ಆಧುನಿಕ ಜೀವನ ಶೈಲಿಯಲ್ಲಿ ತಾಯಿ ಸೇವೆಯನ್ನು ಮರೆತುಬಿಡುತ್ತಿರುವ ಘಟನೆಗಳು ಹೆಚ್ಚುತ್ತಿವೆ. ಇದು ನಮ್ಮ ಸಂಸ್ಕೃತಿಗೆ ವಿರುದ್ಧವಾಗಿದ್ದು, ತಾಯಿಯ ಆರೈಕೆ ಮೂಲಕ ಜೀವನವನ್ನು ಸಾರ್ಥಕಗೊಳಿಸಬೇಕು ಎಂದು ಅವರು ಸಲಹೆ ನೀಡಿದರು. ತಾಯಿ ಪ್ರೀತಿಯ ಮಹತ್ವವನ್ನು ಉದಾಹರಣೆಗಳೊಂದಿಗೆ ವಿವರಿಸಿದ ಶ್ರೀಗಳು, ತಾಯಿಯೇ ಜೀವನದ ಮೊದಲ ಗುರು ಎಂದು ತಿಳಿಸಿದರು.