ಪ್ರವಚನ ಆಲಿಸುವುದು ನಿಜಕ್ಕೂ ಸೌಭಾಗ್ಯ

ಶ್ರಾವಣ ಮಾಸ ನಿಮಿತ್ತ ಬಸವಕಲ್ಯಾಣದ ಅನುಭವ ಮಂಟಪದಲ್ಲಿ ಇತ್ತೀಚೆಗೆ ಶ್ರೀ ಶಿವಾನಂದ ಸ್ವಾಮೀಜಿ ನಡೆಸಿಕೊಡುತ್ತಿರುವ ಅಜ್ಞಾತ ಅಮರಗಣಂಗಳ ಆತ್ಮಚರಿತ್ರೆ ಪ್ರವಚನ ಕಾರ್ಯಕ್ರಮವನ್ನು  ಮಕ್ಕಳ ಹಕ್ಕುಗಳಆಯೋಗದ ನಿಕಟಪೂರ್ವ ಅಧ್ಯಕ್ಷ ಶಶಿಧರ ಕೊಸಂಬೆ ಉದ್ಘಾಟಿಸಿದರು. ಶ್ರೀ ಗುರುಬಸವ ಪಟ್ಟದ್ದೇವರು, ಎಸ್​.ಎಸ್​.ನಾಗರಾಳೆ, ಸಿದ್ದಣ್ಣ ಭೂಮಾ ಇದ್ದರು.
ಶ್ರಾವಣ ಮಾಸ ನಿಮಿತ್ತ ಬಸವಕಲ್ಯಾಣದ ಅನುಭವ ಮಂಟಪದಲ್ಲಿ ಇತ್ತೀಚೆಗೆ ಶ್ರೀ ಶಿವಾನಂದ ಸ್ವಾಮೀಜಿ ನಡೆಸಿಕೊಡುತ್ತಿರುವ ಅಜ್ಞಾತ ಅಮರಗಣಂಗಳ ಆತ್ಮಚರಿತ್ರೆ ಪ್ರವಚನ ಕಾರ್ಯಕ್ರಮವನ್ನು ಮಕ್ಕಳ ಹಕ್ಕುಗಳಆಯೋಗದ ನಿಕಟಪೂರ್ವ ಅಧ್ಯಕ್ಷ ಶಶಿಧರ ಕೊಸಂಬೆ ಉದ್ಘಾಟಿಸಿದರು. ಶ್ರೀ ಗುರುಬಸವ ಪಟ್ಟದ್ದೇವರು, ಎಸ್​.ಎಸ್​.ನಾಗರಾಳೆ, ಸಿದ್ದಣ್ಣ ಭೂಮಾ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀ ಗುರುಬಸವ ಪಟ್ಟದ್ದೇವರು ನುಡಿ
  • ಅನುಭವ ಮಂಟಪದಲ್ಲಿ ಕಾರ್ಯಕ್ರಮಕ್ಕೆ ಚಾಲನೆ
ಬಸವಕಲ್ಯಾಣ:ಹನ್ನೆರಡನೇ ಶತಮಾನದಲ್ಲಿ ಬಸವಾದಿ ಶರಣರು ಮಾಡಿರುವ ಕ್ರಾಂತಿಯ ನೆಲದಲ್ಲಿ ಅವರ ಚಿಂತನೆಗಳ ಪ್ರವಚನ ಆಲಿಸುವುದು ನಿಜಕ್ಕೂ ಸೌಭಾಗ್ಯ ಸಂಗತಿಯಾಗಿದೆ ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಶ್ರೀ ಗುರುಬಸವ ಪಟ್ಟದ್ದೇವರು ಹೇಳಿದರು.
ಶ್ರಾವಣ ಮಾಸ ನಿಮಿತ್ತ ಅನುಭವ ಮಂಟಪದಲ್ಲಿ ಇತ್ತೀಚೆಗೆ ಅನುಭವ ಮಂಟಪದ ಸಂಚಾಲಕ ಶ್ರೀ ಶಿವಾನಂದ ಸ್ವಾಮೀಜಿ ನಡೆಸಿ ಕೊಡುತ್ತಿರುವ ಅಜ್ಞಾತ ಅಮರಗಣಂಗಳ ಆತ್ಮಚರಿತ್ರೆ ಪ್ರವಚನದ ಉದ್ಘಾಟನಾ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿ, ಅನುಭವ ಮಂಟಪ ಪರಿಸರದಲ್ಲಿ ಲಿಂ.ಪೂಜ್ಯ ಶ್ರೀ ಚನ್ನಬಸವ ಪಟ್ಟದೇವರು 770 ಅಮರಗಣಂಗಳನ್ನು ಅನುಭವಿಸುತ್ತಿದ್ದರು. ಅವರ ಸಂಕಲ್ಪ ಶಕ್ತಿಯಿಂದ ಶ್ರೀ ಶಿವಾನಂದ ಸ್ವಾಮೀಜಿ ಅವರಿಗೆ ಅಜ್ಞಾತ ಅಮರಗಣಂಳ ಆತ್ಮಚರಿತ್ರೆ ಕುರಿತು ಪ್ರವಚನ ಮಾಡುವ ಬಯಕೆ ಉಂಟಾಗಿದೆ. ನಾಡೋಜ ಶ್ರೀ ಬಸವಲಿಂಗ ಪಟ್ಟದ್ದೇವರ ಮಾರ್ಗದರ್ಶನದಲ್ಲಿ ಅನುಭವ ಮಂಟಪದಲ್ಲಿಯೇ ಉಳಿದು ನಿರಂತರ ಜ್ಞಾನ ದಾಸೋಹ ಮಾಡುತ್ತಿದ್ದಾರೆ. ಅವರ ಲಿಂಗನುಡಿಗಳನ್ನು ಒಂದು ತಿಂಗಳ ಪರ್ಯಂತ ಆಲಿಸುವ ಅವಕಾಶ ತಮಗೆ ದೊರತಿದೆ. ತಾವು ಅದರ ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಕರ್ನಾಟಕ ಮಕ್ಕಳ ಹಕ್ಕುಗಳ ಆಯೋಗದ ನಿಕಟಪೂರ್ವ ಅಧ್ಯಕ್ಷ ಶಶಿಧರ ಕೊಸಂಬೆ ಕಾರ್ಯಕ್ರಮ ಉದ್ಘಾಟಿಸಿದರು. ಶ್ರೀ ಶಿವಾನಂದ ಸ್ವಾಮೀಜಿ, ಎಸ್​.ಎಸ್​. ನಾಗರಾಳೆ, ಪ್ರವಚನ ಸೇವಾ ಸಮಿತಿ ಅಧ್ಯಕ್ಷ ಸಿದ್ದಣ್ಣ ಭೂಮಾ, ಮಹಾದೇವಪ್ಪ ಇಜಾರೆ, ರಾಜಕುಮಾರ ರಟಕಲ್ಲೆ, ಶಿವಪುತ್ರಪ್ಪ ಅವಸೆ, ಶಿವಕುಮಾರ ಬಿರಾದಾರ ಇದ್ದರು. ಅಶೋಕ ನಿರೂಪಣೆ ಮಾಡಿದರು. ರಾಜಕುಮಾರ ವಚನ ಗಾಯನ ನಡೆಸಿಕೊಟ್ಟರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net