ಲೋಕಾಯುಕ್ತ ದಾಳಿ 1000 ಕ್ವಿಂಟಲ್ ಪಡಿತರ ಅಕ್ಕಿ ಪತ್ತೆ

ಅಕ್ಕಿ ಗೋದಾಮಿನ ಮೇಲೆ ಲೋಕಾಯುಕ್ತ, ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರ ನೇತೃತ್ವದಲ್ಲಿ ದಾಳಿ ನಡೆಯಿತು
ಅಕ್ಕಿ ಗೋದಾಮಿನ ಮೇಲೆ ಲೋಕಾಯುಕ್ತ, ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರ ನೇತೃತ್ವದಲ್ಲಿ ದಾಳಿ ನಡೆಯಿತು
Published on

ಪ್ರಮುಖ ಮುಖ್ಯಾಂಶಗಳು

  • ಬೆಂಗಳೂರು ನಗರ 22, ಗ್ರಾಮಾಂತರ 5 ಕಡೆ ದಾಳಿ
  • FCI, ಖಾಸಗಿ ಗೋದಾಮಿನಲ್ಲಿ ಪಡಿತರ ದಾಸ್ತಾನು
  • ಪಾಲಿಶ್ ಮಾಡಿ ಕಾಳಸಂತೆಗೆ ಮಾರಾಟ ದಂಧೆ ಬಯಲು
ಬೆಂಗಳೂರು: ಬಡವರಿಗೆ ವಿತರಣೆಯಾಗಬೇಕಿದ್ದ ಅನ್ನಭಾಗ್ಯಯೋಜನೆ ಅಕ್ಕಿ ಪ್ರಭಾವಿಗಳ ಹಾಗೂ ನ್ಯಾಯಬೆಲೆ ಅಂಗಡಿದಾರರ ಗೋದಾಮಿನಲ್ಲಿ ದಾಸ್ತಾನು ಮಾಡಿರುವ ಸ್ಥಳಕ್ಕೆ ಲೋಕಾಯುಕ್ತ, ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರ ನೇತೃತ್ವದಲ್ಲಿ ಶುಕ್ರವಾರ ದಾಳಿ ನಡೆಸಿ ಸಾವಿರ ಕ್ವಿಂಟಲ್ ಪಡಿತರ ಅಕ್ಕಿ,ರಾಗಿ, ತೂಕದ ಯಂತ್ರಗಳನ್ನು ವಶಕ್ಕೆ ಪಡೆದಿದ್ದಾರೆ.
ಉಪ ಲೋಕಾಯುಕ್ತರಾದ, ನ್ಯಾಯಮೂರ್ತಿ ಕೆ.ಎನ್.ಣೀಂದ್ರ, ಬಿ.ವೀರಪ್ಪ ಹಾಗೂ ಉಪ ನಿಬಂಧಕ ಎನ್.ವಿ.ಅರವಿಂದ್ ಸೇರಿ ಬೆಂಗಳೂರು ನಗರ ಜಿಲ್ಲೆಯಲ್ಲಿ 22 ಹಾಗೂ ಬೆಂಗಳೂರು ಗ್ರಾಮಾಂತರ ಭಾಗದಲ್ಲಿ 5 ತಂಡಗಳನ್ನು ರಚನೆ ಮಾಡಿ ಏಕಕಾಲಕ್ಕೆ 27 ಕಡೆ ದಾಳಿ ನಡೆಸಿದ್ದರು.
ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಗೋದಾಮು, ಖಾಸಗಿ ಗೋದಾಮುಗಳ ಮೇಲೆ ನಡೆಸಿದ ದಾಳಿ ವೇಳೆ ಕೋಟ್ಯಂತರ ರೂ.ಮೌಲ್ಯದ ಪಡಿತರ ಅಕ್ಕಿ ಪತ್ತೆಯಾಗಿದೆ.

ಎಲ್ಲಲ್ಲಿ ದಾಳಿ:

ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ.ನಿ. ಶಾಂತಿನಗರ, ಬೊಬ್ಬಮನಹಳ್ಳಿ ಸಗಟು ಮಳಿಗೆ-1, ಬೆಂಗಳೂರು ದಕ್ಷಿಣ, ಬಸವನಗುಡಿ ಸಹಕಾರ ಸಂಘ, ಪಡಿತರ ಸಗಟು ವ್ಯಾಪಾರ ಎನ್.ಆರ್.ಕಾಲನಿ ಬಸವನಗುಡಿ, ಬೆಂಗಳೂರು ದಕ್ಷಿಣ ವಲಯ ವ್ಯಾಪ್ತಿಯ ಹನುಮಂತ ನಗರ, ಸುಂಕದ ಕಟ್ಟಿಯಲ್ಲಿ ದಾಳಿ ನಡೆಸಿದ್ದಾರೆ.
ಯಶವಂತಪುರ ಯಾರ್ಡ್‌ನ ಎನ್‌ಜಿಜಿ-1 ಗೋದಾಮಿ ಪರಿಶೀಲನೆ ವೇಳೆ 200 ಚೀಲದಲ್ಲಿ 100 ಕ್ವಿಂಟಲ್ ಅಕ್ಕಿಯನ್ನು ಯಾವುದೇ ಬಿಲ್ ಇಲ್ಲದೆ ಕಾಳಸಂತೆಗೆ ಕಳುಹಿಸಲಾಗಿರುವುದು ಪತ್ತೆಯಾಗಿದೆ. ಮಾನ್ಯೇಜರ್ ನಾರಾಯಣ್ ಹಾಗೂ ಕಂಪ್ಯೂಟರ್ ಆಪರೇಟರ್ ಶಂಕರ್ ಇವರ ವಿಚಾರಣೆ ವೇಳೆ ಪಡಿತರ ಅಕ್ಕಿಯನ್ನು ಕನ್ನಡ ಗೆಳೆಯರ ಬಳಗ ನ್ಯಾಯಬೆಲೆಗೆ ಅಂಗಡಿಗೆ ಕಳುಹಿಸಿರುವುದಾಗಿ ಹೇಳಿದ್ದಾರೆ. ಲೋಕಾಯುಕ್ತರ ತಂಡ, ನ್ಯಾಯಬೆಲೆ ಅಂಗಡಿ ಮಾಲೀಕರಾದ ರಾಧಾ ಎಂಬುವರಿಗೆ ದೂರವಾಣಿ ಕರೆ ಮಾಡಿ ಸ್ಥಳದಲ್ಲೇ ವಿಚಾರಣೆ ಮಾಡಿದಾಗ ಯಾವುದೇ ಪಡಿತರ ಅಕ್ಕಿ ಪೂರೈಕೆ ಮಾಡಿಲ್ಲ ಎಂಬ ಸಂಗತಿ ಬಯಲಾಗಿದೆ. ಮ್ಯಾನೇಜರ್ ಹಾಗೂ ಕಂಪ್ಯೂಟರ್ ಆಪರೇಟರ್‌ನ್ನು ಬಂಧಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

30 ಸಾವಿರ ಗೋಣಿ ಚಿಲ ಪತ್ತೆ:

ನಗರದ ದಾಸನಪುರ ಹೋಬಳಿ ವ್ಯಾಪ್ತಿಯ ಅನ್ನಪೂಣೇರ್ಶವರಿ ಬಡವಾಣೆಯ ಸುಬ್ಬರಾಜ್ ಎಂಬುವರ ಖಾಸಗಿ ಗೋದಾಮಿನಲ್ಲಿ 6 ಟನ್ ಅಕ್ಕಿ, 5 ಟನ್ ರಾಗಿ ಹಾಗೂ 30 ಸಾವಿರ ಸರ್ಕಾರದ ಲೋಗೋ ಹೊಂದಿರುವ ಗೋಣಿಚೀಲಗಳು ಪತ್ತೆಯಾಗಿವೆ.

ಪಾಲಿಶ್ ಮಾಡಿ ಕೋಟಿ ಕೋಟಿ ರೂ.ವ್ಯವಹಾರ

ನ್ಯಾಯಬೆಲೆ ಅಂಗಡಿ ಹೆಸರಿನಲ್ಲಿ ಮತ್ತು ಕೆಎ್ಸಿ ಗೋದಾಮಿನಿಂದ ಖಾಸಗಿ ವ್ಯಕ್ತಿಗಳ ಗೋಡೌನ್ ಸೇರುತ್ತಿದ್ದ ಪಡಿತರ ಅಕ್ಕಿಪಾಲಿಶ್ ಆಗಿ, ಮತ್ತೆ ನಗರದ ವಿವಿಧ ಅಂಗಡಿ, ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿತ್ತು. ಅಲ್ಲದೇ ರಾಜ್ಯದ ಪಡಿತರ ಅಕ್ಕಿ ನೆರೆಯ ರಾಜ್ಯಗಳಿಗೆ ಅಕ್ರಮ ದಂಧೆಕೋರರು ರಾಜಾರೋಷವಾಗಿ ಸಾಗಣೆ ಮಾಡುತ್ತಿದ್ದರು. ಅನ್ನಭಾಗ್ಯ ಯೋಜನೆ ಹೆಸರಿನ ಲಾರಿಗಳು ನಗರದ ಹಾಗೂ ಗ್ರಾಮಾಂತರ ಜಿಲ್ಲೆಯ ಹೊರ ವಲಯದಲ್ಲಿನ ಖಾಸಗಿ ವ್ಯಕ್ತಿಗಳ ಗೋದಾಮುಗಳಿಗೆ ಹೋಗುತ್ತಿದ್ದವು. ಅಲ್ಲಿಂದ ಸರ್ಕಾರದ ಚೀಲದಲ್ಲಿ ಅಕ್ಕಿಯನ್ನು ವಿವಿಧ ಟ್ರೆಡರ್ಸ್‌, ಪೈವೆಟ್ ಲಿಮಿಟೆಡ್ ಹೆಸರಿನಲ್ಲಿ ಚೀದಲ್ಲಿ ಬದಲಾವಣೆ ಮಾಡಲಾಗುತ್ತಿರುವುದನ್ನು ಲೋಕಾಯುಕ್ತರು ಪತ್ತೆ ಮಾಡಿದ್ದಾರೆ.
"

ಬೆಂಗಳೂರು ಅಷ್ಟೇ ಅಲ್ಲದೆ ಗ್ರಾಮಾಂತರ ಜಿಲ್ಲೆಯಲ್ಲಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ದಾಸ್ಥಾನ ಹಾಗೂ ಸಾಗಣೆ ಮಾಡುತ್ತಿದ್ದ ಸ್ಥಳದ ಮೇಲೆ ದಾಳಿ ನಡೆಸಿ ಸಾವಿರಾರು ಕ್ವಿಂಟಲ್ ಅಕ್ಕಿ ಜಪ್ತಿ ಮಾಡಲಾಗಿದೆ. ಈ ದಂಧೆಯ ಜಾಲ ದೊಡ್ಡ ಮಟ್ಟದಲ್ಲಿ ವಸ್ತರಣೆಯಾಗಿದೆ. ಸರ್ಕಾರಿ ಅಧಿಕಾರಿಗಳು ಇದರಲ್ಲಿ ಶಾಮಿಲಾಗಿದ್ದಾರೆ. ತಪ್ಪಿತಸ್ಥರ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು.

— -ಬಿ.ಎಸ್.ಪಾಟೀಲ್, ನ್ಯಾ.ಲೋಕಾಯುಕ್ತರು.


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net