ಕೆಎಲ್ಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಗ್ರಂತಪಾಲಕರ ದಿನ ಆಚರಣೆ

ಕೆಎಲ್ಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬ್ಲಾಗ್ ಚಾಲನೆ
ಕೆಎಲ್ಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬ್ಲಾಗ್ ಚಾಲನೆ
Published on

ಪ್ರಮುಖ ಮುಖ್ಯಾಂಶಗಳು

  • ಕೆಎಲ್ಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಗ್ರಂಥಪಾಲಕರ ದಿನ ಆಚರಣೆ
  • ಚಿಕ್ಕೋಡಿ ಪಟ್ಟಣದ ಕೆಎಲ್ಇ ಕಾಲೇಜು
  • ಗ್ರಂಥಾಲಯ ಬ್ಲಗ್ ಚಾಲನೆ

ವಿದ್ಯಾರ್ಥಿಗಳು ಗ್ರಂಥಾಲಯದ ಸದ್ಬಳಕೆ ಮಾಡಿಕೊಳ್ಳಿ
| ಪ್ರಾಚಾರ್ಯ ಡಾ.ದರ್ಶನ ಬಿಳ್ಳೂರ ಸಲಹೆ | ಗ್ರಂಥಪಾಲಕರ ದಿನಾಚರಣೆ
ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ:

ಗ್ರಂಥಾಲಯದಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸುವುದರಿಂದ ಜ್ಞಾನ ವೃದ್ಧಿಗೆ ಸಹಕಾರಿ, ವಿದ್ಯಾರ್ಥಿಗಳು ಗ್ರಂಥಾಲಯದ ಮುದ್ರಿತ ಹಾಗೂ ಡಿಜಿಟಲï ಸಂಪನ್ಮೂಲ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕೆಎಲ್ ಇ ತಾಂತ್ರಿಕ ಮಹಾವಿದ್ಯಾಲಯ ಎಂದು ಪ್ರಾಚಾರ್ಯ ಡಾ.ದರ್ಶನಕುಮಾರ ಬಿಳ್ಳೂರ ಹೇಳಿದರು.
ಪಟ್ಟಣದ ಕೆಎಲ್ ಇ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಬುಧವಾರ ಗ್ರಂಥಪಾಲಕರ ದಿನಾಚರಣೆ ಅಂಗವಾಗಿ ಗ್ರಂಥಾಲಯದಲ್ಲಿ ನವೀಕೃತ ತಂತ್ರಾಂಶ ಅಳವಡಿಕೆ ಜತೆ ಗ್ರಂಥಾಲಯ ಬ್ಲಾಗ್ ಚಾಲನೆ ನೀಡಿ ಅವರು ತಿಳಿಸಿದ್ದಾರೆ.
ಗ್ರಂಥಾಲಯ ಬ್ಲಾಗ್ ಪ್ರಾರಂಭಿಸುತ್ತಿರುವ ವಿದ್ಯಾರ್ಥಿ ಮತ್ತು ಸಿಬ್ಬಂದಿಗಳಿಗೆ ಅನುಕೂಲ. ಈ ಬ್ಲಾಗ್ ಮೂಲಕ ವಿದ್ಯಾರ್ಥಿಗಳು ಮತ್ತು ಬೋಧಕ ಸಿಬ್ಬಂದಿ ಗ್ರಂಥಾಲಯದ ನವೀಕರಣಗಳು, ಹೊಸದಾಗಿ ಲಭ್ಯವಿರುವ ಪುಸ್ತಕಗಳು, ಸಂಪನ್ಮೂಲಗಳು, ಚಟುವಟಿಕೆಗಳು, ಪ್ರಕಟಣೆಗಳು ಮತ್ತು ಉಪಯುಕ್ತ ಮಾಹಿತಿಗಳನ್ನು ಹಂಚಿಕೊಳ್ಳಲು ವೇದಿಕೆಯಾಗಿ ಕಾರ್ಯನಿರ್ವಹಿಸಲಿದೆ ಎಂದು ವಿವರಿಸಿದರು.
ಗ್ರಂಥಪಾಲಕ ಪ್ರೊ.ಸಂಗಮ ಕರಾಳೆ, ಡಾ.ಕುಮಾರ ಚೌಗಲಾ, ಡಾ. ಸುನೀಲ ಹೆಬ್ಬಾಳೆ, ಡಾ.ಸುನೀಲ ಶಿಂಧೆ, ಡಾ. ಚಂದ್ರಕಾಅತ ಉಮರಾಣಿ, ಡಾ.ವಿರಣ್ಣಾ ಮೋದಿ, ಡಾ.ಜಗನ್ನಾಥ ಜಾಧವ, ಪ್ರೊ.ಸಂಗೀತಾ ವಾಟೆಗಾಂವಕರ, ಪ್ರೊ.ಪ್ರದೀಪ ಹೊದ್ಲೂರ, ಡಾ.ಅರವಿಂದ ದೇಶಿ, ಡಾ.ಸಂಜಯ ಪೂಜಾರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net