ಮುಖಂಡರಾದ ಶಫಿ ಬೆಣ್ಣಿ ಮಾತನಾಡಿ, ಲೋಕಾಪುರ&ಧಾರವಾಡ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಒತ್ತಾಯಿಸಿ ಹಲವಾರು ವರ್ಷಗಳಿಂದ ಹೋರಾಟ ನಡೆಯುತ್ತಿವೆ. ಜನಪ್ರತಿನಿಧಿಗಳು ಇಚ್ಛಾಶಕ್ತಿ ಪ್ರದರ್ಶಿಸಿ ಬಹುದಿನಗಳ ಬೇಡಿಕೆ ಈಡೇರಿಕೆಗೆ ಮುಂದಾಗಬೇಕೆಂದು ಆಗ್ರಹಿಸಿದರು. ಮುಖಂಡರಾದ ನಿಂಗಪ್ಪ ಕರಿಗಾರ, ಶಶಿಕಾಂತ ನೆಲ್ಲೂರ, ಚಂದ್ರಕಾಂತ ಮಾಳದಕರ, ಜಾವೀದ್ ಯಾದವಾಡ, ಎ.ಆರ್.ಪಠಾಣ, ಎಂ.ಕೆ.ಯಾದವಾಡ ಇತರರಿದ್ದರು.