿಯಸಾಧನೆಗೆ ಮುಖ್ಯ.ಇನ್ನೊಬ್ಬರಸೇವೆಯಲ್ಲಿ ನಮ್ಮನ್ನು ನಾವುಕಳೆದುಕೊಳ್ಳುವುದೇ ಸಾರ್ಥಕಬದುಕು. ಅಂತಹವ್ಯಕ್ತಿತ್ವದ ಮೂಲಕ ಇತರರ ಸೇವೆಗೆತೊಡಗಿಸಿಕೊಂಡಿರುವ ಶಿವಾನಂದತಗಡೂರು ಅವರಿಗೆ ಲೋಹಿಯಾ ಪ್ರಶಸ್ತಿನೀಡುತ್ತಿರುವುದು ಅರ್ಥಪೂರ್ಣಎಂದರು.
ಸಮಾರಂಭದಲ್ಲಿಕನ್ನಡಪ್ರಭ ಸಂಪಾದಕ ರವಿಹೆಗಡೆ,ಪ್ರಜಾವಾಣಿಸಂಪಾದಕ ರವೀಂದ್ರ ಭಟ್ಟ,ದೂರದರ್ಶನದಕಾರ್ಯಕ್ರಮ ಮುಖ್ಯಸ್ಥೆ ಎಚ್.ಎನ್.ಆರತಿ,ತ್ಯಾಗರಾಜಕೋ-ಆಪರೇಟಿವ್ಬ್ಯಾಂಕ್ ಅಧ್ಯಕ್ಷ ಎಂ.ಆರ್.ವೆಂಕಟೇಶ್,ನಾಟಕ ಅಕಾಡೆಮಿಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿಕಾರ್ಯಕ್ರಮದ ಸಂಯೋಜಕ ಡಾ.ಎಸ್.ರಾಮಲಿಂಗೇಶ್ವರ(ಸಿಸಿರಾ),ಕಾರ್ಯನಿರತಪತ್ರಕರ್ತರ ಸಂಘದ ವಿವಿಧ ಘಟಕಗಳಪದಾಧಿಕಾರಿಗಳು,ಹಿರಿಯ ಪತ್ರಕರ್ತರುಪಾಲ್ಗೊಂಡಿದ್ದರು.
ಪತ್ರಕರ್ತರುಮೃತಪಟ್ಟರೆ ಅವರಿಗೆ ಪರಿಹಾರನೀಡುವ ಯಾವುದೇ ಯೋಜನೆಗಳುಸರ್ಕಾರದಲ್ಲಿ ಇರಲಿಲ್ಲ.ಕರೊನಾ ಸಂದರ್ಭದಲ್ಲಿಮಾಧ್ಯಮಗಳಲ್ಲಿ ಕೆಲಸ ಮಾಡುವುಸಾಕಷ್ಟು ಜನ ಪ್ರಾಣ ಕಳೆದುಕೊಂಡರು.ಆಗ ಅವರಿಗೆಪರಿಹಾರ ನೀಡಲು ಸರ್ಕಾರದ ಮಟ್ಟದಲ್ಲಿಬಹಳಷ್ಟು ಹೋರಾಟ ಮಾಡಬೇಕಾಯಿತು.ಅಂತಿಮವಾಗಿಆಗಿನ ಮುಖ್ಯಮಂತ್ರಿ ಯಡಿಯೂರಪ್ಪನವರುವಿಶೇಷ ಗಮನ ಹರಿಸಿ 5ಲಕ್ಷ ಪರಿಹಾರದಆದೇಶ ಮಾಡಿದರು.ಇಂದು ಅಕಾಲಿಕವಾಗಿಮೃತ ಪಡುವ ಪತ್ರಕರ್ತರ ಕುಟುಂಬಗಳಿಗೆ5 ಲಕ್ಷಪರಿಹಾರ ಸಿಗುವಂತಾಗಿದೆ.ಇದು ನನಗೆ ಅತ್ಯಂತಸಮಾಧಾನ ತಂದ ಕೆಲಸ ಎಂದು ಪ್ರಶಸ್ತಿಪುರಸ್ಕೃತ ಶಿವಾನಂದ ತಗಡೂರುಹೇಳಿದರು.
ಎಡ ಬಲದ ಸಂಘರ್ಷ ಪತ್ರಿಕೋದ್ಯಮದಲ್ಲೂ ಇದೆ. ಅದೆಲ್ಲವನ್ನು ಮೀರಿದ ಮಾನವೀಯತೆ ನಿಜವಾದ ಪತ್ರಕರ್ತನ ಜವಾಬ್ದಾರಿ. ಪತ್ರಕರ್ತರಿಗೆ ಸನ್ಮಾನಕ್ಕಿಂತ ಮಂಗಳಾರತಿಗಳೇ ಹೆಚ್ಚು. ಇದಕ್ಕೆ ಅಪವಾದವೆಂಬಂತೆ ಶಿವಾನಂದ ಅವರು ಕಾರ್ಯ ಮಾಡಿದ್ದಾರೆ.
ಹೋರಾಟದ ಹಿನ್ನೆಲೆಯಲ್ಲಿ ಬಂದ ಪತ್ರಕರ್ತರಿಗೆ ಸಾಮಾಜಿಕ ಕಳಕಳಿ ಹೆಚ್ಚಾಗಿರುತ್ತದೆ. ಅದಕ್ಕೆ ಸಾಕ್ಷಿ ಶಿವಾನಂದ ತಗಡೂರು. ಕರೊನಾ ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದ ಪತ್ರಕರ್ತರಿಗೆ ಹಗಲಿರಳು ನೆರವಾಗುವ ಮೂಲಕ ತಮ್ಮ ಹೊಣೆಗಾರಿಕೆಯನ್ನು ಮೆರೆದಿದ್ದರು.
ವಾಸ್ತವವಾಗಿ ಪತ್ರಕರ್ತರನ್ನು ಬೇಕಾದಾಗ ಬಳಸಿಕೊಂಡು ನಂತರ ಟೀಕೆ ಮಾಡುವವರೆ ಹೆಚ್ಚು. ಆದರೆ ಪತ್ರಕರ್ತರಿಗೆ ನಾಗರಿಕ ಸನ್ಮಾನ ಮಾಡುತ್ತಿರುವುದು ಅತ್ಯಂತ ಅಪರೂಪ. ಶಿವಾನಂದ ತಗಡೂರು ಕಾರ್ಯ ಅದಕ್ಕೆ ಕಾರಣವಾಗಿದೆ