ಭಾಲ್ಕಿಯಲ್ಲಿ ಹಮ್ಮಿಕೊಂಡಿದ್ದ ಮಾದಕ ವಸ್ತು ವಿರೋಧಿ ದಿನಾಚರಣೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ನಾಗಭೂಷಣ ಮಾಮಡಿ ಮಾತನಾಡಿದರು. ಸಂತೋಷ ಬಿ.ಜಿ. ಪಾಟೀಲ್, ದೀಪಕ್ ಠಮಕೆ, ಶಿವರಾಜ ಮಲ್ಲೇಶಿ ಇದ್ದರು. ನಾಗಭೂಷಣ ಮಾಮಡಿ ಮನವಿ > ಭಾಲ್ಕಿಯಲ್ಲಿ ಮಾದಕ ವಸ್ತು ವಿರೋಧಿ ದಿನಾಚರಣೆ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ನಾಗಭೂಷಣ ಮಾಮಡಿ ಮನವಿ
ಭಾಲ್ಕಿಯಲ್ಲಿ ಮಾದಕ ವಸ್ತು ವಿರೋಧಿ ದಿನಾಚರಣೆ
ಭಾಲ್ಕಿ: ಯುವಜನತೆ ಹಾಗೂ ವಿದ್ಯಾರ್ಥಿಗಳಲ್ಲಿ ಮಾದಕ ವಸ್ತುಗಳ ಬಳಕೆ ಹೆಚ್ಚುತ್ತಿರುವುದು ಸಮಾಜಕ್ಕೆ ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ನಾಗಭೂಷಣ ಮಾಮಡಿ ಕಳವಳ ವ್ಯಕ್ತಪಡಿಸಿದರು.
ಹಳೆಯ ಪಟ್ಟಣದ ಧಮೇರ್ಶ್ವರ ದೇವಸ್ಥಾನದಲ್ಲಿ ಶ್ರೀ ೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಮ್ಮಿಕೊಂಡಿದ್ದ ಮಾದಕ ವಸ್ತು ವಿರೋಧಿ ದಿನಾಚರಣೆಯಲ್ಲಿ ಮಾತನಾಡಿದ ಅವರು, ಮಾದಕ ವಸ್ತುಗಳ ಸೇವನೆಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಗಂಭೀರ ದುಷ್ಪರಿಣಾಮಗಳು ಉಂಟಾಗುತ್ತವೆ. ಅಲ್ಲದೆ ಕುಟುಂಬ, ಸಮಾಜ ಹಾಗೂ ದೇಶದ ಅಭಿವೃದ್ಧಿಗೂ ಇದು ಮಾರಕವಾಗಿದ್ದು, ಯುವಕರು ದುಶ್ಚಟಗಳಿಂದ ದೂರವಿದ್ದು, ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಜನಜಾಗೃತಿ ವೇದಿಕೆಯ ಮಾಧ್ಯಮ ಸಲಹೆಗಾರ ಸಂತೋಷ ಬಿ.ಜಿ. ಪಾಟೀಲ್ ಮಾತನಾಡಿ, ಶ್ರೀೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ನಗರ, ಗ್ರಾಮೀಣ ಭಾಗದ ಜನರ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡುತ್ತಿದೆ ಎಂದು ತಿಳಿಸಿದರು.
ವೇದಿಕೆಯ ಸದಸ್ಯರಾದ ದೀಪಕ್ ಠಮಕೆ, ಶಿವರಾಜ ಮಲ್ಲೇಶಿ ಅವರು ಮಾತನಾಡಿ, ಮಾದಕ ವಸ್ತುಗಳು ವ್ಯಕ್ತಿಯ ಭವಿಷ್ಯವನ್ನೇ ಹಾಳು ಮಾಡುವ ಶಕ್ತಿಯನ್ನು ಹೊಂದಿವೆ. ಆದ್ದರಿಂದ ಯುವಕರು ಮತ್ತು ವಿದ್ಯಾರ್ಥಿಗಳು ಅವುಗಳಿಂದ ಸಂಪೂರ್ಣ ದೂರವಿದ್ದು ಉತ್ತಮ ಜೀವನದತ್ತ ಸಾಗಬೇಕು ಎಂದರು.
ಯೋಜನೆಯ ತಾಲೂಕು ಯೋಜನಾಧಿಕಾರಿ ಸಂತೋಷ ನಾಯ್ಕ್, ರೇಣುಕಾ, ಶಿಲ್ಪಾ, ಶಿವಲೀಲಾ, ಪ್ರತಿಕಾ, ಮಂಜುಳಾ ಇತರರಿದ್ದರು. ಕಮಲಾಬಾಯಿ ಪ್ರಾರ್ಥನೆ ಗೀತೆ ಹಾಡಿದರು, ವಲಯ ಮೇಲ್ವಿಚಾರಕ ಶಿವಾನಂದ ಲಕಾಟೆ ನಿರೂಪಣೆ ಮಾಡಿದರು. ಸೇವಾ ಪ್ರತಿನಿಧಿ ಸುರೇಖಾ ಕಲಶೆಟ್ಟಿ ವಂದಿಸಿದರು.