ಉಕ ಅಭಿವೃದ್ಧಿಗೆ ಚಿಂತನೆ ನಡೆಸಲಿ

ದಾನ ಸೇರಿ ಅನೇಕ ಬೇಡಿಕೆಗಳಿದ್ದು,
ದಾನ ಸೇರಿ ಅನೇಕ ಬೇಡಿಕೆಗಳಿದ್ದು,
Published on
ಗೋಕಾಕ: ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಹೋರಾಟ ನಡೆಯುತ್ತಿದ್ದು, ಸರ್ಕಾರ ಗಂಭೀರ ಚಿಂತನೆ ನಡೆಸಬೇಕಿದೆ ಎಂದು ಉತ್ತರ ಕರ್ನಾಟಕ ವಿಕಾಸ ವೇದಿಕೆ ಅಧ್ಯ ಅಶೋಕ ಪೂಜಾರಿ ಒತ್ತಾಯಿಸಿದರು. ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ, ಕಿತ್ತೂರು ಕರ್ನಾಟಕ ಅಭಿವದ್ಧಿ ಪ್ರಾಧಿಕಾರ ರಚನೆ, ವಿಶೇಷ ಅನುದಾನ ಸೇರಿ ಅನೇಕ ಬೇಡಿಕೆಗಳಿದ್ದು, ಡಿಸೆಂಬರ್​ ತಿಂಗಳಲ್ಲಿ ಈಡೇರದಿದ್ದರೆ ಜನವರಿಯಲ್ಲಿ ಹೋರಾಟ ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಚಳಿಗಾಲ ಅಧಿವೇಶನದಲ್ಲಿ ಕಬ್ಬು ಬೆಳೆಗಾರರ ಸಮಸ್ಯೆ, ನೀರಾವರಿ ಸಮಸ್ಯೆ ಸೇರಿ ಉತ್ತರ ಕರ್ನಾಟಕದ ಸಮಗ್ರ ಅಭಿವದ್ಧಿ ಬಗ್ಗೆ ಚರ್ಚೆ ನಡೆಸಬೇಕು ಎಂದರು. ಗೋಕಾಕ ಜಿಲ್ಲಾ ರಚನೆಗೆ ಆಗ್ರಹಿಸಿ ಡಿ.8ರಂದು ಸಂಜೆ 4 ಗಂಟೆಗೆ ಬೆಳಗಾವಿ ನಗರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲ್ಲಿಸಲಾಗುವುದು ಎಂದು ತಿಳಿಸಿದರು.
ಪ್ರೊ.ಅರ್ಜುನ ಪಂಗಣ್ಣವರ, ಉದಯ ಕರಜಿಗಿಮಠ, ನಿಂಗಪ್ಪ ಅಮಿನಬಾವಿ, ಪ್ರವಿಣ ನಾಯಿಕ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net