ಎಲ್ಲರನ್ನೂ ಪ್ರೀತಿಸುವುದೇ ವೀರಶೈವ ಸಿದ್ಧಾಂತ; ಉಜ್ಜಯಿನಿ ಜಗದ್ಗುರುಗಳ ಅಭಿಮತ

ಕಾರ್ಯಕ್ರಮದಲ್ಲಿ ಉಜ್ಜಯಿನಿ ಜಗದ್ಗುರುಗಳಿಗೆ ಲಸಮರ್ಪಣೆಯೊಂದಿಗೆ ಗುರುವಂದನೆ ಸಲ್ಲಿಸಲಾಯಿತು. ವಿವಿಧ ಮಠಾಧೀಶರು, ಸಮಿತಿಯ ಪದಾಧಿಕಾರಿಗಳು, ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಉಜ್ಜಯಿನಿ ಜಗದ್ಗುರುಗಳಿಗೆ ಲಸಮರ್ಪಣೆಯೊಂದಿಗೆ ಗುರುವಂದನೆ ಸಲ್ಲಿಸಲಾಯಿತು. ವಿವಿಧ ಮಠಾಧೀಶರು, ಸಮಿತಿಯ ಪದಾಧಿಕಾರಿಗಳು, ಗಣ್ಯರು ಉಪಸ್ಥಿತರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಎಲ್ಲರನ್ನೂ ಪ್ರೀತಿಸುವುದೇ ವೀರಶೈವ ಸಿದ್ಧಾಂತ
  • ಉಜ್ಜಯಿನಿ ಶ್ರೀ ಸಿದ್ದಲಿಂಗ ಜಗದ್ಗುರುಗಳ ಅಭಿಮತ
  • ಇಷ್ಟಲಿಂಗ ಪೂಜೆ, ಜನಜಾಗೃತಿ ಧರ್ಮ ಸಮಾರಂಭದ ಸಮಾರೋಪ

ಬೆಂಗಳೂರು: ಜಗತ್ತಿನಲ್ಲಿಹತ್ತು ಹಲವು ಧರ್ಮ,ಸಂಪ್ರದಾಯ,ಪರಂಪರೆಗಳಿವೆ.ಆ ಯಾವ ಧರ್ಮಗಳನ್ನುಕನಿಷ್ಟವಾಗಿ ಕಾಣದೇ ಸರ್ವರನ್ನೂಪ್ರೀತಿಸುವುದೇ ವೀರಶೈವ ಸಿದ್ಧಾಂತಎಂದು ಉಜ್ಜಯಿನಿ ಜಗದ್ಗುರು ಶ್ರೀಸಿದ್ಧಲಿಂಗ ರಾಜದೇಶೀಕೇಂದ್ರಶಿವಾಚಾರ್ಯ ಭಗವತ್ಪಾದರುಹೇಳಿದ್ದಾರೆ.

ಬಸವನಗುಡಿಬುಲ್ ಟೆಂಪಲ್ ರಸ್ತೆಯ ಶ್ರೀನಿಜಗುಣಕಲ್ಯಾಣ ಮಂಟಪದಲ್ಲಿ ಶ್ರೀಮದ್ಉಜ್ಜಯಿನಿ ಜಗದ್ಗುರುಗಳ ಪೂಜಾಸಮಿತಿ ಹಮ್ಮಿಕೊಂಡಿದ್ದ ಇಷ್ಟಲಿಂಗಮಹಾಪೂಜೆ ಹಾಗೂ ಜನಜಾಗೃತಿ ಧರ್ಮಸಮಾರೋಪ ಸಮಾರಂಭದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.

ಧರ್ಮಎಂಬುದಕ್ಕೆ ವ್ಯಾಖ್ಯಾನವೇ ‘ನೀವುಬದುಕಿ ಇತರರನ್ನು ಬದುಕಲು ಬಿಡಿ’ಎಂಬುದಾಗಿದ್ದು,ಈ ವ್ಯಾಖ್ಯಾನಕ್ಕೆಪೂರಕವಾಗಿ ವೀರಶೈವ ಸಿದ್ಧಾಂತದವ್ಯಾಖ್ಯಾನವಿದೆ.‘ವಿರೋಧ ರಹಿತಂಶೈವಂ ವೀರಶೈವ ವಿದುರ್ಭುದಾಃ’ಎಂಬ ನೀಲಕಂಠ ಶಿವಾಚಾರ್ಯರ ಕ್ರಿಯಾಸಾರಗ್ರಂಥದ ಸಾಲು ಜಾಗತಿಕ ಸೌಹಾರ್ಧತೆಗೆಸಾಕ್ಷಿಯಾಗಿದೆ.ಯಾವುದೇ ಭೇದವಿಲ್ಲದೆಪ್ರತಿಯೊಬ್ಬ ಜೀವಾತ್ಮನುಪರಮಾತ್ಮನಾಗಲು ಬೇಕಾದ ಶಿವಾದ್ವೈತಸಿದ್ಧಾಂತವನ್ನು ಭೋದಿಸಿರುವಆದಿ ಜಗದ್ಗುರು ಪಂಚಾಚಾರ್ಯರುಎಲ್ಲ ವರ್ಗದ ಜನರಿಗೆ ಆಧ್ಯಾತ್ಮಿಕಸಾಧನೆಗೆ ಅವಕಾಶ ನೀಡಿದ್ದಾರೆ.ಕೇದಾರ ಪೀಠದಘಂಟಾಕರ್ಣ ಭಗವತ್ಪಾದರು ಶಿವಜ್ಞಾನವನ್ನುಉಪದೇಶ ಮಾಡಿದ ಲವಾಗಿ ವ್ಯಾಸರು18 ಪುರಾಣ,ಬ್ರಹ್ಮಸೂತ್ರವನ್ನುರಚಿಸಿದ್ದಾರೆ.ವ್ಯಾಸರೇ ಹೇಳಿರುವಕೀಟ ಭ್ರಮರ ನ್ಯಾಯದಂತೆ ಲಿಂಗಧಾರಣೆಮಾಡಿಕೊಂಡು ಸದಾ ಶಿವಯೋಗದಲ್ಲಿತಲ್ಲೀನನಾಗುವ ಜೀವಾತ್ಮ ಸ್ವತಃಪರಮಾತ್ಮನಾಗಲು ಸಾಧ್ಯ ಎಂದುಜಗದ್ಗುರುಗಳು ವಿವರಿಸಿದರು.

ಸಮಾರಂಭದಲ್ಲಿರಾಜಾಪುರ,ನಾಗಲಾಪುರ,ಚಿಕ್ಕಕಲ್ಲುಬಾಳುಮಠದ ಶ್ರೀಗಳು ಉಪಸ್ಥಿತರಿದ್ದರು.ಮುಖಂಡರಾದ ವಾಗೀಶ್ಪ್ರಸಾದ್, ಮೋಹನ್ಕುಮಾರ್, ಸಮಿತಿಅಧ್ಯಕ್ಷ ಷಡಕ್ಷರಿಶಾಸಿ,ಉಪಾಧ್ಯಕ್ಷಶಿವಶಂಕರ ಶಾಸಿ,ಖಜಾಂಚಿ ಬಿಜ್ಜಳ್ಳಿನಂದೀಶ್ ಮತ್ತಿತರರು ಪಾಲ್ಗೊಂಡಿದ್ದರು

ಪಂಚಪೀಠಗಳ ಜಗದ್ಗುರುಗಳು ಮಾನವ ಧರ್ಮದ ವಿಶಾಲ ಚಿಂತನೆಯನ್ನು ಸಮುದಾಯದಲ್ಲಿ ಬಿತ್ತಿ ಬೆಳೆಸುತ್ತಿವೆ. ಮುಂದಿನ ದಿನಗಳಲ್ಲಿ ಬೆಂಗಳೂರು ನಗರದ ಮಹದೇವಪುರ ಭಾಗದಲ್ಲೂ ಜಗದ್ಗುರುಗಳ ಕಾರ್ಯಕ್ರಮವನ್ನು ಆಯೋಜಿಸಲಾಗುವುದು

— ಮಹೇಂದ್ರ ಮೋದಿ, ಬಿಜೆಪಿ ಮುಖಂಡರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net