ವದಂತಿಗೆ ಹೆಚ್ಚಿದ ಸಿಲಿಂಡರ್ ಬುಕ್ಕಿಂಗ್

ವದಂತಿಗೆ ಸಿಲಿಂಡರ್ ಬುಕ್ಕಿಂಗ್ ಹೆಚ್ಚಳ
ವದಂತಿಗೆ ಸಿಲಿಂಡರ್ ಬುಕ್ಕಿಂಗ್ ಹೆಚ್ಚಳ
Published on

ಪ್ರಮುಖ ಮುಖ್ಯಾಂಶಗಳು

  • ವದಂತಿಗೆ ಹೆಚ್ಚಿದ ಸಿಲಿಂಡರ್ ಬುಕ್ಕಿಂಗ್
  • ಜಿಲ್ಲೆಯಲ್ಲಿ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯವಿಲ್ಲ
  • ಜಿಲ್ಲಾಡಳಿತ ಸ್ಪಷ್ಟನೆ ನಡುವೆ ಹೆಚ್ಚಿದ ಆತಂಕ
ವದಂತಿಗೆ ಹೆಚ್ಚಿದ ಸಿಲಿಂಡರ್ ಬುಕ್ಕಿಂಗ್
| ಗೃಹ ಬಳಕೆಗೆ ಸಮಸ್ಯೆ ಇಲ್ಲ | ವಾಣಿಜ್ಯ ಬಳಕೆದಾರರಿಗೆ ಸಂಕಷ್ಟ !
ಆನಂದ ಭಮ್ಮನ್ನವರ ಚಿಕ್ಕೋಡಿ
ಜಿಲ್ಲೆಯಲ್ಲಿ ಅಡುಗೆ ಅನಿಲ ಸಿಲಿಂಡರ್‌ಗಳ ಕೊರತೆ ವದಂತಿ ತೀವ್ರಗೊಂಡಿದ್ದು, ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ ಎಂಬ ಜಿಲ್ಲಾಡಳಿತ ಭರವಸೆ ನಡುವೆಯು ಸಿಲಿಂಡರ್ ಬುಕ್ಕಿಂಗ್ ಸಂಖ್ಯೆ ಹೆಚ್ಚಾಗಿದ್ದು, ಬುಕ್ ಮಾಡಿದರೂ ಸಿಲಿಂಡರ್ ಪೂರೈಸುತ್ತಿಲ್ಲ ಎಂಬ ದೂರು ಗ್ರಾಹಕರಿಂದ ಕೇಳಿ ಬರುತ್ತಿದೆ.
ಮಧ್ಯ ಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದ ರಾಜ್ಯಕ್ಕೆ ಅನಿಲ ಪೂರೈಕೆಯಲ್ಲಿನ ವ್ಯತ್ಯಯ ಉಂಟಾಗಿದೆ. ಇದರೊಂದಿಗೆ ಗ್ಯಾಸ್ ಸಿಲಿಂಡರ್ ಅಭಾವದ ವದಂತಿಯಿಂದ ಜನರು ತಮ್ಮ ಬಳಿ ಇರುವ ಹೆಚ್ಚುವರಿ ಸಿಲಿಂಡರ್ ತುಂಬಿಸಿಕೊಳ್ಳಲು ಗಣನೀಯ ಸಂಖ್ಯೆಯಲ್ಲಿ ಬುಕ್ಕಿಂಗ್ ಮಾಡುತ್ತಿರುವ ಪರಿಣಾಮ ಗ್ಯಾಸ್ ಏಜನ್ಸಿ ಕೇಂದ್ರಗಳ ಮುಂದೆ ಜನರು ಸಾಲುಗಟ್ಟಿ ನಿಲ್ಲುತ್ತಿರುವುದು ಸಾಮಾನ್ಯವಾಗಿದೆ.
ಜಿಲ್ಲೆಯಲ್ಲಿ ವಿವಿಧ ಕಂಪನಿಯ 12.49 ಲಕ್ಷ ಕುಟುಂಬಗಳಿಗೆ ಅಡುಗೆ ಅನಿಲ ಸಂಪರ್ಕಗಳಿವೆ. ಜಿಲ್ಲೆಯಲ್ಲಿ ನಿತ್ಯ 30 ಸಾವಿರ ಸಿಲಿಂಡರ್‌ಗಳಿಗೆ ಬೇಡಿಕೆಯಿದೆ. ಆದರೆ 24 ಸಾವಿರ ಸಿಲಿಂಡರ್‌ಗಳು ಮಾತ್ರ ಪೂರೈಕೆಯಾಗುತ್ತಿವೆ. ಗೃಹ ಬಳಕೆ ಸಿಲಿಂಡರ್ ಪೂರೈಕೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ವಾಣಿಜ್ಯ ಸಿಲಿಂಡರ್‌ಗಳು ಮೊದಲು 1650 ಸಿಲಿಂಡರ್‌ಗಳು ಪೂರೈಕೆಯಾಗುತ್ತಿವೆ. ಆದರೆ ಈಗ ನಿತ್ಯ ೨೫೦ ಸಿಲಿಂಡರ್‌ಗಳು ಮಾತ್ರ ಪೂರೈಕೆಯಾಗುತ್ತಿರುವ ಹಿನ್ನಲೆಯಲ್ಲಿ ವಾಣಿಜ್ಯ ಬಳಕೆದಾರರಿಗೆ ಸಂಕಷ್ಟ ಎದುರಾಗಿದೆ.
ಗ್ರಾಹಕರಲ್ಲಿ ಹೆಚ್ಚಿದ ಆತಂಕ:
ಅನಿಲ ಸರಬರಾಜಿನಲ್ಲಿ ವ್ಯತ್ಯಯದಿಂದಾಗಿ ಅನಿಲ ಬಳಕೆದಾರರ ಗೊಂದಲ ಮತ್ತು ಆತಂಕಕ್ಕೆ ಕಾರಣವಾಗಿದೆ.ಜಿಲ್ಲಾಡಳಿತ, ಉಪ ವಿಭಾಗಾಧಿಕಾರಿಗಳು, ತಹಶೀಲ್ದಾರರು ಅನಿಲ ಕಂಪನಿ ವಿತರಕರ ಜತೆ ಸಭೆ ನಡೆಸಿ,ಜಿಲ್ಲೆಯಲ್ಲಿ ಯಾವುದೇ ಅಭಾವವಿಲ್ಲ ಎಂದು ಭರವಸೆ ನೀಡಿದ್ದಾರೆ. ಅದ್ಯಾಗೂ ಸಮಸ್ಯೆ ನಿವಾರಣೆಯಾಗಿಲ್ಲ. ಈ ಮೊದಲು ಬುಕ್ಕಿಂಗ್ ಮಾಡಿದ ಮರು ದಿನವೇ ಸಿಲಿಂಡರ್ ಪೂರೈಕೆಯಾಗುತ್ತಿದೆ. ಆದರೆ ಈ ಹೊಸ ನಿಯಮದ ಪ್ರಕಾರ ಗ್ರಾಮೀಣ ಪ್ರದೇಶದಲ್ಲಿ 45 ದಿನ, ನಗರ ಪ್ರದೇಶದಲ್ಲಿ 25 ದಿನ ನಿಗದಿಯಾಗಿದೆ. ಹೆಚ್ಚುವರಿ ಸಿಲಿಂಡರ್ ಇದ್ದವರು ಬುಕ್ಕಿಂಗ್ ಮಾಡುತ್ತಿರುವುದು ಸಮಸ್ಯೆಗೆ ಕಾರಣ ಎನ್ನಲಾಗುತ್ತಿದೆ.
ಜಾತ್ರೆ,ಮದುವೆ ಸಮಾರಂಭಕ್ಕೂ ತಟ್ಟಿದ ಬಿಸಿ:
ಜಿಲ್ಲೆಯಲ್ಲಿ ವಾಣಿಜ್ಯ ಬಳಕೆ ಸಿಲಿಂಡರ್ ಪೂರೈಕೆಯಲ್ಲಿ ಗಣನೀಯ ಪ್ರಮಾಣದಲ್ಲಿ ಅಭಾವ ಉಂಟಾಗಿದೆ. ಶೇ.70ರಷ್ಟು ಕೊರತೆಯಿಂದಾಗಿ ಮದುವೆ, ಸಭೆ ,ಜಾತ್ರೆ,ಸಮಾರಂಭಗಳಲ್ಲಿ ಅಡುಗೆ ಮಾಡಲು ಸಿಲಿಂಡರ್ ಇಲ್ಲದೆ ಬಾಣಸಿಗರು ಸೌಧ ಅಡುಗೆಗೆ ಮೊರೆ ಹೋಗುವಾಗ, ಇನ್ನು ಕೆಲವಡೆ ಹೆಚ್ಚಿನ ಹಣ ನೀಡಿ ಗೃಹ ಬಳಕೆ ಸಿಲಿಂಡರ್ ಬಳಸುತ್ತಿರುವುದು ಕಂಡು ಬಂದಿದೆ.
ಭಾಕ್ಸ್
ಜಿಲ್ಲೆಯಲ್ಲಿ 14,626 ಗೃಹ ಬಳಕೆ, 1751 ವಾಣಿಜ್ಯ ಬಳಕೆ ಸಿಲಿಂಡರ್ ದಾಸ್ತುನುವಿದೆ. ಗೃಹ ಬಳಕೆ ಸಿಲಿಂಡರ್ ಪೂರೈಕೆಯಲ್ಲಿ ಯಾವುದೇ ಸಮಸ್ಯೆ ಇಲ್ಲದಿದ್ದರೂ , ಗ್ಯಾಸ್ ಏಜನ್ಸಿಯವರು ಕೃತಕ ಅಭಾವ ಸೃಷ್ಟಿಸಿದ್ದಾರೆ ಎಂಬ ದೂರು ಕೇಳಿ ಬರುತ್ತಿವೆ. ಅಕ್ರಮ ಸಿಲಿಂಡರ್ ದಾಸ್ತುನು ಮಾಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆಯೂ ಒತ್ತಾಯ ಕೇಳಿ ಬಂದಿದೆ.
--
ಕೋಟ್-೧
ಜಿಲ್ಲೆಯಲ್ಲಿ ಗೃಹ ಬಳಕೆ ಸಿಲಿಂಡರ್ ಪೂರೈಕೆಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಹೆಚ್ಚುವರಿ ಬುಕ್ಕಿಂಗ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ವಾಣಿಜ್ಯ ಬಳಕೆ ಸಿಲಿಂಡರ್ ಪೂರೈಕೆ ಕಡಿಮೆ ಸಮಸ್ಯೆಯಾಗುತ್ತಿದೆ.ಅಕ್ರಮ ದಾಸ್ತುನು, ಅಥವಾ ಹೋಟೆಲ್‌ನಲ್ಲಿ ಗೃಹ ಬಳಕೆ ಸಿಲಿಂಡರ್ ಬಳಕೆ ಕಂಡು ಬಂದರೆ ಕಠಿಣ ಕ್ರಮ ಜರುಗಿಸಲಾಗುತ್ತಿದೆ.
ಮಲ್ಲಿಕಾರ್ಜುನ ನಾಯಿಕ
ಉಪ ನಿರ್ದೇಶಕರು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ
ಬೆಳಗಾವಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net