ಶಿಕ್ಷಣದಿಂದಲೇ ಬದುಕು ಪರಿಪೂರ್ಣ

ಆಲಮೇಲ ಪಟ್ಟಣದಲ್ಲಿ ಡಾ. ಎಪಿಜೆ ಅಬ್ದುಲ್ ಕಲಾಂ ಶಾಲೆ, ಮದರಸಾ ಧಾರ್ಮಿಕ ಹಾಗೂ ಅನೌಪಚಾರಿಕ ಶಿಕ್ಷಣ ಒದಗಿಸಲು ಕಟ್ಟಡ ಕಾಮಗಾರಿಗೆ ಶಾಸಕ ಅಶೋಕ ಮನಗೂಳಿ ಭೂಮಿ ಪೂಜೆ ನೆರವೇರಿಸಿದರು. ಅಲಿ ಮೌಲಾನಾ ಮೋಮಿನ, ಹಮೀದ ಸಾಲೋಟಗಿ ಡಾ. ಮೊಹ್ಮದ ಇಮ್ರಾನ್ ಸಾಲೋಟಗಿ ಮತ್ತಿತರರಿದ್ದರು.
ಆಲಮೇಲ ಪಟ್ಟಣದಲ್ಲಿ ಡಾ. ಎಪಿಜೆ ಅಬ್ದುಲ್ ಕಲಾಂ ಶಾಲೆ, ಮದರಸಾ ಧಾರ್ಮಿಕ ಹಾಗೂ ಅನೌಪಚಾರಿಕ ಶಿಕ್ಷಣ ಒದಗಿಸಲು ಕಟ್ಟಡ ಕಾಮಗಾರಿಗೆ ಶಾಸಕ ಅಶೋಕ ಮನಗೂಳಿ ಭೂಮಿ ಪೂಜೆ ನೆರವೇರಿಸಿದರು. ಅಲಿ ಮೌಲಾನಾ ಮೋಮಿನ, ಹಮೀದ ಸಾಲೋಟಗಿ ಡಾ. ಮೊಹ್ಮದ ಇಮ್ರಾನ್ ಸಾಲೋಟಗಿ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಅಶೋಕ ಮನಗೂಳಿ ಹೇಳಿಕೆ
  • ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ

ಆಲಮೇಲ: ಮನುಷ್ಯನ ಜೀವನದಲ್ಲಿ ಯಾರು ಕೂಡಾ ಶಿಕ್ಷಣದಿಂದ ವಂಚಿತರಾಗಬಾರದು, ಶಿಕ್ಷಣದಿಂದಲೇ ಪರಿಪೂರ್ಣ ಬದುಕು ಕಟ್ಟಲು ಸಾಧ್ಯವಾಗುತ್ತದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.

ಪಟ್ಟಣದಲ್ಲಿ ಮಂಗಳವಾರ ಅಲ್ಪಸಂಖ್ಯಾತ ಇಲಾಖೆಯ ವತಿಯಿಂದ ಸೈನ್ ಕಲ್ಚರಲ್ ಎಜುಕೇಷನ್ ಸೊಸೈಟಿ ಅಡಿಯಲ್ಲಿ ನಡೆಯುತ್ತಿರುವ ಡಾ. ಎಪಿಜೆ ಅಬ್ದುಲ್ ಕಲಾಂ ಶಾಲೆ, ಮದರಸಾ ಧಾರ್ಮಿಕ ಹಾಗೂ ಅನೌಪಚಾರಿಕ ಶಿಕ್ಷಣ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸಲು 50 ಲಕ್ಷ ರೂ.ಗಳ ಮೂರು ಕೋಣೆಗಳ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಪಟ್ಟಣದ ಬೃಹತ್ ಕೆರೆ ಅಭಿವೃದ್ಧಿ 4 ಕೋಟಿ ರೂ. ವೆಚ್ಚದ ಕಾಮಗಾರಿ ಪೂರ್ಣಗೊಂಡಿದ್ದು, ಕೆರೆಯ ಸುತ್ತ ಡೆಂಟಿಂಗ್ ಹಾಗೂ ಕೆರೆಯ ಸುತ್ತ 136 ಲೈಟಿಂಗ್ ಕಂಬಗಳನ್ನು ಅಳವಡಿಸಿ ಸಾರ್ವಜನಿಕರಿಗೆ ವಾಯು ವಿಹಾರ ವ್ಯವಸ್ಥೆಗಾಗಿ 1ಕೋಟಿ 80 ಲಕ್ಷ ರೂ.ಗಳು ಮಂಜೂರು ಮಾಡಲಾಗಿದೆ.
ಒಂದು ವಾರದಲ್ಲಿ ಅದನ್ನು ಕೂಡಾ ಭೂಮಿ ಪೂಜೆ ನೆರವೇರಿಸಲಾಗುವುದು, 1 ಕೋಟಿ ರೂ.ಗಳ ವೆಚ್ಚದಲ್ಲಿ ಅರಣ್ಯ ಇಲಾಖೆಯ ವತಿಯಿಂದ ಟ್ರೀ ಪಾರ್ಕ್ ಕಾಮಗಾರಿ ಪೂರ್ಣಗೊಂಡಿದೆ ಆ.15ರಂದು ಉದ್ಘಾಟನೆಗೊಳಿಸಲಾಗುವುದು ಎಮದು ತಿಳಿಸಿದರು.
ಅಲಿ ಮೌಲಾನಾ ಮೋಮಿನ, ಹಮೀದ ಸಾಲೋಟಗಿ ಡಾ. ಮೊಹ್ಮದ ಇಮ್ರಾನ್ ಸಾಲೋಟಗಿ, ಪಪಂ ಅಧ್ಯಕ್ಷ ಸಾಧೀಕ ಸುಂಬಡ, ರಮೇಶ ಬಂಟನೂರ, ಪ್ರಭು ವಾಲೀಕಾರ, ಬಸವರಾಜ ತೆಲ್ಲೂರ, ಬಸವರಾಜ ಬಾಗೇವಾಡಿ, ದಾದಾ ಎಲಗಾರ, ಬಾಬು ಕೋತಂಬರಿ, ದಾವೂದ ಬೆಣ್ಣೇಶಿರೂರ, ಗಾಲೀಬ ಎಲಗಾರ, ದಾವಲ ಮರತೂರ, ಅಲ್ತಾಪ ಸಾಲೋಟಗಿ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net