ಸಸಿ ನೆಟ್ಟು ಪೋಷಿಸಲು ಜಿಬಿಎಗೆ ಪತ್ರ

ಅರಣ್ಯ ಸಚಿವ ಈಶ್ವರ್ ಬಿ. ಖಂಡ್ರೆ
ಅರಣ್ಯ ಸಚಿವ ಈಶ್ವರ್ ಬಿ. ಖಂಡ್ರೆ
Published on
ಬೆಂಗಳೂರು: ಮಳೆ, ಗಾಳಿಯಿಂದ ಬುಡ ಸಮೇತ ಬಿದ್ದಿರುವ ಮರಗಳ ಜಾಗದಲ್ಲಿ ಸಸಿ ನೆಟ್ಟು ಪೋಷಿಸುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರಿ(ಜಿಬಿಎ) ಮುಖ್ಯ ಆಯುಕ್ತರಿಗೆ ಅರಣ್ಯ ಸಚಿವ ಈಶ್ವರ್ ಬಿ. ಖಂಡ್ರೆ ಪತ್ರ ಬರೆದಿದ್ದಾರೆ.
ಜಿಬಿಎ ವ್ಯಾಪ್ತಿಯಲ್ಲಿ ಸುರಿದ ಬಿರುಗಾಳಿ ಮಳೆಗೆ ನೂರಾರು ಮರಗಳು ಧರೆಗುರುಳಿವೆ. ಈ ನಿಟ್ಟಿನಲ್ಲಿ ಗೆದ್ದಲು ಹಿಡಿದ, ಟೊಳ್ಳಾಗಿರುವ, ಬೇರು ಸಹಿತ ಬಾಗಿರುವಂತಹ ಅಪಾಯಕಾರಿ ಮರಗಳನ್ನು ಗುರುತಿಸಿ ತೆರವುಗೊಳಿಸಿ.
ಈಗಾಗಲೇ ಬುಡಸಮೇತ ಬಿದ್ದಿರುವ ವೃಕ್ಷಗಳ ಜಾಗದಲ್ಲಿ ಆಳವಾಗಿ ಬೇರು ಬಿಡುವ ಮತ್ತು ಹೆಚ್ಚು ಆಮ್ಲಜನಕ ನೀಡುವಂತಹ ಸಸಿಗಳನ್ನು ನೆಟ್ಟು ಪೋಷಿಸಬೇಕೆಂದು ಜಿಬಿಎ ಅರಣ್ಯ ವಿಭಾಗಕ್ಕೆ ನಿರ್ದೇಶನ ನೀಡುವಂತೆ ಪತ್ರದಲ್ಲಿ ಈಶ್ವರ್ ಖಂಡ್ರೆ ಉಲ್ಲೇಖಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net