ದೇಶದ ಪ್ರಗತಿಗೆ ಒಗ್ಗಟ್ಟಾಗಿ ಶ್ರಮಿಸೋಣ

ಚಂದರಗಿಯ ಎಸ್​.ಎಂ.ಕಲೂತಿ ಸಂಯುಕ್ತ ಕ್ರೀಡಾ ವಸತಿ ಶಾಲೆಯಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು. ಸಂಸ್ಥೆ ಅಧ್ಯೆ ಮೃಣಾಲಿನಿ ಪಟ್ಟಣ, ಎಸ್​.ಎನ್​.ಅಡಗಿಮನಿ, ಜೆ.ಬಿ.ಮೇಟಿ ಇತರರಿದ್ದರು.
ಚಂದರಗಿಯ ಎಸ್​.ಎಂ.ಕಲೂತಿ ಸಂಯುಕ್ತ ಕ್ರೀಡಾ ವಸತಿ ಶಾಲೆಯಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು. ಸಂಸ್ಥೆ ಅಧ್ಯೆ ಮೃಣಾಲಿನಿ ಪಟ್ಟಣ, ಎಸ್​.ಎನ್​.ಅಡಗಿಮನಿ, ಜೆ.ಬಿ.ಮೇಟಿ ಇತರರಿದ್ದರು.
Published on
ಕಟಕೋಳ: ದೇಶದ ದಿಕ್ಸೂಚಿ ಸಂವಿಧಾನವನ್ನು ಪ್ರತಿಯೊಬ್ಬರೂ ಅಧ್ಯಯನ ಮಾಡೋಣ. ಸಂಕುಚಿತ ಭಾವನೆ ತೊಡೆದು ದೇಶದ ಪ್ರಗತಿಗೆ ಒಗ್ಗಟ್ಟಾಗಿ ಶ್ರಮಿಸಬೇಕು ಎಂದು ಸ್ಪೋಕೋ ಸಂಸ್ಥೆ ಅಧ್ಯೆ ಮೃಣಾಲಿನಿ ಪಟ್ಟಣ ಹೇಳಿದರು. ಸಮೀಪದ ಚಂದರಗಿಯ ಎಸ್​.ಎಂ.ಕಲೂತಿ ಸಂಯುಕ್ತ ಕ್ರೀಡಾ ವಸತಿ ಶಾಲೆಯಲ್ಲಿ ಸೋಮವಾರ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಸ್ಪೋಕೋ ಸಂಸ್ಥೆ ನಿರ್ದೇಶಕ ಎಸ್​.ಆರ್​.ನವರಕ್ಕಿ ಮಾತನಾಡಿದರು. ಎನ್​ಸಿಸಿ ಅಧಿಕಾರಿ ಜೆ.ಬಿ.ಮೇಟಿ ನೇತೃತ್ವದಲ್ಲಿ 26ನೇ ಎನ್​ಸಿಸಿ ಬಟಾಲಿಯನ್​ ತಂಡದಿಂದ ಪಥಸಂಚಲನ ಜರುಗಿತು. ವಿದ್ಯಾರ್ಥಿ ರಮೇಶ ಗುದಗನ್ನವರ ಸಂವಿಧಾನ ಕುರಿತು ಸ್ವರಚಿತ ಕವನ
ಪ್ರಸ್ತುತಪಡಿಸಿದರು. ಸಂಸ್ಥೆ ನಿರ್ದೇಶಕ ಎಸ್​.ಎನ್​.ಅಡಗಿಮನಿ, ವ್ಯವಸ್ಥಾಪಕ ಜೆ.ಬಿ.ಮೇಟಿ, ಜೆ.ವಿ.ಮುರಗೋಡ, ಪ್ರಾಚಾರ್ಯರಾದ ಎಸ್​.ಬಿ.ಪಾಟೀಲ, ಪಿ.ಕೆ.ಪಾಟೀಲ, ಐ.ಎಸ್​.ಸೂಳಿಭಾವಿ ಇತರರಿದ್ದರು. ಶಿಕ ಓಂಕಾರ ಗೌಡರ ನಿರೂಪಿಸಿದರು. ಶಿವಾನಂದ ತೋರಣಗಟ್ಟಿ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net