ಇದರಲ್ಲಿ 1 ಎಸಿ ಚೇರ್ ಕಾರ್, 12 ಸಾಮಾನ್ಯ ದರ್ಜೆ ಬೋಗಿಗಳು, 5 ದ್ವಿತೀಯ ದರ್ಜೆ ಸಿಟಿಂಗ್ ಚೇರ್ ಕಾರ್ ಬೋಗಿಗಳು, 1 ಜನರೇಟರ್ ಕಾರ್ ಹಾಗೂ 1 ದಿವ್ಯಾಂಗ ಸ್ನೇಹಿ ಕಂಪಾರ್ಟ್‌ಮೆಂಟ್ ಒಳಗೊಂಡ ಬ್ರೇಕ್ ವ್ಯಾನ್ ಇರಲಿವೆ. ಈ ಹೊಸ ಬೋಗಿಗಳು ಪ್ರಯಾಣಿಕರಿಗೆ ಹೆಚ್ಚಿನ ಸುರಕ್ಷತೆ, ಉತ್ತಮ ಸೌಕರ್ಯ ಮತ್ತು ಸುಧಾರಿತ ಸೌಲಭ್ಯ ಒದಗಿಸಲಿವೆ ಎಂದು ನೈಋತ್ಯ ಮೈಸೂರು ರೈಲ್ವೆ ವಿಭಾಗವು ಪ್ರಕಟಣೆಯಲ್ಲಿ ತಿಳಿಸಿದೆ.