ಬಡ ಮಕ್ಕಳ ಶಿಕ್ಷಣಕ್ಕೆ ತುಲಾಭಾರ ಸೇವೆ ಹಣ

ಬಸವಕಲ್ಯಾಣ ತಾಲೂಕಿನ ಹಾರಕೂಡ ಶ್ರೀಮಠದಲ್ಲಿ ಭಕ್ತರಿಂದ ಆಯೋಜಿಸಿದ್ದ ಗುರು ವಂದನೆ ಹಾಗೂ 1001ನೇ ತುಲಾಭಾರ ಸಮಾರಂಭವನ್ನು ಪೀಠಾಧಿಪತಿ ಶ್ರೀ ಡಾ.ಚನ್ನವಿರ ಶಿವಾಚಾರ್ಯರು ಉದ್ಘಾಟಿಸಿದರು. ಮಲ್ಲಿನಾಥ ಹಿರೇಮಠ, ಸಿದ್ರಾಮಪ್ಪ ದೇಗಾಂವ, ಗುರುಲಿಂಗಪ್ಪ ಸೈದಾಪುರೆ, ಆನಂದರಾವ ಝಳಕೆ, ವೀರಣ್ಣ ಭೀಮಳ್ಳಿ, ಶೋಭಾತಿ ಝಳಕೆ, ಮಹೇಶ ದೇಗಾಂವ, ಗುರುಲಿಂಗಪ್ಪ ಮಿಣಜಗಿ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಶ್ರೀ ಡಾ.ಚನ್ನವಿರ ಶಿವಾಚಾರ್ಯ ನುಡಿ
  • ಹಾರಕೂಡ ಶ್ರೀಮಠದಲ್ಲಿ ಗುರುವಂದನೆ
ಬಸವಕಲ್ಯಾಣ: ತುಲಾಭಾರ ಸೇವೆಯಿಂದ ಅರ್ಪಿಸಿದ ದೇಣಿಗೆಯ ಹಣವನ್ನು ಬಡ, ದೀನ ದಲಿತ ಮಕ್ಕಳ ಶಿಕ್ಷಣಕ್ಕಾಗಿ ಬಳಸಲ್ಪಡುತ್ತದೆ ಎಂದು ಹಾರಕೂಡ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಶ್ರೀ ಡಾ.ಚನ್ನವಿರ ಶಿವಾಚಾರ್ಯರು ನುಡಿದರು.
ಹಾರಕೂಡ ಶ್ರೀಮಠದಲ್ಲಿ ಭಕ್ತರಿಂದ ಆಯೋಜಿಸಿದ್ದ ಗುರು ವಂದನೆ ಸಮಾರಂಭದಲ್ಲಿ 1001ನೇ ತುಲಾಭಾರ ಸೇವೆ ಸ್ವೀಕರಿಸಿದ ಆಶೀರ್ವಚನ ನೀಡಿದ ಶ್ರೀಗಳು, ಇಲ್ಲಿಯವರೆಗೆ ಒಂದು ಸಾವಿರ ತುಲಾಭಾರ ಸಮರ್ಪಿಸಿರುವುದು ಹಾರಕೂಡ ಮಠದ ಭಕ್ತರ ಅಚಲವಾದ ಗುರುಭಕ್ತಿಗೆ ಐತಿಹಾಸಿಕ ನಿದರ್ಶನವೆಂದು ಹೇಳಲು ನಮಗೆ ಖುಷಿ ಎನಿಸುತ್ತಿದೆ ಎಂದರು.
ಹಾರಕೂಡದ ಲಿಂಗೈಕ್ಯ ಚೆನ್ನಬಸವ ಶಿವಯೋಗಿಗಳ ಮಠದ ಪರಂಪರೆ ಹಾಗೂ ನಮ್ಮ ಮೇಲೆ ಲಾಂತರ ಭಕ್ತರು ಇಟ್ಟಿರುವ ಭಕ್ತಿ ಶ್ರದ್ಧೆಯಿಂದಾಗಿ ಹಾರಕೂಡ ಶ್ರೀಮಠ ಸದ್ವಿಕಾಸ ಹೊಂದಿ ಉತ್ತುಂಗ ಶ್ರೇಣಿಯ ದಾಸೋಹ ಹಾಗೂ ಆಧ್ಯಾತ್ಮಿಕ ತಾಣವಾಗಿ ಕಾಣಲು ಸಾಧ್ಯವಾಗಿದೆ. ತುಲಾಭಾರ ಸೇವೆ ನೆರವೇರಿಸಿದ ಹಾಗೂ ಸರ್ವಭಕ್ತರ ಬಾಳು ಶ್ರೇಯಸ್ಸಿನಿಂದ ಕೂಡಿರಲಿ ಎಂದು ಹಾರೈಸಿದರು.
ಪ್ರಮುಖರಾದ ಸಿದ್ರಾಮಪ್ಪ ದೇಗಾಂವ, ಮಲ್ಲಿನಾಥ ಹಿರೇಮಠ, ಆನಂದರಾವ ಝಳಕೆ, ಸೂರ್ಯಕಾಂತ ಬಿರಾದಾರ, ಮಂಜುನಾಥ ದೇಗಾಂವ, ವೀರಣ್ಣ ಭೀಮಳ್ಳಿ ಕಲಬುರಗಿ, ರಾಕೇಶ ಮಿಣಜಗಿ ರುಕ್ಮಾಪುರ ಸುರಪುರ, ಮಾಣಿಕಪ್ಪ ಶಾಂತಪ್ಪ ಮೆಂತೆ ಕಲಬುರಗಿ ಭಾಗವಹಿಸಿದ್ದರು. ಎಸ್​.ಎಂ.ಭಕ್ತ ಕುಂಬಾರ ಸ್ವಾಗತಿಸಿ ನಿರೂಪಣೆ ಮಾಡಿದರು. ಕಾರ್ತಿಕ ಸ್ವಾಮಿ ಯಲದುಗುಂಡಿ, ಶರಣಪ್ಪ ಜಮಾದಾರ ಪ್ರಾರ್ಥನೆ ಗೀತೆ ಹಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net