ಸಾಕ್ಷರತೆ ಕೊರತೆಯಿಂದ ಹೆಚ್ಚಿದ ವಂಚನೆ

ವಿಶ್ವ ಸಾಕ್ಷರತೆ ದಿನ ಆಚರಣೆ
ವಿಶ್ವ ಸಾಕ್ಷರತೆ ದಿನ ಆಚರಣೆ
Published on

ಪ್ರಮುಖ ಮುಖ್ಯಾಂಶಗಳು

  • ಚಿಕ್ಕೋಡಿಲಿ ಸಾಕ್ಷರತೆ ದಿನ ಆಚರಣೆ
  • ಡಯಟ್ ಕಾಲೇಜಿನಲ್ಲಿ ಆಯೋಜನೆ
  • ಸಾಕ್ಷರತೆ ಹೆಚ್ಚಿಸಲು ಪ್ರತಿಯೊಬ್ಬರ ಸಹಕಾರ ಅಗತ್ಯ

ಶಿಕ್ಷಣದ ಕೊರತೆಯಿಂದ ಹೆಚ್ಚಿದ ವಂಚನೆ
| ಶಿಕ್ಷಣಾಧಿಕಾರಿ ಡಾ.ಕೆ.ಬಿ.ತಳವಾರ ಅಭಿಮತ | ಅಂತರಾಷ್ಟ್ರೀಯ ಸಾಕ್ಷರತೆ ದಿನಾಚರಣೆ
ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ:

ಸಾಕ್ಷರತೆಯು ಪ್ರತಿಯೊಬ್ಬ ಮಾನವನ ಮೂಲಭೂತ ಹಕ್ಕಾಗಿದೆ.ಜಾಗತಿಕ ಮಟ್ಟದಲ್ಲಿ ಸಾಕ್ಷರತೆ ಸಾರುವ ಆಧುನಿಕ ಅಂತರಾಷ್ಟ್ರೀಯ ಸಾಕ್ಷರತೆ ದಿನಾಚರಣೆ ಆಚರಿಸಿಕೊಂಡು ಬರುತ್ತಿದೆ ಎಂದು ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಡಾ.ಕೆ.ಬಿ.ತಳವಾರ ಹೇಳಿದರು.
ಪಟ್ಟಣದ ಡಯಟ್ ಕಾಲೇಜಿನ ಸಭಾಭವನದಲಿ ಈಚೆಗೆ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಕಾರ್ಯಾಲಯದ ವತಿಯಿಂದ ಆಯೋಜಿಸಿದ್ದ ಅಂತರಾಷ್ಟ್ರೀಯ ಸಾಕ್ಷರತೆ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ.
ಅಕ್ಷರ ಜ್ಞಾನವಿಲ್ಲದೆ ಇರುವದರಿಂದ ಬಹಳಷ್ಟು ಜನರಿಗೆ ವಂಚನೆ ಮಾಡುವ ಪ್ರಕರಣಗಳು ಇತ್ತಿಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವದು ಕಳವಳಕಾರಿ ಸಂಗತಿಯಾಗಿದೆ.
ಡಯಟï ಕಾಲೇಜಿನ ಉಪನ್ಯಾಸಕ ಸಂಜು ಹುಲ್ಲೋಳಿ ಮಾತನಾಡಿ,ಸಂಪೂರ್ಣ ಸಾಕ್ಷರತೆ ಜಿಲ್ಲಾಯನ್ನಾಗಿಸಲು ಅಧಿಕಾರಿಗಳು ಹಾಗೂ ಜನರ ಸಹಭಾಗಿತ್ವ ಅವಶ್ಯಕವಾಗಿದೆ ಎಂದರು.
ಉಪನ್ಯಾಸಕ ಎಂ.ಬಿ.ಬಿಲ್ಲ , ಗ್ರಂಥಪಾಲಕ ಸಂಘದ ಉಪಾಧ್ಯಕ್ಷ ಸದಾನಂದ ಪೂಜಾರಿ, ಸಂಜೀವ ಕಾಂಬಳೆ, ಯಲ್ಲೇಶ ಕಾಮನ್ನವರ, ಶಂಕರ ಜಾಲಿಹಾಳ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net