ಬಸವ ಸಿದ್ಧಾಂತ ತಿಳಿದು ಬಾಳಿದರೆ ಬದುಕು ಸಾರ್ಥಕ

ಬಸವಕಲ್ಯಾಣದ ಶೀ ಬಸವೇಶ್ವರ ದೇವಸ್ಥಾನದಲ್ಲಿ ಬುಧವಾರ ಸಂಜೆ ಶೀ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ ಹಾಗೂ ವಿಶ್ವಸ್ಥ ಸಮಿತಿಯಿಂದ ಶೀ ಬಸವೇಶ್ವರ ಜಾತ್ರೆ ನಿಮಿತ್ತ ಅಯೋಜಿಸಲಗಿರುವ ಬಸವತತ್ವ ಆಧ್ಯಾತ್ಮಿಕ ಪ್ರವಚನ ಸಮಾರಂಭ ಸಹಾಯಕ ಆಯುಕ್ತ ಪ್ರಕಾಶ ಕುದರಿ ಉದ್ಘಾಟಿಸಿದರು. ಶೀ ಡಾ. ಶಿವಾನಂದ ಮಹಾಸ್ವಾಮೀಜಿ, ಶೀ ಸಿದ್ಧಬಸವ ಕಬೀರ ಮಹಾಸ್ವಾಮೀಜಿ, ಪೂಜ್ಯ ಡಾ. ಗಂಗಾಂಬಿಕಾ ಅಕ್ಕ, ಅನಿಲಕುಮಾರ ರಗಟೆ, ಶಶಿಕಾಂತ ದುರ್ಗೆ, ಬಸವರಾಜ ಬಾಲಕಿಲೆ, ವೀರಣ್ಣ ಹಲಶೆಟ್ಟೆ, ಬಸವರಾಜ ತೊಂಡಾರೆ, ಪು?್ಪಾವತಿ ಮಾಮಾ, ರಾಜೇಶ್ವರಿ ಖೂಬಾ ಉಪಸ್ಥಿತರಿದ್ದರು
ಬಸವಕಲ್ಯಾಣದ ಶೀ ಬಸವೇಶ್ವರ ದೇವಸ್ಥಾನದಲ್ಲಿ ಬುಧವಾರ ಸಂಜೆ ಶೀ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ ಹಾಗೂ ವಿಶ್ವಸ್ಥ ಸಮಿತಿಯಿಂದ ಶೀ ಬಸವೇಶ್ವರ ಜಾತ್ರೆ ನಿಮಿತ್ತ ಅಯೋಜಿಸಲಗಿರುವ ಬಸವತತ್ವ ಆಧ್ಯಾತ್ಮಿಕ ಪ್ರವಚನ ಸಮಾರಂಭ ಸಹಾಯಕ ಆಯುಕ್ತ ಪ್ರಕಾಶ ಕುದರಿ ಉದ್ಘಾಟಿಸಿದರು. ಶೀ ಡಾ. ಶಿವಾನಂದ ಮಹಾಸ್ವಾಮೀಜಿ, ಶೀ ಸಿದ್ಧಬಸವ ಕಬೀರ ಮಹಾಸ್ವಾಮೀಜಿ, ಪೂಜ್ಯ ಡಾ. ಗಂಗಾಂಬಿಕಾ ಅಕ್ಕ, ಅನಿಲಕುಮಾರ ರಗಟೆ, ಶಶಿಕಾಂತ ದುರ್ಗೆ, ಬಸವರಾಜ ಬಾಲಕಿಲೆ, ವೀರಣ್ಣ ಹಲಶೆಟ್ಟೆ, ಬಸವರಾಜ ತೊಂಡಾರೆ, ಪು?್ಪಾವತಿ ಮಾಮಾ, ರಾಜೇಶ್ವರಿ ಖೂಬಾ ಉಪಸ್ಥಿತರಿದ್ದರು
Published on

ಪ್ರಮುಖ ಮುಖ್ಯಾಂಶಗಳು

  • ಹುಲಸೂರು ಶೀ ಅಭಿಮತ
  • ಶೀ ಬಸವೇಶ್ವರ ದೇವಸ್ಥಾನದಲ್ಲಿ ಬಸವತತ್ವ ಆಧ್ಯಾತ್ಮಿಕ ಪ್ರವಚನಕ್ಕೆ ಚಾಲನೆ
ಬಸವಕಲ್ಯಾಣ: ವಿಶ್ವಗುರು ಬಸವಣ್ಣನವರು ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿದ ಪ್ರಖರ ಚಿಂತಕರು, ಸಮಾನತೆಗಾಗಿ ಶ್ರಮಿಸಿದ ದಾರ್ಶನಿಕರು ಎಂದು ಹುಲಸೂರನ ಶೀ ಗುರುಬಸವೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಶೀ ಡಾ. ಶಿವಾನಂದ ಮಹಾಸ್ವಾಮೀಜಿ ಹೇಳಿದರು.
ನಗರದ ಶೀ ಬಸವೇಶ್ವರ ದೇವಸ್ಥಾನದಲ್ಲಿ ಬುಧವಾರ ಸಂಜೆ ಶೀ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ ಹಾಗೂ ವಿಶ್ವಸ್ಥ ಸಮಿತಿಯಿಂದ ಶೀ ಬಸವೇಶ್ವರ ಜಾತ್ರೆ ನಿಮಿತ್ತ ಅಯೋಜಿಸಲಗಿರುವ ಬಸವತತ್ವ ಆಧ್ಯಾತ್ಮಿಕ ಪ್ರವಚನದ ಉದ್ಘಾಟನಾ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಬಸವ ಸಿದ್ಧಾಂತ ತಿಳಿದು ಬಾಳಿದರೆ ಬದುಕು ಸಾರ್ಥಕ. ಬಸವಣ್ಣನವರ ತತ್ವ ಚಿಂತನೆ ಪ್ರಸಾರದಲ್ಲಿ ಶೀ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ ಹಾಗೂ ವಿಶ್ವಸ್ಥ ಸಮಿತಿಯ ಪಾತ್ರ ದೊಡ್ಡದು ಎಂದರು.
ನೇತೃತ್ವ ವಹಿಸಿದ ಚಿಗರಳ್ಳಿಯ ಶೀ ಜಗದ್ಗುರು ಮರುಳ ಶಂಕರದೇವರ ಗುರುಪೀಠದ ಶೀ ಸಿದ್ಧಬಸವ ಕಬೀರ ಮಹಾಸ್ವಾಮೀಜಿ ಪ್ರವಚನ ನೀಡಿ, ಬಸವಕಲ್ಯಾಣ ಅತ್ಯಂತ ಪವಿತ್ರವಾದ ನೆಲ. ಎಲ್ಲರನ್ನೂ ಒಗ್ಗೂಡಿಸಿದ, ಎಲ್ಲೆಡೆ ಇರುವ ಕತ್ತಲೆಯನ್ನು ಕಳೆದವರು ಬಸವಣ್ಣನವರು. ಎಲ್ಲರಿಗೂ ಮಾತನಾಡಲು ಶಕ್ತಿ ನೀಡಿದ್ದು ಈ ನೆಲ. ಅದು ಬಸವಣ್ಣನವರಿಂದ. ಎಡ ಬಲ ಎಂಬ ಭೇದ ತೊಡದದ್ದು ಬಸವಣ್ಣ. ಇ?್ಟಲಿಂಗ ಎಡಗೈಯಲ್ಲಿ ಇರಿಸಿ, ಎಡಗೈಗೆ ಆದ್ಯತೆ ನೀಡಿದ ಜಗತ್ತಿನ ಮೊದಲ ದಾರ್ಶನಿಕ ಎಮದು ಹೇಳಿದರು.
ನೆತ್ರತ್ವ ವಹಿಸಿದ ಹರಳಯ್ಯನವರ ಪೀಠದ ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ಮಾತನಾಡಿ, ಜಗತ್ತಿನ ಎಲ್ಲ ಸಮಸ್ಯೆಗಳನ್ನೂ ನೀಗಿಸುವ ಶಕ್ತಿ ಬಸವ ತತ್ವದಲ್ಲಿ ಅಡಗಿದೆ. ಬಸವಣ್ಣನವರ ವಚನಗಳು ಸತ್ಯ ಶುದ್ಧ ಬದುಕಿನ ದಾರಿಯನ್ನು ತೋರುವ ದೀಪಗಳಾಗಿವೆ. ಇದನ್ನು ಅತ್​ ಮಾಡಿಕೊಮಡು ಜಿವನದಲ್ಲಿ ಎಲ್ಲರು ಅಳವಡಿಸಿಕೊಳ್ಳಬೇಕಿದೆ ಎಂದರು.
ಸಮಾರಂಭ ಉದ್ಘಾಟಿಸಿದ ಸಹಾಯಕ ಆಯುಕ್ತ ಪ್ರಕಾಶ ಕುದರಿ, ಅಧ್ಯಕ್ಷತೆ ವಹಿಸಿ ಬಿಡಿಪಿಸಿ ಅಧ್ಯಕ್ಷ ಅನಿಲಕುಮಾರ ರಗಟೆ ಮಾತನಾಡಿದರು. ಬಿಡಿವಿಎಸ್​ ಅಧ್ಯಕ್ಷ ಶಶಿಕಾಂತ ದುರ್ಗೆ, ಬಿಡಿಪಿಸಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಕುರಕೋಟೆ, ಕೋಶಾಧ್ಯಕ್ಷ ಜಗನ್ನಾಥ ಖೂಬಾ, ಕಾರ್ಯದರ್ಶಿ ಅಶೋಕ ನಾಗರಾಳೆ, ಸಹಕಾರ್ಯದರ್ಶಿ ಸುನೀಲಕುಮಾರ ರಾಯವಾಡೆ, ನಿರ್ದೇಶಕರಾದ ಬಸವರಾಜ ಕೋರಕೆ, ವೀರಣ್ಣ ಹಲಶೆಟ್ಟೆ, ಭದ್ರಿನಾಥ ಪಾಟೀಲ, ವಿವೇಕಾನಂದ ಹೊದಲೂರೆ, ಬಸವರಾಜ ತೊಂಡಾರೆ, ಮಲ್ಲಿಕಾರ್ಜುನ ಚಿರಡೆ, ಸುನಿಲ್​ ಹೊಳಕುಂದೆ, ಪು?್ಪಾವತಿ ಮಾಮಾ, ಬಿಡಿವಿಎಸ್​ ಉಪಾಧ್ಯಕ್ಷ ಡಾ ಜಿ. ಎಸ್​. ಭುರಾಳೆ, ಕಾರ್ಯದರ್ಶಿ ನಾಗಯ್ಯ ಸ್ವಾಮಿ, ಕೋಶಾಧ್ಯಕ್ಷ ಶಿವರಾಜ್​ ಶಾಶೆಟ್ಟೆ ಮೊದಲಾದವರು ಇದ್ದರು. ಬಿಡಿಪಿಸಿ ಸಹಕಾರ್ಯದರ್ಶಿ ಬಸವರಾಜ ಬಾಲಕಿಲೆ ಸ್ವಾಗತಿಸಿದರು. ಜ್ಯೋತಿ ತುಗಾವೆ ನಿರೂಪಿಸಿದರು. ರಂಜನಾ ಭೂಶೆಟ್ಟಿ ಹಾಗೂ ಮಂಜುನಾಥ ಹೇಮಶೆಟ್ಟಿ ಅವರಿಂದ ವಚನ ಗಾಯನ ನಡೆಯಿತು.
"

ಬಸವಾದಿ ಶರಣರು ಜಗತ್ತಿಗೆ ಅತ್ಯಂತ ಶ್ರೇ?್ಠ ಆಲೋಚನೆಗಳು ಕೊಟ್ಟಿದ್ದಾರೆ. ಸಹಜತೆ, ಸಹಬಾಳ್ವೆ, ಸಮಾನತೆಯ ಅಂಶಗಳು ವಚನದಲ್ಲಿ ಅಡಗಿವೆ. ಬಸವಣ್ಣನವರ ವಿಚಾರಗಳು ಎಂದಿಗೂ ಪ್ರಸ್ತುತ.

ಪ್ರಕಾಶ ಕುದರಿ

ಸಹಾಯಕ ಅಯುಕ್ತರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net