ವಸತಿರಹಿತರಿಗೆ ಸೂರು ಕಲ್ಪಿಸಲು ಶ್ರಮಿಸೋಣ

ಸೇಡಂನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಆಶ್ರಯ ಸಮಿತಿ ಸದಸ್ಯರಾದ ಜನಾರ್ಧನರೆಡ್ಡಿ ತುಳೇರ, ವಿಲಾಸಗೌತಂ ನಿಡಗುಂದಾ, ಆರಿಫ್​ಖಾನ್​, ಹಣಮಂತಿ ಅವರನ್ನು ಸನ್ಮಾನಿಸಲಾಯಿತು. ಶರಣಯ್ಯಸ್ವಾಮಿ, ಗುಂಡಪ್ಪ ಯಡ್ಡಳ್ಳಿ, ಗ್ವಾಲೇಶ ಹೊನ್ನಾಳ್ಳಿ ಇದ್ದರು.
ಸೇಡಂನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಆಶ್ರಯ ಸಮಿತಿ ಸದಸ್ಯರಾದ ಜನಾರ್ಧನರೆಡ್ಡಿ ತುಳೇರ, ವಿಲಾಸಗೌತಂ ನಿಡಗುಂದಾ, ಆರಿಫ್​ಖಾನ್​, ಹಣಮಂತಿ ಅವರನ್ನು ಸನ್ಮಾನಿಸಲಾಯಿತು. ಶರಣಯ್ಯಸ್ವಾಮಿ, ಗುಂಡಪ್ಪ ಯಡ್ಡಳ್ಳಿ, ಗ್ವಾಲೇಶ ಹೊನ್ನಾಳ್ಳಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪೌರಾಯುಕ್ತ ಶರಣಯ್ಯಸ್ವಾಮಿ ಅಭಿಮತ
  • ಆಶ್ರಯ ಸಮಿತಿ ಸದಸ್ಯರಿಗೆ ಸನ್ಮಾನ
ಸೇಡಂ: ನಗರದಲ್ಲಿ ಸಾವಿರಾರು ಕುಟುಂಬ ಇಂದಿಗೂ ಸ್ವಂತ ಸೂರಿಲ್ಲದೆ ವಾಸಿಸುತ್ತಿದ್ದು, ಅವರಿಗೆ ಸೂರು ಕಲ್ಪಿಸುವ ನಿಟ್ಟಿನಲ್ಲಿ ಆಶ್ರಯ ಸಮಿತಿ ಸದಸ್ಯರು ಮತ್ತು ಅಧಿಕಾರಗಳಾದ ನಾವೆಲ್ಲರೂ ಸೇರಿ ಶ್ರಮಿಸೋಣ ಎಂದು ನಗರಸಭೆ ಪೌರಾಯುಕ್ತ ಶರಣಯ್ಯಸ್ವಾಮಿ ಹೇಳಿದರು.
ನಗರಸಭೆ ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಸರ್ಕಾರದಿಂದ ನಾಮನಿರ್ದೇಶನಗೊಂಡ ನಗರ ಆಶ್ರಯ ಸಮಿತಿಯ ಸದಸ್ಯರಿಗೆ ಸ್ವಾಗತ ಸಮಾರಂಭ ಹಾಗೂ ಆಶ್ರಯ ಸಮಿತಿ ಸಭೆಯಲ್ಲಿ ಮತನಾಡಿ, ಸೇಡಂ ದಿನಕಳೆದಂತೆ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದ್ದು, ಯಡ್ಡಳ್ಳಿ ಕ್ರಾಸ್​ನಲ್ಲಿ ನಿರ್ಮಾಣಗೊಳ್ಳುತ್ತಿರುವ ಸ್ಲಂಬೋರ್ಡ್​ನ 720ಮನೆಗಳ ಹಂಚಿಕೆಗೆ 800ಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿವೆ. ಮುಂಬರುವ ದಿನಗಳಲ್ಲಿ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ಕರೆದು ಫಲಾನುಭವಿಗಳ ಆಯ್ಕೆ ಮಾಡಲಾಗುವುದು. ಇದರೊಟ್ಟಿಗೆ ನಿವೇಶನ ನೀಡುವ ನಿಟ್ಟಿನಲ್ಲಿ ನಗರ ವ್ಯಾಪ್ತಿಯಲ್ಲಿ ಜಮೀನು ಹುಡುಕಾಟ ನಡೆಸಲಾಗುತ್ತಿದ್ದು, ನಿಮ್ಮ ಗಮನದಲ್ಲಿ ಜಮೀನುಗಳಿದ್ದರೆ ಪ್ರಸ್ತಾವನೆ ಸಲ್ಲಿಸುವಂತೆ ಮನವಿ ಮಾಡಿದರು.
ಆಶ್ರಯ ಸಮಿತಿ ಸದಸ್ಯ ವಿಲಾಸಗೌತಂ ನಿಡಗುಂದಾ ಮಾತನಾಡಿ, ನಗರ ವ್ಯಾಪ್ತಿಯಲ್ಲಿ ಈಗಾಗಲೇ ಎಷ್ಟು ಆಶ್ರಯ ಕಾಲನಿಗಳಿವೆ ? ಅಲ್ಲಿರುವ ನಿವೇಶನಗಳ ಸಂಖ್ಯೆ, ಹಂಚಿಕೆ ಆಗಿದ್ದು, ಖಾಲಿ ಉಳಿದಿರುವುದರ ಬಗ್ಗೆ ಸಮಗ್ರ ಮಾಹಿತಿ ಸದಸ್ಯರ ಗಮನಕ್ಕೆ ತರುವಂತೆ ತಿಳಿಸಿದರು.
ಸದಸ್ಯ ಆರೀಫ್​ಖಾನ್​ ಮಾತನಾಡಿ, ಕಳೆದ 20ವರ್ಷಗಳ ಹಿಂದೆ ನಗರದಲ್ಲಿ ಸೂರಿಲ್ಲದವರಿಗೆ ಹಂಚಿಕೆಯಾದ ನಿವೇಶನಗಳಿಗೆ ಎ&ಖಾತಾ ನೀಡುವ ಕಾರ್ಯ ಆರಂಭಿಸಲಾಗಿದೆಯೇ ? ಎಂದು ಪ್ರಶ್ನಿಸಿದರು. ಇದಕ್ಕುತ್ತರಿಸಿದ ಪೌರಾಯುಕ್ತ ಶರಣಯ್ಯಸ್ವಾಮಿ, ಕೆಲವು ಪ್ರದೇಶದಲ್ಲಿ ಡಬಲ್​ ಹಂಚಿಕೆಯಾಗಿದ್ದು, ಅಲ್ಲಿ ವಾಸ್ತವತೆ ಅರಿತು ಖಾತಾ ನೀಡುವ ನಿರ್ಧಾರ ಕೈಗೊಳ್ಳಲಾಗುತ್ತಿದೆ. ಆದರೆ 705 ಸರ್ವೇ ನಂಬರ್​ ಮತ್ತು ಇನ್​ಪೋಸಿಸ್​ ಕಾಲನಿಯಲ್ಲಿರುವವರಿಗೆ ಎ ಖಾತಾ ನೀಡಲಾಗುತ್ತಿದೆ ಎಂದರು.
ಆಶ್ರಯ ಸಮಿತಿ ಸದಸ್ಯರಾದ ಜನಾರ್ಧನರೆಡ್ಡಿ ತುಳೇರ, ಹಣಮಂತಿ ಶರಣಪ್ಪ, ಒಳಚರಂಡಿ ಮಂಡಳಿ ಎಇಇ ಮೇಘಾ, ಎಇ ಸಂಜೀವಕುಮಾರ ತಿರುಮಲ್​, ನಗರಸಭೆ ಸಿಬ್ಬಂದಿ ಗ್ವಾಲೇಶ ಹೊನ್ನಾಳಿ, ಗುಂಡಪ್ಪ ಯಡ್ಡಳ್ಳಿ, ಹಣಮಂತ, ಪೂಜಾ ಭಂಕಲಗಿ, ಪ್ರಿಯಾಂಕಾ ವಿಭೂತಿ, ಮಲ್ಲಿಕಾರ್ಜುನ, ಹಸನ್​ ಪಟೇಲ್​, ಕುಪ್ಪಣ್ಣ, ಫೈಮಿದಾ, ನಾಗರಾಜ, ಜಗದೀಶ ಮದನಕರ್​, ಗಣಪತಿ, ಕಲ್ಪನಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net