ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 733 ಡೀಲರ್ಗಳಿದ್ದು, ಇದರಲ್ಲಿ 81 ಹೋಲಸೇಲ್ ಮತ್ತು 540 ರಿಟೇಲರ್ ಮಾತ್ರ ಚಾಲ್ತಿಯಲ್ಲಿದ್ದಾರೆ. ಪ್ರಸ್ತುತ ಜಿಲ್ಲೆಯ ಅವಿಭಜಿತ ಏಳು ತಾಲೂಕುಗಳ ರಿಟೇಲ್ ಶಾಪ್ಗಳಲ್ಲಿ ವಿಶೇಷವಾಗಿ 2,143 ಮೆಟ್ರಿಕ್ ಟನ್ ಡಿಎಪಿ, 6,421 ಮೆಟ್ರಿಕ್ ಟನ್ ಯೂರಿಯಾ ಲಭ್ಯವಿದೆ. ಅಫಜಲಪೂರ, ಚಿತ್ತಾಪುರ, ಜೇವರ್ಗಿ, ಕಲಬುರಗಿ ತಾಲೂಕಿನ ತಾಲೂಕಾ ಡೀಲರ್ ಬಳಿ 2,999 ಮೆಟ್ರಿಕ್ ಟನ್ ಡಿಎಪಿ, 3,011 ಮೆಟ್ರಿಕ್ ಟನ್ ಯೂರಿಯಾ ದಾಸ್ತಾನು ಲಭ್ಯವಿದೆ. ಜಿಲ್ಲೆಯಲ್ಲಿ ರಸಗೊಬ್ಬರದ ಕೊರತೆ ಇಲ್ಲ. ಕಳೆದ 15 ದಿನದಲ್ಲಿ 117 ಕಡೆ ಕೃಷಿ ಅಧಿಕಾರಿಗಳ ತಂಡ ರಸಗೊಬ್ಬರ ಅಂಗಡಿಗಳ ಮೇಲೆ ದಾಳಿ ಮಾಡಿದ್ದು, ಸುಮಾರು 51 ಅಂಗಡಿಗಳು ನಿಯಮ ಉಲ್ಲಂಸಿ ಮಾರಾಟ ಮಾಡುತ್ತಿರುವುದು ಕಂಡುಬಂದಿರುವುದರಿಂದ ನೋಟಿಸ್ ಜಾರಿ ಮಾಡಲಾಗಿದೆ. 66.27 ಲ ರೂ. ಮೊತ್ತದ ರಸಗೊಬ್ಬರ ಮಾರಾಟ ಮಾಡದಂತೆ ತಡೆ ಆದೇಶವನ್ನೂ ನೀಡಲಾಗಿದೆ ಎಂದು ತಿಳಿಸಿದರು.