ಗೋವಿನ ಜೋಳ ಖರೀದಿ ಕೇಂದ್ರ ಆರಂಭಿಸಲಿ

 ಸರ್ಕಾರದ ಬೆಂಬಲ ಬೆಲೆಯಡಿ ಗೋವಿನ ಜೋಳ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಒತ್ತಾಯಿಸಿ ಸವದತ್ತಿಯಲ್ಲಿ ರೆತ ಸಂದ ವತಿಯಿಂದ ಗ್ರೇಡ್​&2 ತಹಸೀಲ್ದಾರ್​ ಎಂ.ಎನ್​.ಮಠದ ಅವರಿಗೆ ಮನವಿ ಸಲ್ಲಿಸಲಾಯಿತು. ಕ್ರುಸಾಬ ನದಾಫ್​, ಯಲ್ಲಪ್ಪ ಸಂಗ್ರೇಶಿ ಇತರರಿದ್ದರು.
ಸರ್ಕಾರದ ಬೆಂಬಲ ಬೆಲೆಯಡಿ ಗೋವಿನ ಜೋಳ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಒತ್ತಾಯಿಸಿ ಸವದತ್ತಿಯಲ್ಲಿ ರೆತ ಸಂದ ವತಿಯಿಂದ ಗ್ರೇಡ್​&2 ತಹಸೀಲ್ದಾರ್​ ಎಂ.ಎನ್​.ಮಠದ ಅವರಿಗೆ ಮನವಿ ಸಲ್ಲಿಸಲಾಯಿತು. ಕ್ರುಸಾಬ ನದಾಫ್​, ಯಲ್ಲಪ್ಪ ಸಂಗ್ರೇಶಿ ಇತರರಿದ್ದರು.
Published on
ಸವದತ್ತಿ: ಸರ್ಕಾರದ ಬೆಂಬಲ ಬೆಲೆಯಡಿ ಗೋವಿನ ಜೋಳ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಒತ್ತಾಯಿಸಿ ಪಟ್ಟಣದ ತಹಸೀಲ್ದಾರ್​ ಕಚೇರಿ ಎದುರು ಕರ್ನಾಟಕ ಪ್ರಾಂತ ರೆತ ಸಂದ ತಾಲೂಕು ಟಕದಿಂದ ಪ್ರತಿಭಟಿಸಿ ಗ್ರೇಡ್​&2 ತಹಸೀಲ್ದಾರ್​ ಎಂ.ಎನ್​.ಮಠದ ಅವರಿಗೆ ಮನವಿ ಸಲ್ಲಿಸಿದರು.
ಪ್ರಮುಖ ಕ್ರುಸಾಬ ನದಾಫ್​ ಮಾತನಾಡಿ, ಗೋವಿನ ಜೋಳ ಕ್ವಿಂಟಾಲ್​ಗೆ ಕೇಂದ್ರ ಸರ್ಕಾರ 2,410 ರೂ. ಬೆಲೆ ನಿಗದಿ ಮಾಡಿದೆ. ತಾಲೂಕಿನಲ್ಲಿ ಸುಮಾರು 11,000 ಹೆಕ್ಟೇರ್​ ಪ್ರದೇಶದಲ್ಲಿ ಗೋವಿನ ಜೋಳ ಬಿತ್ತನೆ ಮಾಡಿದ್ದು, ಬೆಳೆ ಕಟಾವು ಮಾಡಿ ಮಾರುಕಟ್ಟೆಗೆ ತಂದರೆ ಪ್ರತಿ ಕ್ವಿಂಟಾಲ್​ಗೆ ಕೇವಲ 1,700 ಗಳಿಂದ 1,800 ರೂ. ವರೆಗೆ ಮಾರಾಟವಾಗುತ್ತಿದೆ. ಬೆಳೆಗೆ ಖರ್ಚು ಮಾಡಿದ ಹಣವೂ ಸಹ ವಾಪಸ್​ ಆಗುತ್ತಿಲ್ಲ. ಕೂಡಲೇ ಮೆಕ್ಕೆಜೋಳ ಖರೀದಿ ಕೇಂದ್ರ ತೆರೆದು ಪ್ರತಿ ಕ್ವಿಂಟಾಲ್​ಗೆ 2,410 ರೂ. ದರ ನೀಡಬೇಕು. ರೈತರ ಸಮಸ್ಯೆಗೆ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.
ರೆತ ಸಂದ ತಾಲೂಕು ಟಕದ ಅಧ್ಯ ಬಿ.ಎಸ್​.ಕಪ್ಪನ್ನವರ ಮಾತನಾಡಿ, ರೆತರು ಬೆಳೆದ ಬೆಳೆಗೆ ಬೆಂಬಲ ಬೆಲೆ ನೀಡದೆ ಇರುವುದರಿಂದ ರೆತರು ಮಾರುಕಟ್ಟೆಯಲ್ಲಿ ಕನಿಷ್ಠ ಬೆಲೆಗೆ ಬೆಳೆ ಮಾರಿ ಜೀವನ ನಡೆಸಬೇಕಾಗಿದೆ. ರೆತರು ಸಂಕಷ್ಟದಲ್ಲಿದ್ದು, ಕೂಡಲೇ ಸರ್ಕಾರ ಖರೀದಿ ಕೇಂದ್ರ ತೆರೆಯಬೇಕು ಎಂದರು.
ರೆತ ಪ್ರಮುಖ ಯಲ್ಲಪ್ಪ ಸಂಗ್ರೇಶಿ, ಸಂದ ಕಾರ್ಯದರ್ಶಿ ಶಂಕ್ರಪ್ಪ ತೋರಗಲ, ಶ್ರೀಕಾಂತ ಹಟ್ಟಿಹೊಳಿ, ನಾಗಪ್ಪ ಪ್ರಭುನವರ, ಮಾಬಳೆಶ್ವರ ಬಣ್ಣನವರ, ಜಿ.ಬಿ. ಮುಳ್ಳೂರು, ಹನುಮಂತ ಕರಿ ಹಾಗೂ ರೆತರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net